»   » ವಿಷ್ಣು ಅಭಿಮಾನಿಯ ಈ ಅಭಿಮಾನಕ್ಕೆ ಏನು ಹೇಳಿದರೂ ಕಮ್ಮಿಯೇ ಬಿಡಿ.!

ವಿಷ್ಣು ಅಭಿಮಾನಿಯ ಈ ಅಭಿಮಾನಕ್ಕೆ ಏನು ಹೇಳಿದರೂ ಕಮ್ಮಿಯೇ ಬಿಡಿ.!

Posted By:
Subscribe to Filmibeat Kannada

ದಿ ಮ್ಯಾನ್ ಆಫ್ ಮಿಲಿಯನ್ ಹಾರ್ಟ್ಸ್... ಕೋಟಿಗೊಬ್ಬ... ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನೆಲ್ಲಾ ಅಗಲಿ ವರ್ಷಗಳೇ ಉರುಳಿದರೂ ಅಭಿಮಾನಿಗಳ ಹೃದಯದಲ್ಲಿ ಮಾತ್ರ 'ಯಜಮಾನ' ಸದಾ ಹಚ್ಚ ಹಸಿರು.

ಅಭಿಮಾನಿಗಳ ಪಾಲಿಗೆ ಡಾ.ವಿಷ್ಣುವರ್ಧನ್ ರವರೇ 'ಆರಾಧ್ಯ ದೈವ'. ದೇವರಿಗಿಂತ ಡಾ.ವಿಷ್ಣುವರ್ಧನ್ ರವರನ್ನೇ ಹೆಚ್ಚಾಗಿ ಪೂಜಿಸುವ ಅಪ್ಪಟ 'ಭಕ್ತರು' ಆಗಲೂ ಇದ್ದರು, ಈಗಲೂ ಇದ್ದಾರೆ. ಬೇಕಾದರೆ, ಈ ಫೋಟೋ ನೋಡಿರಿ...

ಸ್ವಂತ ಮನೆ ಮುಂದೆ ಡಾ.ವಿಷ್ಣುವರ್ಧನ್ ಭಾವ ಚಿತ್ರ

ಡಾ.ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿಯೊಬ್ಬರು ಕಟ್ಟಿಸಿರುವ ತಮ್ಮ ಸ್ವಂತ ಮನೆಯ ಮುಂಭಾಗದಲ್ಲಿ ಡಾ.ವಿಷ್ಣುವರ್ಧನ್ ರವರ ಚಿತ್ರ ಹಾಕಿ ಅಭಿಮಾನ ಮೆರೆದಿದ್ದಾರೆ.

ವಿಷ್ಣು ಅಭಿಮಾನಿಯ ಈ ಅಭಿಮಾನಕ್ಕೆ ಏನ್ ಹೇಳ್ಬೇಕು.!

ಎಲ್ಲರೂ ಮೂಕವಿಸ್ಮಿತ

ಇತ್ತೀಚೆಗಷ್ಟೇ ಈ ಮನೆಯ ಗೃಹಪ್ರವೇಶ ಸಮಾರಂಭ ನಡೆದಿದ್ದು, ಅತಿಥಿಗಳಾಗಿ ಆಗಮಿಸಿದ ಕುಟುಂಬಸ್ಥರು, ಗೆಳೆಯರೆಲ್ಲ ಡಾ.ವಿಷ್ಣುವರ್ಧನ್ ರವರ ಅಭಿಮಾನಿಯ ಅಭಿಮಾನಿವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.

ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್

ಹೆಚ್ಚಿನ ಮಾಹಿತಿ ಇಲ್ಲ

ಅಂದ್ಹಾಗೆ, ಆ ವಿಷ್ಣುವರ್ಧನ್ ಅವರ ಅಭಿಮಾನಿ ಯಾರು.? ಡಾ.ವಿಷ್ಣುವರ್ಧನ್ ರವರ 'ಸಿಂಹಾದ್ರಿಯ ಸಿಂಹ' ಚಿತ್ರ ಇರುವ ಮನೆ ಎಲ್ಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಅಭಿಮಾನಕ್ಕೆ ಏನು ಹೇಳಿದರೂ ಕಮ್ಮಿಯೇ

ಡಾ.ವಿಷ್ಣುವರ್ಧನ್ ರವರನ್ನ ದೇವರಂತೆ ಕಾಣುತ್ತಿರುವ ಅಭಿಮಾನಿಯ (ಹೆಸರು ಗೊತ್ತಿಲ್ಲ) ಅಭಿಮಾನಕ್ಕೆ ಏನು ಹೇಳಿದರೂ ಕಮ್ಮಿಯೇ... ಅಂದ್ಹಾಗೆ, ಈ ಫೋಟೋವನ್ನ 'ಡಾ.ವಿಷ್ಣು ಸೇನಾ ಸಮಿತಿ-ಶ್ರೀನಗರ' ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

English summary
In pic: Check out Dr.Vishnuvardhan Hard core fan's House Warming Ceremony picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada