For Quick Alerts
  ALLOW NOTIFICATIONS  
  For Daily Alerts

  ಯಾವತ್ತಿದ್ರೂ ಯಜಮಾನ ವಿಷ್ಣುದಾದ ಒಬ್ಬರೇ: ದರ್ಶನ್

  |
  Yajamana Movie: ಚಿತ್ರರಂಗದ ಯಜಮಾನ ಯಾರು ಎಂಬುದನ್ನು ತಿಳಿಸಿದ ದಾಸ | FILMIBEAT KANNADA

  ಯಜಮಾನ ಶೀರ್ಷಿಕೆ ಅಂತಿಮವಾದಗನಿಂದಲೂ ಈ ಚಿತ್ರದ ಬಗ್ಗೆ ಒಂದು ಕುತೂಹಲ. ವಿಷ್ಣುವರ್ಧನ್ ಅವರ ಯಜಮಾನ ಚಿತ್ರಕ್ಕೆ, ದರ್ಶನ್ ಅವರ ಯಜಮಾನ ಚಿತ್ರಕ್ಕೆ ಏನಾದರೂ ಸಂಬಂಧ ಇದೆಯಾ? ಇಂಡಸ್ಟ್ರಿಗೆ ನಯಾ ಯಜಮಾನ ದರ್ಶನ್ ಆಗಿದ್ದಾರಾ ಎಂಬು ಕುತೂಹಲ ಕಾಡ್ತಿತ್ತು.

  ಈ ಬಗ್ಗೆ ಸ್ವತಃ ದರ್ಶನ್ ಸ್ಪಷ್ಟಪಡಿಸಿದ್ದಾರೆ. ''ಇಂಡಸ್ಟ್ರಿಗೆ ಯಜಮಾನ ಯಾವತ್ತಿದ್ರೂ ವಿಷ್ಣುವರ್ಧನ್ ಅವರೇ, ಅವರ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ'' ಎಂದು ಮತ್ತೊಮ್ಮೆ ಖಚಿತ ಪಡಿಸಿದ್ದಾರೆ.

  ದರ್ಶನ್ ಕೈ ಕಡಗದ ರಹಸ್ಯ ಬಯಲು, ಅದು ಅಂಬಿಯದ್ದಲ್ಲ, ವಿಷ್ಣುದೂ ಅಲ್ಲ.!

  ''ಚಿತ್ರದ ಕಥೆಗೆ ಈ ಟೈಟಲ್ ಬೇಕು ಎಂದು ಇಡಲಾಗಿದೆ. ಯಜಮಾನಿಗೋಸ್ಕರ ದರ್ಶನ್ ಹೊರತು, ದರ್ಶನ್ ಗಾಗಿ ಯಜಮಾನ ಆಗಿಲ್ಲ'' ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇನ್ನು ನಿಮ್ಮ ಪಾಲಿಗೆ ಯಜಮಾನ ಯಾರು ಎಂದು ಕೇಳಿದ್ದಕ್ಕೆ ''ನಮ್ಮ ಪಾಲಿಗೆ ಅಂಬರೀಶಣ್ಣ ಯಜಮಾನ'' ಎಂದು ದಾಸ ಉತ್ತರಿಸಿದ್ದಾರೆ.

  ದರ್ಶನ್ ಪಾಲಿನ ರಿಯಲ್ 'ಯಜಮಾನ' ಇವರೊಬ್ಬರೇ

  ಮಾರ್ಚ್ 1 ರಂದು ದರ್ಶನ್ ಯಜಮಾನ ತೆರೆಕಾಣುತ್ತಿದ್ದು, ಪಿ ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸಿದ್ದು, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ದೇವರಾಜ್, ಧನಂಜಯ್, ರವಿಶಂಕರ್, ಸಾಧು ಕೋಕಿಲಾ ನಟಿಸಿದ್ದಾರೆ.

  English summary
  Dr vishnuvardhan is the only yajamana of kannada industry said challenging star darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X