»   » ಕನ್ನಡ ಬಾಕ್ಸ್ ಆಫೀಸಲ್ಲಿ ಕುದುರೆಗಳ ನಾಗಾಲೋಟ

ಕನ್ನಡ ಬಾಕ್ಸ್ ಆಫೀಸಲ್ಲಿ ಕುದುರೆಗಳ ನಾಗಾಲೋಟ

Posted By:
Subscribe to Filmibeat Kannada

ನಾಲ್ಕು ಕನ್ನಡ ಚಿತ್ರಗಳು ಒಂದಕ್ಕೊಂದು ಪೈಪೋಟಿಯಾಗಿ ನಿಲ್ಲದೆ ಜೊತೆಜೊತೆಯಾಗಿ ಮುನ್ನುಗ್ಗುತ್ತಿವೆ. ಯೋಗರಾಜ್ ಭಟ್ಟರ 'ಡ್ರಾಮಾ' ಹಾಗೂ ಸುಮನಾ ಕಿತ್ತೂರು ನಿರ್ದೇಶನದ 'ಎದೆಗಾರಿಕೆ' ಚಿತ್ರಗಳು ಜೊತೆಯಾಟದಲ್ಲಿ ಅರ್ಧ ಸೆಂಚುರಿ ಪೂರೈಸಿವೆ.

ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ 10ನೇ ವಾರಕ್ಕೆ ಅಡಿಯಿಟ್ಟಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ರೀಮೇಕ್ ಚಿತ್ರ ಯಾರೇ ಕೂಗಾಡಲಿ 3ನೇ ವಾರ ಪೂರೈಸಿ ಮುನ್ನುಗ್ಗುತ್ತಿದೆ.

ಕನ್ನಡ ಚಿತ್ರರಂಗದ ವಿಶಿಷ್ಟ ಸಿನಿಮಾ ಎದೆಗಾರಿಕೆ

ಡ್ರಾಮಾ ಮತ್ತು ಎದೆಗಾರಿಕೆ ಚಿತ್ರಗಳು ಬಿಡುಗಡೆಯಾದಾಗಲೂ ಒಂದಕ್ಕೊಂದು ಪೈಪೋಟಿ ಎನ್ನಿಸಲಿಲ್ಲ. ಏಕೆಂದರೆ ಸ್ಟಾರ್ ಹೀರೋಗಳಿಲ್ಲದ ಎರಡೂ ಭಿನ್ನ ಚಿತ್ರಗಳು. ಪ್ರೇಕ್ಷಕರು ಎರಡೂ ಚಿತ್ರಗಳನ್ನು ನೋಡಿದ್ದಾರೆ. 'ಎದೆಗಾರಿಕೆ' ಚಿತ್ರ ಕನ್ನಡ ಚಿತ್ರರಂಗದ ವಿಶಿಷ್ಟ ಸಿನಿಮಾ ಎಂಬ ಕೃಪೆಗೆ ಪಾತ್ರವಾಗಿದೆ.

ಡ್ರಾಮಾ, ಎದೆಗಾರಿಕೆ ಜೊತೆಯಾಟ

ಇನ್ನು ಯೋಗರಾಜ್ ಭಟ್ 'ಡ್ರಾಮಾ' ಚಿತ್ರ ಅತ್ತ ಮಾಸ್ ಇತ್ತ ಕ್ಲಾಸ್ ಪ್ರೇಕ್ಷಕರ ಮನಗೆದ್ದಿದೆ. ಎದೆಗಾರಿಕೆ ಚಿತ್ರ ರಾಜ್ಯದಾದ್ಯಂತ 20ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ಇನ್ನು ಡ್ರಾಮಾ ಚಿತ್ರವಂತು 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿ ಮುನ್ನುಗ್ಗುತ್ತ್ತಿದೆ.

ಅಮೆರಿಕಾದಲ್ಲಿ ಡ್ರಾಮಾ ಪ್ರದರ್ಶನ

ಅಮೆರಿಕಾದ ಸ್ಯಾನ್ ಜೋಸ್, ಮಿಲ್ ಪಿಟಸ್, ಕ್ಯಾಲಿಫೋರ್ನಿಯಾದಲ್ಲೂ ಡ್ರಾಮಾ ಚಿತ್ರ ಪ್ರದರ್ಶನ ಕಂಡಿದೆ. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿರುವುದು. ಸಾಮಾನ್ಯವಾಗಿ ಕನ್ನಡ ಚಿತ್ರಗಳು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಮೂರೇ ದಿನಕ್ಕೆ ಎತ್ತಂಗಡಿಯಗುತ್ತವೆ.

ಹತ್ತನೇ ವಾರ ಪೂರೈಸಿದ ಸಂಗೊಳ್ಳಿ ರಾಯಣ್ಣ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಕನ್ನಡ ಚಿತ್ರರಂಗದ ಅದ್ದೂರಿ ಹಾಗೂ ಜನಪ್ರಿಯ ಚಿತ್ರವಾಗಿ ಹೊರಹೊಮ್ಮಿದೆ. ಬರೋಬ್ಬರಿ 80 ಚಿತ್ರಮಂದಿರಗಳಲ್ಲಿ 'ರಾಯಣ್ಣ' 10 ವಾರಗಳನ್ನು ಪೂರೈಸಿದ್ದಾನೆ. ಬೆಂಗಳೂರಿನ ಮಲ್ಟಿಫ್ಲೆಕ್ಸ್ ಗಳಲ್ಲೂ ರಾಯಣ್ಣನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ.

3ನೇ ವಾರ ಪೂರೈಸಿದ ಪುನೀತ್ ಯಾರೇ ಕೂಗಾಡಲಿ

'ಯಾರೇ ಕೂಗಾಡಲಿ' ಚಿತ್ರ ರೀಮೇಕ್ ಚಿತ್ರವಾದರೂ ಪುನೀತ್ ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ. ಸರಿಸುಮಾರು ರು.9.8 ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿರುವ ಈ ಚಿತ್ರ ಈಗಾಗಲೆ ಅದರ ದುಪ್ಪಟ್ಟು ಹಣವನ್ನು ಗಳಿಸಿದೆ ಎನ್ನುತ್ತವೆ ಮೂಲಗಳು.

English summary
Kannada box office report. Darshan's Krantiveera Sangolli Rayanna is creating history at the box office. Edegarike and Drama films completes 50 days and Puneet Rajkumar's Yaare Koogadali completes 3rd week. 
Please Wait while comments are loading...