»   » ಸಾಹಸಸಿಂಹ ವಿಷ್ಣುವರ್ಧನ್ 'ಖೈದಿ' ರೀ ರಿಲೀಸ್

ಸಾಹಸಸಿಂಹ ವಿಷ್ಣುವರ್ಧನ್ 'ಖೈದಿ' ರೀ ರಿಲೀಸ್

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಖೈದಿ' ಚಿತ್ರ ರೀ ರಿಲೀಸ್ ಆಗುತ್ತಿದೆ. ಈ ಚಿತ್ರ ಬಿಡುಗಡೆಯಾಗಿ ಇಪ್ಪತ್ತೊಂಬತ್ತು ವರ್ಷಗಳೇ ಉರುಳಿ ಹೋಗಿವೆ. ಈಗ ಮತ್ತೆ ಅಭಿಮಾನಿಗಳ ಒತ್ತಾಯ ಮೇರೆಗೆ ಚಿತ್ರದನ್ನು ಪುನಃ ಬಿಡುಗಡೆ ಮಾಡಲಾಗುತ್ತಿದೆ.

ಬೆಂಗಳೂರಿನ ಅಪರ್ಣಾ ಚಿತ್ರಮಂದಿರದಲ್ಲಿ ನವೆಂಬರ್ 15ರಂದು ಖೈದಿ ಚಿತ್ರ ಬಿಡುಗಡೆಯಾಗುತ್ತಿದೆ. ಕೆಎಸ್ ಆರ್ ದಾಸ್ ನಿರ್ದೇಶನದ ಈ ಚಿತ್ರವನ್ನು ಜಿಆರ್ ಕೆ ರಾಜು ಅವರು ವಿಶ್ವಚಿತ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದರು. ಚಿತ್ರ ಬಿಡುಗಡೆ ಕಂಡಿದ್ದು 1984ರಲ್ಲಿ.

Dr Vishnuvardhan

ಸೆನ್ಸಾರ್ ಮಂಡಳಿಯಲ್ಲಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿತ್ತು. ಕನ್ನಡ ಕಲರ್ ಸ್ಕೋಪ್ ಚಿತ್ರದಲ್ಲಿ ವಿಷ್ಣು ಜೊತೆ ಆರತಿ, ಮಾಧವಿ, ಜಯಮಾಲಿನಿ, ಸಂಗೀತಾ, ನಿತ್ಯಾ, ಅನುರಾಧಾ, ಧೀರೇಂದ್ರ ಗೋಪಾಲ್, ಸುದರ್ಶನ್, ಮುಖ್ಯಮಂತ್ರಿ ಚಂದ್ರು, ಬಿಕೆ ಶಂಕರ್, ಡಿಂಗ್ರಿ ನಾಗರಾಜ್ ಸೇರಿದಂತೆ ಬಹಳಷ್ಟು ಕಲಾವಿದರಿದ್ದಾರೆ.

ತೆಲುಗಿನ 'ಖೈದಿ' ಚಿತ್ರದ ರೀಮೇಕ್ ಇದು. ಮೂಲ ಚಿತ್ರದಲ್ಲಿ ಚಿರಂಜೀವಿ ಹಾಗೂ ಮಾಧವಿ ಮುಖ್ಯ ಪಾತ್ರಧಾರಿಗಳು. ಈ ಚಿತ್ರದ "ತಾಳೆ ಹೂವ ಪೊದೆಯಿಂದ..." (ಚಿ.ಉದಯಶಂಕರ್ ಸಾಹಿತ್ಯ) ಹಾಡು ಆಗಿನ ಕಾಲಕ್ಕೆ ಬುಸ್ ಬುಸ್ ಎಂದು ಸಾಕಷ್ಟು ಸದ್ದು ಮಾಡಿತ್ತು.

ಚಕ್ರವರ್ತಿ ಸಂಗೀತ, ವಿ ಲಕ್ಷ್ಮಣ್ ಅವರ ಛಾಯಾಗ್ರಹಣ, ಡಿ ವೆಂಕಟರತ್ನಂ ಅವರ ಸಂಕಲನ, ಚಿನ್ನಿ ಪ್ರಕಾಶ್ ಮತ್ತು ತಾರಾ ಅವರ ನೃತ್ಯ ಸಂಯೋಜನೆ, ನಾಗರಾಜ್ ಅವರ ಕಲೆ ಇರುವ ಚಿತ್ರವನ್ನು ಡಿವಿ ಸುಧೀಂದ್ರ ಅವರು ಪ್ರಚಾರ ಮಾಡಿದ್ದರು. ಈಗ ಮತ್ತೊಂದು ಬೆಳ್ಳಿತೆರೆಯ ಮೇಲೆ ವೀಕ್ಷಿಸುವ ಅವಕಾಶ. (ಒನ್ಇಂಡಿಯಾ ಕನ್ನಡ)

English summary
kannada film 'Khaidi' (1984) re-releasing on 15th November in Bangalore Aparna theater. The Movie is Directed By K S R Dass, Produced by G R K Raju, Music By Chakravarthy, Cinematography By V Lakshman, Starring : Vishnuvardhan, Aarathi, Madhavi, Jayamalini, Sangeetha, Nithya, Anuradha, Dheerendra Gopal, Sudarshan.
Please Wait while comments are loading...