»   » 'ತಾರಕ್' ಚಿತ್ರದಲ್ಲಿರಲಿದೆ 'ಡ್ರಾಮಾ ಕಿಂಗ್' ಮಹೇಂದ್ರ ಕಾಮಿಡಿ ಕಲರವ

'ತಾರಕ್' ಚಿತ್ರದಲ್ಲಿರಲಿದೆ 'ಡ್ರಾಮಾ ಕಿಂಗ್' ಮಹೇಂದ್ರ ಕಾಮಿಡಿ ಕಲರವ

Posted By:
Subscribe to Filmibeat Kannada

'ಡ್ರಾಮಾ ಜ್ಯೂನಿಯರ್ಸ್' ಮೊದಲ ಸೀಸನ್ ನ ಮೊದಲ ಆಡಿಷನ್ ನಲ್ಲಿ ಖಾಕಿ ತೊಟ್ಟು ಡೈಲಾಗ್ ಕಿಂಗ್ ಸಾಯಿ ಕುಮಾರ್ ರೇಂಜಿಗೆ ಡೈಲಾಗ್ ಹೊಡೆದು ಕೊನೆಗೆ ಮೊದಲನೇ ರನ್ನರ್ ಅಪ್ ಸ್ಥಾನ ಪಡೆದ ಅದ್ಭುತ ಪ್ರತಿಭೆ ಮಹೇಂದ್ರ ಪ್ರಸಾದ್.

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಮಿಡಿ ಪಾತ್ರಗಳನ್ನು ನಿರ್ವಹಿಸಿ ನಿಮ್ಮನ್ನೆಲ್ಲ ನಕ್ಕು ನಲಿಸಿದ ಮಹೇಂದ್ರ ಪ್ರಸಾದ್ ಇದೀಗ ಬೆಳ್ಳಿಪರದೆ ಮೇಲೆ ಮಿನುಗಲಿದ್ದಾನೆ.

'ಡ್ರಾಮಾ ಕಿಂಗ್' ಮಹೇಂದ್ರ ಪ್ರಸಾದ್ ಬಗ್ಗೆ ನಿಮಗೆಷ್ಟು ಗೊತ್ತು?

Drama Juniors kid Mahendra Prasad plays comedy role in Kannada Movie 'Tarak'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದಲ್ಲಿ ಬಾಲಕ ಮಹೇಂದ್ರ ಪ್ರಸಾದ್ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. 'ತಾರಕ್' ಚಿತ್ರದಲ್ಲೂ ಕಾಮಿಡಿ ಮಾಡುವ ಜವಾಬ್ದಾರಿ ಮಹೇಂದ್ರ ಪ್ರಸಾದ್ ಹೆಗಲ ಮೇಲಿದೆ. ಬೇಕಾದ್ರೆ, ನೀವೇ ಒಮ್ಮೆ ಟ್ರೈಲರ್ ನೋಡ್ಕೊಂಡ್ ಬನ್ನಿ.

ಹೇಳಿ ಕೇಳಿ ಮಹೇಂದ್ರ ಪ್ರಸಾದ್ ಕಾಮಿಡಿ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ಕುರಿ ಪ್ರತಾಪ್ ಪಕ್ಕ ಮಹೇಂದ್ರ ಪ್ರಸಾದ್ ಇದ್ದಾನೆ ಅಂದ್ರೆ, 'ತಾರಕ್' ಚಿತ್ರದಲ್ಲಿ ನಗುವಿನ ಹೊಳೆ ಹರಿಯುವುದು ಗ್ಯಾರೆಂಟಿ.

ತುಂಬು ಕುಟುಂಬದ 'ತಾರಕ್' ಟ್ರೇಲರ್ ನೋಡಿದ್ರಾ.?

'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಮೂಲಕ ಮನೆಮಾತಾಗಿ ಒಳ್ಳೆಯ ಅವಕಾಶಗಳನ್ನು ಪಡೆಯುತ್ತಿರುವ ಪ್ರತಿಭಾವಂತ ಮಹೇಂದ್ರ ಪ್ರಸಾದ್, ಹೀಗೆ ಎತ್ತರೆತ್ತರಕ್ಕೆ ಬೆಳೆಯಲಿ ಅನ್ನೋದೇ ನಮ್ಮ ಆಶಯ ಕೂಡ.

English summary
'Drama Juniors' runner-up Mahendra Prasad plays comedy role in Kannada Movie 'Tarak'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada