ಡಾ.ವಿಷ್ಣು ಅವರ ನಾಗರಹಾವು ಚಿತ್ರದ 3D ಪೋಸ್ಟರ್ ಅನಾವರಣ
1970ರಲ್ಲಿ ತೆರೆಕಂಡಿದ್ದ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ 'ನಾಗರಹಾವು' ಸಿನಿಮಾ ಭಾರಿ ಖ್ಯಾತಿ ಗಳಿಸಿತ್ತು. ಇದೀಗ ಅದೇ ಹೆಸರನ್ನು ಇಟ್ಟುಕೊಂಡು ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಸಿನಿಮಾ ಮಾಡುತ್ತಿದ್ದಾರೆ.
ಸುಮಾರು 4 ವರ್ಷಗಳ ಹಿಂದೆ ಸೆಟ್ಟೇರಿದ್ದ ಕೋಡಿ ರಾಮಕೃಷ್ಣ ಅವರ 'ನಾಗರಹಾವು' ಚಿತ್ರದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಅವರು ಮಿಂಚುತ್ತಿದ್ದು, ಇದೀಗ ಚಿತ್ರದ 3D ಸ್ಟ್ಯಾಂಡಿ ಬಿಡುಗಡೆ ಆಗಿದೆ.['ನಾಗರಹಾವು' ನಲ್ಲಿ ದಿಗಿ ಮತ್ತು ಲಕ್ಕಿ ಸ್ಟಾರ್ ರಮ್ಯಾ ಮೋಡಿ]

ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡಿ ಪೋಸ್ಟರ್ ಅನ್ನು ಡಾ.ವಿಷ್ಣು ಅವರ ಅಳಿಯ ನಟ ಅನಿರುದ್ಧ್ ಅವರು ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಆರ್ಕೆಡ್ ನಲ್ಲಿ ನಡೆದ ಸಮಾರಂಭದಲ್ಲಿ ಇಂದು (ಏಪ್ರಿಲ್ 23) ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ 'ನಾಗರಹಾವು' ಚಿತ್ರದ ನಿರ್ಮಾಪಕರಾದ ಸಾಜೀದ್ ಖುರೇಶಿ ಅವರಿಗೆ ವಿಷ್ಣುವರ್ಧನ್ ಅಭಿಮಾನಿ ಸಂಘದವರು ಸನ್ಮಾನ ಮಾಡಿದರು. ಒಟ್ನಲ್ಲಿ ಮತ್ತೆ ವಿಷ್ಣುದಾದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆಯ ಮೇಲೆ ನೋಡಬಹುದು ಎಂದಾಯ್ತು..


Click it and Unblock the Notifications











