»   » ಡಿಸೆಂಬರ್ 6 ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಶಿಲಾನ್ಯಾಸ

ಡಿಸೆಂಬರ್ 6 ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಶಿಲಾನ್ಯಾಸ

Written By:
Subscribe to Filmibeat Kannada

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 6ಕ್ಕೆ ಮೈಸೂರಿನ ವಿಷ್ಣು ಸ್ಮಾರಕ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮಾರಕಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ.

ನಿನ್ನೆ (ನವೆಂಬರ್ 13) ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ಅವರು, ಈ ವಿಚಾರವನ್ನ ಖಚಿತ ಪಡಿಸಿದರು.

Dr.Vishnuvardhan Memorial work to begin from December 6th in Mysore

ಸಿಎಂ ಸೂಚನೆಯಂತೆ ಮೈಸೂರಿನ ಇಲವಾಲದಲ್ಲಿ 5 ಎಕೆರೆ ಜಾಗವನ್ನ ವಿಷ್ಣು ಸ್ಮಾರಕಕ್ಕೆ ಮೀಸಲಿಟ್ಟಿದ್ದು, ಸ್ವತಃ ಮುಖ್ಯಮಂತ್ರಿಗಳೇ ಸ್ಮಾರಕ ಶಿಲಾನ್ಯಾಸ ಮಾಡಲಿದ್ದಾರೆ ಎಂದು ಸ್ವಷ್ಟಪಡಿಸಿದರು.

Dr.Vishnuvardhan Memorial work to begin from December 6th in Mysore

ಸದ್ಯ, ವಿಷ್ಣುಸ್ಮಾರಕ್ಕೆ ಸಂಬಂಧಿಸಿದಂತೆ ಎಲ್ಲ ರೂಪುರೇಷೆಗಳು ತಯಾರಾಗಿದ್ದು, ವಿಷ್ಣು ಸ್ಮಾರಕ ಸಮಿತಿಯೊಂದಿಗೆ ಚರ್ಚಿಸಿ, ಸ್ಮಾರಕದ ಬಳಿ ಏನೆಲ್ಲಾ ಇರಬೇಕು ಎಂಬ ಅಂತಿಮ ನಿರ್ಧಾರವನ್ನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Dr.Vishnuvardhan Memorial work to begin from December 6th in Mysore

ಈ ಹಿಂದೆ ವಿಷ್ಣು ಸ್ಮಾರಕವನ್ನ ಅಭಿಮಾನ್ ಸ್ಟುಡಿಯೋದಿಂದ ಮೈಸೂರಿಗೆ ಸ್ಥಳಾಂತರಿಸಿ ಎಂದು ಭಾರತಿ ವಿಷ್ಣುವರ್ಧನ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಒಪ್ಪಿಗೆ ನೀಡಿದ್ದು, ಈಗ ಸ್ಮಾರಕ ಶಿಲಾನ್ಯಾಸಕ್ಕೆ ದಿನಾಂಕ ಅಂತಿಮಗೊಂಡಿದೆ.[ವಿಷ್ಣು ಅಭಿಮಾನಿಗಳಿಗೆ ನಟಿ ಭಾರತಿ ವಿಷ್ಣುವರ್ಧನ್ ಬರೆದ ಬಹಿರಂಗ ಪತ್ರ]

fans

ವಿಷ್ಣು ಸ್ಮಾರಕವನ್ನ ಯಾವುದೇ ಕಾರಣಕ್ಕೂ ಬೆಂಗಳೂರಿನಿಂದ ಸ್ಥಳಾಂತರಿಸಬಾರದು ಎಂದು ಡಾ.ವಿಷ್ಣುವರ್ಧನ್ ಅಭಿಮಾನಿಗಳು ಹಲವು ತಿಂಗಳುಗಳಿಂದ ಪ್ರತಿಭಟನೆ, ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದ್ರೆ, ಡಿಸೆಂಬರ್ 6 ರಂದು ಮೈಸೂರಿನಲ್ಲಿ ಶಿಲಾನ್ಯಾಸ ಮಾಡುವ ನಿರ್ಧಾರ ಹೊರಬಿದ್ದಿದ್ದು, ಇದನ್ನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಅಂತ ಕಾದುನೋಡಬೇಕಿದೆ.

English summary
'Dr.Vishnuvardhan's Memorial' work will begin from December 6th in Mysore. Government Secretary M.Lakshminarayana has confirmed this news.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada