For Quick Alerts
ALLOW NOTIFICATIONS  
For Daily Alerts

  ಆರ್.ಚಂದ್ರು ವಿರುದ್ಧ ಘರ್ಜಿಸಿದ ಸಾಹಸ'ಸಿಂಹ' ಫ್ಯಾನ್ಸ್: ಏನಿದು ಹೊಸ ವಿವಾದ.?

  By Harshitha
  |

  ಸ್ಯಾಂಡಲ್ ವುಡ್ ನಲ್ಲಿ 'ತಾಜ್ ಮಹಲ್', 'ಪ್ರೇಮ್ ಕಹಾನಿ', 'ಚಾರ್ಮಿನಾರ್', ಅಂತಹ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಆರ್.ಚಂದ್ರು, 'ಬ್ಲಾಕ್ ಕೋಬ್ರಾ' ದುನಿಯಾ ವಿಜಯ್ ಗಾಗಿ 'ಕನಕ' ಎಂಬ ಚಿತ್ರವನ್ನ ರೆಡಿ ಮಾಡುತ್ತಿದ್ದಾರೆ.

  ಈಗಾಗಲೇ ಜಗಜ್ಜಾಹೀರಾಗಿರುವ ಹಾಗೆ 'ಕನಕ'.. ಅಣ್ಣಾವ್ರ ಅಭಿಮಾನಿ.! 'ಕನಕ' ಚಿತ್ರದ ಮೂಲಕ ಡಾ.ರಾಜ್ ಕುಮಾರ್ ಅಭಿಮಾನಿಯೊಬ್ಬರ ನೈಜ ಕಥೆಯನ್ನ ತೆರೆಮೇಲೆ ತರಲು ಹೊರಟಿರುವ ಆರ್.ಚಂದ್ರು, ಮೊನ್ನೆಯಷ್ಟೇ ಸಾಂಗ್ ರೆಕಾರ್ಡಿಂಗ್ ಪೂಜೆ ನೆರವೇರಿಸಿದ್ದರು. ಇದರ ಜೊತೆಗೆ 'ಕನಕ' ಚಿತ್ರದ ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು.

  ಆ ಪೋಸ್ಟರ್ ನಲ್ಲಿ ಬರೆದಿರುವ 'ಗರ್ಜಿಸೋ ಸಿಂಹಾನೂ ಬಗುದ್ಬಿಡ್ತೀನಿ' ಎಂಬ ಸಾಲು ಈಗ ವಿವಾದದ ಕೇಂದ್ರಬಿಂದುವಾಗಿದೆ. ಇದೇ ಕಾರಣಕ್ಕೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳು ಆರ್.ಚಂದ್ರು ವಿರುದ್ಧ ಸಿಡಿದೆದ್ದಿದ್ದಾರೆ. ಮುಂದೆ ಓದಿ....

  ಗರಂ ಆಗಿರುವ ವಿಷ್ಣು ಅಭಿಮಾನಿಗಳು.!

  'ಕನಕ' ಚಿತ್ರದ ಪೋಸ್ಟರ್ ನಲ್ಲಿ 'ಪ್ರೀತೀಲಿ ಬಂದ್ರೆ, ಇಲಿಗೂ ಬಗ್ತೀನಿ. ಗಾಂಚಲಿ ಮಾಡಿದ್ರೆ, ಗರ್ಜಿಸೋ ಸಿಂಹಾನೂ ಬಗುದ್ಬಿಡ್ತೀನಿ' ಎಂಬ ಸಾಲು ಬಳಸಲಾಗಿದೆ. ಇದನ್ನ ನೋಡಿ 'ಸಾಹಸ ಸಿಂಹ' ಫ್ಯಾನ್ಸ್ ಗರಂ ಆಗಿದ್ದಾರೆ. ಅದರಲ್ಲೂ ಆರ್.ಚಂದ್ರು ವಿರುದ್ಧ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಗುಡುಗಿದ್ದಾರೆ. ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಹಾಕಿರುವ ಸುದೀರ್ಘ ಸ್ಟೇಟಸ್ ನ ಯಥಾವತ್ ರೂಪ ಇಲ್ಲಿದೆ. ಓದಿರಿ....

  'ಅಭಿಮಾನಿಗಳ ವಾರ್' ಇತಿಹಾಸ

  ''ಡಾ.ರಾಜ್ ಮತ್ತು ಡಾ.ವಿಷ್ಣು ಅಭಿಮಾನಿಗಳ ನಡುವಿನ ಜಗಳಗಳಿಗೆ ಬಹಳ ದೊಡ್ಡ ಇತಿಹಾಸವಿದೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಆ ಮಟ್ಟದ "ಅಭಿಮಾನಿಗಳ ವಾರ್" ಬೇರೆಲ್ಲೂ ಆಗಿಲ್ಲ ಅನಿಸುತ್ತೆ. ಆದ್ರೆ ಯಾವಾಗ ಆ ಇಬ್ಬರೂ ಮಹನೀಯರು ನಮ್ಮಿಂದ ದೂರವಾದರೋ, ಆ ಘಳಿಗೆಯಿಂದಲೇ ಅಭಿಮಾನಿಗಳಲ್ಲೂ ಕೆಲವೊಂದು ಧನಾತ್ಮಕ ಬದಲಾವಣೆಗಳು ಆದವು ಅನಿಸುತ್ತೆ'' - ವೀರಕಪುತ್ರ ಶ್ರೀನಿವಾಸ್

  ಇಂದು ದ್ವೇಷ, ವೈಷಮ್ಯ ಇಲ್ಲ.!

  ''ಇವತ್ತು ಅಂತಹ ದೊಡ್ಡ ದ್ವೇಷ, ವೈಷಮ್ಯಗಳು ಯಾರಲ್ಲೂ ಇಲ್ಲ. ವೈಯುಕ್ತಿಕವಾಗಿ ನನ್ನ ಅನೇಕ ಕೆಲಸಗಳಿಗೆ ಡಾ.ರಾಜ್ ಅವರ ಅಭಿಮಾನಿಗಳು ಮಾರ್ಗದರ್ಶಕರಾಗಿ, ಪ್ರೋತ್ಸಾಹಕರಾಗಿ ಜೊತೆ ನಿಂತಿದ್ದಾರೆ. ಹಾಗೆ ನಾವೂ ಸಹ ರಾಜ್ ಅಭಿಮಾನಿಗಳ ಅನೇಕ ಕೆಲಸಗಳಿಗೆ ಪ್ರೋತ್ಸಾಹದ ಜೊತೆ ನೀಡಿದ್ದೇವೆ'' - ವೀರಕಪುತ್ರ ಶ್ರೀನಿವಾಸ್

  ಶಿವಣ್ಣ ನಾಂದಿ ಹಾಡಿದ ಉತ್ತಮ ಬೆಳವಣಿಗೆ

  ''ಇದಕ್ಕೆ ಪೂರಕವೆಂಬಂತೆ ಮೊನ್ನೆ ಮೊನ್ನೆ ಡಾ.ಶಿವರಾಜ್ ಅವರು ಕೂಡ "ವಿಷ್ಣು ಅಭಿಮಾನಿಯಾಗಿ ಶ್ರೀಕಂಠ ಸಿನಿಮಾದಲ್ಲಿ" ಕಾಣಿಸಿಕೊಂಡು ಉತ್ತಮ ಬೆಳವಣಿಗೆಗೆ ನಾಂದಿ ಹಾಡಿದ್ದರು'' - ವೀರಕಪುತ್ರ ಶ್ರೀನಿವಾಸ್

  ಆರ್.ಚಂದ್ರು ಎಡವಟ್ಟು

  ''ಈ ಮಧ್ಯೆ ಕನ್ನಡದ ಯಶಸ್ವಿ ನಿರ್ದೇಶಕ ಆರ್.ಚಂದ್ರು" ಅವರು ಎಡವಟ್ಟಿನ ಕೆಲಸ ಮಾಡಿದರು ಅನಿಸುತ್ತಿದೆ. ಅವರ ಹೊಸಚಿತ್ರ "ಕನಕ' ಇವತ್ತು ಘೋಷಣೆಯಾಗಿದೆ. ಅದರ ಟ್ಯಾಗ್ ಲೈನ್ "ಅಣ್ಣಾವ್ರ ಅಭಿಮಾನಿ" ಅಂತಿದೆ. ಆದರೆ ಟೈಟಲ್ ಮೇಲೆ #ಗರ್ಜಿಸೋ_ಸಿಂಹಾನದ್ರೂ_ಬಗುದುಬಿಡ್ತೀನಿ.. ಎನ್ನುವ ಡೈಲಾಗ್ ಇದೆ'' - ವೀರಕಪುತ್ರ ಶ್ರೀನಿವಾಸ್ [ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?]

  'ಸಿಂಹ' ಅಂದ್ರೆ ಇನ್ಯಾರು.?

  ''ಚಂದ್ರು ಸರ್, ಸಿನಿಮಾಗಳಲ್ಲಿ ತುಂಬಾ ಹೀರೋಗಳು "ನಾನು ಸಿಂಹ" ಅಂತ ಡೈಲಾಗ್ ಹೊಡೀತಾರೆ ಆದರೆ "ಕರ್ನಾಟಕದಲ್ಲಿ ಸಿಂಹ ಅಂದ್ರೆ ವಿಷ್ಣುದಾದಾ ಮಾತ್ರ ನೆನಪಾಗ್ತಾರೆ" ಅನ್ನೋದು ನಿಮಗೆ ಗೊತ್ತಿಲ್ಲದ ವಿಷ್ಯವೇನಲ್ಲ.ಅಂತಹುದರಲ್ಲಿ "ಅಣ್ಣಾವ್ರ ಅಭಿಮಾನಿ" ಅನ್ನುವ ಟ್ಯಾಗ್ಲೈನ್ ಇರೋ ಸಿನಿಮಾದಲ್ಲಿ "ಗರ್ಜಿಸೋ_ಸಿಂಹಾನ_ಬಗುದುಬಿಡ್ತೀನಿ ಅನ್ನೋ ಡೈಲಾಗ್ ಎಷ್ಟು ಸರಿ.?? ಅಭಿಮಾನಿಗಳು ಅದನ್ನು ಯಾವ ರೀತಿ ಸ್ವೀಕರಿಸ್ತಾರೆ ಅನ್ನೋ ವಿಷ್ಯ ನಿಮಗೆ ಗೊತ್ತಿಲ್ಲವೇ??'' - ವೀರಕಪುತ್ರ ಶ್ರೀನಿವಾಸ್

  'ಡೈಲಾಗ್' ಅಂತ ಅಂದುಕೊಳ್ಳಲು ಸಾಧ್ಯ ಇಲ್ಲ!

  ''ಇಲ್ಲ, ಇದು ಸಿನಿಮಾ ಡೈಲಾಗ್ ಮಾತ್ರ! ಅದಕ್ಕೂ ಇದಕ್ಕೂ ಸಂಬಂಧವಿಲ್ಲ!! ಅನ್ನೋದು ನಿಮ್ಮ ಉತ್ತರವೇ?

  ಹಾಗಾದರೆ, ಎಲ್ರ ಕಾಲು ಎಳೀತದೆ ಕಾಲ ಅಂತ ಉಪ್ಪಿ ಹೇಳ್ದಾಗ ಎಷ್ಟು ಜನ ಅದನ್ನು ಸಿನಿಮಾ ಡೈಲಾಗ್ ಅಂದ್ಕೊಂಡ್ರು??? ನಂದು ಮಾತ್ರ ಹವಾ ಅಂತ ಯಶ್ ಹೇಳ್ದಾಗ ಎಷ್ಟು ಜನ ಅದನ್ನು ಸಿನಿಮಾ ಡೈಲಾಗ್ ಅಂದ್ಕೊಂಡ್ರು??

  ಇಲ್ಲ ಸರ್, ಯಾರೂ ಅದನ್ನು ಸಿನಿಮಾ ಡೈಲಾಗ್ ಅಂದುಕೊಳ್ಳಲಿಲ್ಲ. Infact, ಅವುಗಳನ್ನು ಬರೆದೋರು, ಹೇಳ್ದೋರು ಕೂಡ ಅದು ಸಿನಿಮಾ ಡೈಲಾಗ್ ಅಂತ ಹೇಳಲಿಲ್ಲ!! ಅವರವರ ಉದ್ದೇಶಗಳು ಅವರಿಗಿದ್ದವು. ಅದೇ ತರ ಈಗ ನಿಮ್ಮ ಉದ್ದೇಶ, ಲೆಕ್ಕಾಚಾರ ನಿಮಗಿದೆ ಅನಿಸುತ್ತಿದೆ ನನಗೆ'' - ವೀರಕಪುತ್ರ ಶ್ರೀನಿವಾಸ್

  ಅಭಿಮಾನಿಗಳು ಭಾವುಕರು!

  ''ಸಿನಿ ಅಭಿಮಾನಿಗಳು ತುಂಬಾ ಭಾವುಕರು ಸರ್. ತಮ್ಮ ಹೀರೋಗೆ ಸಂಬಂಧಪಟ್ಟ ಪ್ರತಿವಿಷಯವೂ ಅವರಿಗೆ ದೊಡ್ಡದೇ ಆಗಿರುತ್ತದೆ. ತಾಯಿಪ್ರೀತಿ ನಂತರದ ಸ್ಥಾನ ನಾನು ಯಾವುದಕ್ಕಾದರೂ ಕೊಡ್ತೀನಿ ಅಂದ್ರೆ ಅದು "ಅಭಿಮಾನಿ ಪ್ರೀತಿ"ಗೆ. ಎಷ್ಟು ನಿಸ್ವಾರ್ಥವಾಗಿ ಪ್ರೀತಿಸ್ತಾನೆ ಆತ. ಎಷ್ಟು ಶ್ರದ್ಧೆಯಿಂದ ಸಾಮಾನ್ಯನನ್ನು ಸ್ಟಾರ್ ಆಗಿಸುತ್ತಾನೆ ಆತ! ಅಂತಹ ಅಭಿಮಾನಿಯ ಭಾವನೆಗಳ ಜೊತೆ ಆಟವಾಡುವುದು ಸರಿಯೇ ಸರ್..??'' - ವೀರಕಪುತ್ರ ಶ್ರೀನಿವಾಸ್ ['ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಆರ್ ಚಂದ್ರು ಹೊಸ ಸಿನಿಮಾ]

  ಡೈಲಾಗ್ ಬದಲಾಯಿಸಿ

  ''ಪ್ಲೀಸ್. ನಿಮ್ಮ ಡೈಲಾಗ್ ಬದಲಾಯಿಸಿ. ಈಗ ತಾನೇ ತಿಳಿಯಾಗುತ್ತಿರುವ ಕೊಳಕ್ಕೆ ಕಲ್ಲೆಸೆದು, ಮತ್ತೆ ರಾಡಿಯೆಬ್ಬಿಸಬೇಡಿ. ಇದನ್ನು ಮನವಿ ಅಂತಾನೇ ಅಂದ್ಕೊಳ್ಳಿ'' - ವೀರಕಪುತ್ರ ಶ್ರೀನಿವಾಸ್ [ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!]

  ಸಂಪೂರ್ಣ ಸ್ಟೇಟಸ್ ನೋಡಿ

  ತಮ್ಮ ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಹಾಕಿರುವ ಸುದೀರ್ಘ ಸ್ಟೇಟಸ್ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ...

  ಆರ್.ಚಂದ್ರು ಪ್ರತಿಕ್ರಿಯೆ ಏನು.?

  ಡಾ.ವಿಷ್ಣುವರ್ಧನ್ ಅಭಿಮಾನಿಗಳ ಈ ಅಭಿಪ್ರಾಯಕ್ಕೆ ಆರ್.ಚಂದ್ರು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ ಓದಿರಿ..[ವಿಷ್ಣು ಅಭಿಮಾನಿಗಳಿಗೆ ಕ್ಷಮೆ ಕೋರಿದ ನಿರ್ದೇಶಕ ಆರ್.ಚಂದ್ರು]

  English summary
  Veerakaputra Srinivasa, President of Dr.Vishnu Sena Samithi has taken his facebook account to express his displeasure over R.Chandru directorial 'Kanaka' poster.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more