»   » 'ಡ್ರಾಮಾ ಜ್ಯೂನಿಯರ್ಸ್' ಸೂಪರ್ ಸ್ಟಾರ್ ಅಚಿಂತ್ಯ ಕುರಿತ ಇಂಟ್ರೆಸ್ಟಿಂಗ್ ಸುದ್ದಿ..

'ಡ್ರಾಮಾ ಜ್ಯೂನಿಯರ್ಸ್' ಸೂಪರ್ ಸ್ಟಾರ್ ಅಚಿಂತ್ಯ ಕುರಿತ ಇಂಟ್ರೆಸ್ಟಿಂಗ್ ಸುದ್ದಿ..

Posted By:
Subscribe to Filmibeat Kannada
ಜೀ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾದ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜ್ಯೂನಿಯರ್ಸ್' ನೋಡಿದವರಿಗೆಲ್ಲ ಪುಟಾಣಿ ಅಚಿಂತ್ಯ ಪರಿಚಯ ಇದ್ದೇ ಇರುತ್ತೆ.

'ಡ್ರಾಮಾ ಜ್ಯೂನಿಯರ್ಸ್' ಸೆಟ್ ನಲ್ಲಿ 'ಸೂಪರ್ ಸ್ಟಾರ್' ಅಂತಲೇ ಫೇಮಸ್ ಆಗಿದ್ದ ಅಚಿಂತ್ಯ ಈಗೇನು ಮಾಡ್ತಿದ್ದಾನೆ ಅಂತ ನಿಮಗೆ ಗೊತ್ತಾ.? ಅಚಿಂತ್ಯ ಕುರಿತ ಒಂದು ಇಂಟ್ರೆಸ್ಟಿಂಗ್ ಸುದ್ದಿಯನ್ನ ನಿಮಗಾಗಿ ನಾವು ಹೊತ್ತು ತಂದಿದ್ದೀವಿ... ಓದಿರಿ...

ಬೆಳ್ಳಿತೆರೆಗೆ ಕಾಲಿಟ್ಟ ಅಚಿಂತ್ಯ

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಮುಗ್ಧ ಹಾಗೂ ಮುದ್ದು ಮುದ್ದಾದ ಅಭಿನಯದಿಂದ ಗುರುತಿಸಿಕೊಂಡಿದ್ದ ಅಚಿಂತ್ಯ ಈಗ ಬೆಳ್ಳಿಪರದೆ ಮೇಲೆ ಮಿನುಗಲು ಸಜ್ಜಾಗಿದ್ದಾನೆ.[ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?]

ಅಚಿಂತ್ಯ ನಟಿಸುತ್ತಿರುವ ಸಿನಿಮಾ ಯಾವುದು.?

ಎಸ್.ನಾರಾಯಣ್ ನಿರ್ದೇಶನದ 'ಮನಸು ಮಲ್ಲಿಗೆ' ಸಿನಿಮಾದಲ್ಲಿ ಪುಟಾಣಿ ಅಚಿಂತ್ಯ ನಟಿಸಿದ್ದಾನೆ.

ಅಚಿಂತ್ಯಗೆ ಒಲಿದು ಬರುತ್ತಿದೆ ಸುವರ್ಣಾವಕಾಶಗಳು

ಬರೀ 'ಮನಸು ಮಲ್ಲಿಗೆ' ಚಿತ್ರ ಮಾತ್ರ ಅಲ್ಲ. ಅನೇಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅಚಿಂತ್ಯಗೆ ಒಲಿದು ಬರುತ್ತಿದೆ. ಸದ್ಯಕ್ಕೆ ಅಚಿಂತ್ಯ ಆಕ್ಟ್ ಮಾಡಿರುವುದು ಮಾತ್ರ 'ಮನಸ್ಸು ಮಲ್ಲಿಗೆ' ಚಿತ್ರದಲ್ಲಿ.

ಫುಲ್ ಬಿಜಿಯಾದ 'ಡ್ರಾಮಾ ಜ್ಯೂನಿಯರ್ಸ್'

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಪುಟಾಣಿಗಳು ಈಗ ಬಣ್ಣದ ಲೋಕದಲ್ಲಿ ಬಿಜಿಯಾಗಿದ್ದಾರೆ.

ಕಿರುತೆರೆಯಲ್ಲಿ ಚಿತ್ರಾಲಿ

'ವಾರಸ್ದಾರ' ಧಾರಾವಾಹಿಯಲ್ಲಿ ಪುಟಾಣಿ ಚಿತ್ರಾಲಿ ನಟಿಸುತ್ತಿದ್ದಾಳೆ.

ಜಾಹೀರಾತು ದುನಿಯಾದಲ್ಲಿ ಅಮೋಘ

ಪುಟಾಣಿ ಅಮೋಘ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದನ್ನು ನೀವು ಈಗಾಗಲೇ ಟಿವಿಯಲ್ಲಿ ನೋಡಿರಬಹುದು.

English summary
'Drama Juniors' Achintya has acted in S.Narayan Directorial Kannada Movie 'Manasu Mallige'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada