For Quick Alerts
  ALLOW NOTIFICATIONS  
  For Daily Alerts

  ಕುಟುಂಬ ಬರಲ್ಲ, ಅಭಿಮಾನಿಗಳಿಂದಲೇ ಡಾ.ವಿಷ್ಣು 7ನೇ ಪುಣ್ಯಸ್ಮರಣೆ ಆಚರಣೆ!

  By Bharath Kumar
  |

  ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 7ನೇ ವರ್ಷದ ಪುಣ್ಯಸ್ಮರಣೆಯ ದಿನ ಹತ್ತಿರವಾಗಿದೆ. ಹೀಗಾಗಿ, ಕಳೆದ ಆರು ವರ್ಷಗಳಿಂದ ಅಭಿಮಾನ್ ಸ್ಟುಡಿಯೋದಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದ ಆಚರಣೆ, ಈ ವರ್ಷವೂ ಇರುತ್ತಾ ಎಂಬ ಅನುಮಾನ ಕಾಡಿತ್ತು. ಆದ್ರೆ, ಈ ಪ್ರೆಶ್ನೆಗಳಿಗೆ ವಿಷ್ಣು ಅಭಿಮಾನಿಗಳು ಉತ್ತರ ಕೊಟ್ಟಿದ್ದು, ಅಭಿಮಾನಿಗಳಿಂದಲೇ ಈ ಬಾರಿ ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ ಆಚರಿಸಲಾಗುತ್ತೆ ಎಂದಿದ್ದಾರೆ.

  ಆದ್ರೆ, ಕುಟುಂದವರ ನಿರ್ಧಾರವೇ ಬೇರೆಯಾಗಿದೆ. ವಿಷ್ಣು ಅವರ 66ನೆ ಹುಟ್ಟುಹಬ್ಬದ ಸಂದರ್ಭದಲ್ಲೂ ಕುಟುಂಬದವರು ಅಭಿಮಾನ್ ಸ್ಟುಡಿಯೋದ ಬಳಿ ಬಂದಿಲ್ಲ. ಈ ಬಾರಿಯೂ ಬರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.[ವಿಷ್ಣು ಅಭಿಮಾನಿಗಳಿಗೆ ನಟಿ ಭಾರತಿ ವಿಷ್ಣುವರ್ಧನ್ ಬರೆದ ಬಹಿರಂಗ ಪತ್ರ ]

  ಕುಟುಂಬದವರು ಬರಲಿ ಅಥವಾ ಬರದೆ ಇರಲಿ, ಅಭಿಮಾನಿಗಳೇ ಸೇರಿ ವಿಷ್ಣುದಾದ ಅವರ ಪುಣ್ಯ ಸ್ಮರಣೆಯನ್ನ ಅವರ ಪುಣ್ಯ ಭೂಮಿಯಲ್ಲೇ ಆಚರಸಲು ನಿರ್ಧರಿಸಿದ್ದಾರೆ. ಈ ಬಗ್ಗೆ 'ವಿಷ್ಣು ಸೇನಾ ಸಮಿತಿ' ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಅವರು ಇಂದು (ಡಿಸೆಂಬರ್ 24) ಸುದ್ದಿಗೋಷ್ಠಿ ಮಾಡಿ, ಹಲವು ವಿಚಾರಗಳನ್ನ ಹಂಚಿಕೊಂಡರು.

  ಡಾ.ವಿಷ್ಣು ಅವರ 7ನೇ ಪುಣ್ಯ ಸ್ಮರಣೆ

  ಡಾ.ವಿಷ್ಣು ಅವರ 7ನೇ ಪುಣ್ಯ ಸ್ಮರಣೆ

  ಡಾ.ವಿಷ್ಣುವರ್ಧನ್ ಅವರ 7ನೇ ವರ್ಷದ ಪುಣ್ಯ ಸ್ಮರಣೆಯನ್ನ ಅಭಿಮಾನಿಗಳೇ ಆಚರಿಸಲು ನಿರ್ಧರಿಸಲಾಗಿದೆ. ಇದೇ ಡಿಸೆಂಬರ್ 30ರಂದು ವಿಷ್ಣುದಾದ ಅವರ 7ನೇ ವರ್ಷದ ಪುಣ್ಯ ಸ್ಮರಣೆಯ ದಿನವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನ್ ಸ್ಟುಡಿಯೋದಲ್ಲೇ ಸಂಪ್ರದಾಯವಾಗಿ ಆಚರಿಸಲಾಗುವುದಂತೆ.

  ಅಭಿಮಾನಿಗಳಿಂದಲೇ ಆಚರಣೆ

  ಅಭಿಮಾನಿಗಳಿಂದಲೇ ಆಚರಣೆ

  ಸ್ಮಾರಕ ವಿವಾದಕ್ಕೆ ಸಂಬಂಧಿಸದಂತೆ ಅಭಿಮಾನ್ ಸ್ಟುಡಿಯೋಗೆ ಕಾಲಿಡುವುದಿಲ್ಲ ಎಂದು ವಿಷ್ಣುವರ್ಧನ್ ಅವರ ಕುಟುಂಬಸ್ಥರು ನಿರ್ಧರಿಸಿದ್ದರು. ಈ ಹಿನ್ನಲೆಯಲ್ಲಿ ವಿಷ್ಣು ಅವರ 66ನೇ ಹುಟ್ಟುಹಬ್ಬವನ್ನ ಅಭಿಮಾನಿಗಳೇ ಆಚರಿಸಿದ್ದರು. ಈಗಲೂ ಪುಣ್ಯಸ್ಮರಣೆಗೆ ಕುಟುಂಬಸ್ಥರು ಬರುವುದು ಅನುಮಾನ. ಹೀಗಾಗಿ ಅಭಿಮಾನಿಗಳೇ ಆಚರಿಸಲು ನಿರ್ಧರಿಸಿದ್ದಾರೆ.

  ಕಟುಂಬದವರು ಬರಲ್ಲ!

  ಕಟುಂಬದವರು ಬರಲ್ಲ!

  ವಿಷ್ಣುವರ್ಧನ್ ಸ್ಮಾರಕ ವಿಚಾರದಿಂದ ಮನನೊಂದಿರುವ ಭಾರತಿ ವಿಷ್ಣುವರ್ಧನ್ ಅವರು ವಿಷ್ಣು ಅವರ 66ನೇ ಹುಟ್ಟುಹಬ್ಬವನ್ನ ತಮ್ಮ ಜೆಪಿ ನಗರದ ನಿವಾಸದಲ್ಲೇ ಸಂಭ್ರಮಿಸಿದ್ದರು. ಹೀಗಾಗಿ, ಪುಣ್ಯಸ್ಮರಣೆಯನ್ನೂ ಕೂಡ ಅವರ ನಿವಾಸದಲ್ಲಿ ನೆರೆವೇರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

  ಪ್ರತಿ ವರ್ಷದಂತೆ ಸಾಮಾಜಿಕ ಕಾರ್ಯಗಳು!

  ಪ್ರತಿ ವರ್ಷದಂತೆ ಸಾಮಾಜಿಕ ಕಾರ್ಯಗಳು!

  ಇನ್ನೂ ಪ್ರತಿವರ್ಷದಂತೆ ಈ ವರ್ಷವೂ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು ನಡೆಯುತ್ತಿದ್ದವೋ, ಆ ಕಾರ್ಯಕ್ರಮಗಳು ಈ ವರ್ಷವೂ ನೆರೆವೇರಲಿದ್ದು, ವಿಷ್ಣು ಸೇನಾ ಸಮಿತಿ ನೇತೃತ್ವ ವಹಿಸಿಲಿದೆ. ನೇತ್ರದಾನ, ರಕ್ತದಾನ, ಉಚಿತ ಚಿಕಿತ್ಸೆಯ ಜೊತೆಗೆ ಊಟದ ವ್ಯವಸ್ಥೆಯ ಕೂಡ ಹಮ್ಮಿಕೊಳ್ಳಲಾಗುವುದಂತೆ.

  ಮೈಸೂರಿನಲ್ಲಿ ವಿಷ್ಣು ಸ್ಮಾರಕ !

  ಮೈಸೂರಿನಲ್ಲಿ ವಿಷ್ಣು ಸ್ಮಾರಕ !

  ಈಗಾಗಲೇ ಸರ್ಕಾರ ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಜಾಗ ನೀಡಿದ್ದು, ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಕೂಡ ಚಾಲನೆ ನೀಡಿದೆ. ಹೀಗಾಗಿ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ.['ವಿಷ್ಣು ಸ್ಮಾರಕ' ನಿರ್ಮಾಣಕ್ಕೆ ಮೈಸೂರಿನಲ್ಲೂ ಭೂ-ವಿವಾದ ]

  ಬೆಂಗಳೂರಿನಲ್ಲೇ ಸ್ಮಾರಕಕ್ಕೆ ಅಭಿಮಾನಿಗಳು ಪಟ್ಟು!

  ಬೆಂಗಳೂರಿನಲ್ಲೇ ಸ್ಮಾರಕಕ್ಕೆ ಅಭಿಮಾನಿಗಳು ಪಟ್ಟು!

  ಆದ್ರೆ, ಪಟ್ಟು ಬಿಡದ ಅಭಿಮಾನಿಗಳು ಬೆಂಗಳೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡಲಿ ಅಥವಾ ಅಭಿಮಾನ್ ಸ್ಟುಡಿಯೋ ಜಾಗವನ್ನ ಬಿಟ್ಟು ಕೊಡಲಿ ನಾವೇ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಆಗ್ರಹಿಸುತ್ತಿದ್ದಾರೆ.[ಡಿಸೆಂಬರ್ 6 ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಶಿಲಾನ್ಯಾಸ]

  ಪರ್ಯಾಯ ಸ್ಮಾರಕ ಕಟ್ಟುತ್ತೇವೆ!

  ಪರ್ಯಾಯ ಸ್ಮಾರಕ ಕಟ್ಟುತ್ತೇವೆ!

  ಒಂದು ಪಕ್ಷ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಬಿಟ್ಟಿಲ್ಲವೆಂದರೇ, ನಮ್ಮಲ್ಲಿಯೂ ಭಸ್ಮಯಿದೆ. ಬೆಂಗಳೂರಿನ ಬೇರೆ ಸ್ಥಳದಲ್ಲಿ ಪರ್ಯಾಯವಾಗಿ ಸಮಾರಕ ಕಟ್ಟುತ್ತೇವೆ ಎಂದು ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

  English summary
  Vishnu Sena Samithi Decided to celebrate Legendary Actor Dr Vishnuvardhan 7th Death anniversary at Abhiman studio on December 30th. Vishnuvardhan Family won’t be celebrating the legend’s Birth and Death Anniversary at Abhiman studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X