For Quick Alerts
  ALLOW NOTIFICATIONS  
  For Daily Alerts

  ಅನುಶ್ರೀ ಫೋನ್ ಮಾಡಿದ ಮಾಜಿ ಸಿಎಂ ಯಾರೆಂದು ಬಹಿರಂಗಪಡಿಸಿ: ಹೆಚ್ ಡಿ ಕುಮಾರಸ್ವಾಮಿ ಕೆಂಡಾಮಂಡಲ

  |

  ಡ್ರಗ್ಸ್ ಪ್ರಕರಣ ಸಂಬಂಧ ನಟಿ ಮತ್ತು ನಿರೂಪಕಿ ಅನುಶ್ರೀ ಪ್ರಭಾವಿ ವ್ಯಕ್ತಿಗಳಿಗೆ ಫೋನ್ ಮಾಡಿದ್ದಾರೆ ಎನ್ನುವ ವಿಚಾರವೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಸಿಸಿಬಿ ನೋಟಿಸ್ ನೀಡುತ್ತಿದಂತೆ ಅನುಶ್ರೀ ಮಾಜಿ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಪುತ್ರ ಸೇರಿದಂತೆ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಗಂಡಸ್ತನ ಇದ್ರೆ ಸಾಬೀತು ಮಾಡಿ ತೋರ್ಸಿ ಅವಾಗ ಒಪ್ಕೋತೀನಿ | Kumarswamy | Filmibeat Kannada

  ಈ ಪ್ರಕರಣದಲ್ಲಿ ಮಾಜಿ ಸಿಎಂ ಎಂಬ ಪದ ಬಳಕೆ ಮಾಡಿರುವುದರ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನುಶ್ರೀ ಡ್ರಗ್ಸ್ ಪ್ರಕರಣದ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂಗಳಲ್ಲಿ ನಾನು, ಸಿದ್ಧರಾಮಯ್ಯ, ಎಸ್ ಎಂ ಕೃಷ್ಣ, ಮೊಯ್ಲಿ, ಜಗದೀಶ್ ಶೆಟ್ಟರ್ ಮತ್ತು ಡಿವಿ ಸದಾನಂದ ಗೌಡರು ಬದುಕ್ಕಿದ್ದೀವಿ. ಆ ಹೆಣ್ಣುಮಗಳು ಯಾವ ಮಾಜಿ ಸಿಎಂಗೆ ಫೋನ್ ಮಾಡಿ ಹೆಚ್ಚು ಸಮಯ ಮಾತನಾಡಿದ್ದಾರೆ ಎನ್ನುವುದು ಬಹಿರಂಗವಾಗಬೇಕು' ಎಂದು ಹೆಚ್ ಡಿ ಕೆ ಗರಂ ಆಗಿದ್ದಾರೆ. ಮುಂದೆ ಓದಿ...

  'ಬಂಧನಕ್ಕೆ ಮುಂದಾದ್ರೆ ಪಕ್ಕಾ ನಾಟಕ ಶುರುವಾಗುತ್ತೆ': ಅನುಶ್ರೀ 'ಡ್ರಾಮಾ ಕ್ವೀನ್' ಎಂದ ಸಂಬರ್ಗಿ'ಬಂಧನಕ್ಕೆ ಮುಂದಾದ್ರೆ ಪಕ್ಕಾ ನಾಟಕ ಶುರುವಾಗುತ್ತೆ': ಅನುಶ್ರೀ 'ಡ್ರಾಮಾ ಕ್ವೀನ್' ಎಂದ ಸಂಬರ್ಗಿ

  ಡ್ರಗ್ಸ್ ಪ್ರಕರಣ ಹಳ್ಳ ಹಿಡಿಯುತ್ತೆ ಎಂದು ಹೇಳಿದ್ದೆ

  ಡ್ರಗ್ಸ್ ಪ್ರಕರಣ ಹಳ್ಳ ಹಿಡಿಯುತ್ತೆ ಎಂದು ಹೇಳಿದ್ದೆ

  "ಡ್ರಗ್ಸ್ ಪ್ರಕರಣ ಹಳ್ಳಹಿಡಿಯುತ್ತೆ ಎಂದು ಮೊದಲೇ ಹೇಳಿದ್ದೆ. ದಿನಕ್ಕೊಂದು ಕಲ್ಪಿತ ಹೆಸರುಗಳು ಹೊರಬರುತ್ತಿವೆ. ಸರ್ಕಾರವೇ ಸೃಷ್ಟಿಸುತ್ತಿದೆಯೋ ಅಥವಾ ಬೇರೆ ಯಾರಾದರೂ ಮಾಡುತ್ತಿದ್ದಾರೋ ಎಂದು ಗೊತ್ತಾಗಬೇಕು. ಟಿವಿ ನಿರೂಪಕಿಯೊಬ್ಬರ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಮಾಜಿ ಸಿಎಂ ಒತ್ತಡ ಇದೆ ಎಂದು ಹೇಳಲಾಗುತ್ತಿದೆ. ಆ ಹೆಣ್ಣು ಮಗಳು 3 ಪ್ರಭಾವಿ ನಾಯಕರಿಗೆ ಫೋನ್ ಮಾಡಿ ಚರ್ಚೆ ಮಾಡಿದ್ದಾರಂತೆ. ಸಿಸಿಬಿ ಅಧಿಕಾರಿಗಳಿಗೆ ಫೋನ್ ನಂಬರ್ ಸಿಕ್ಕಿದೆಯಂತೆ. ಪ್ರಭಾವಿ ನಾಯಕರ ನಂಬರ್ ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ ಎನ್ನುವ ವರದಿ ನೋಡಿದೆ" ಎಂದು ಹೇಳಿದ್ದಾರೆ.

  ಮಾಜಿ ಸಿಎಂ ಯಾರು ಎಂದು ಗೊತ್ತಾಗಬೇಕು

  ಮಾಜಿ ಸಿಎಂ ಯಾರು ಎಂದು ಗೊತ್ತಾಗಬೇಕು

  "ಮಾಜಿ ಸಿಎಂ ಯಾರು ಎಂದು ಗೊತ್ತಾಬೇಕು. ಸಾರ್ವಜನಿಕವಾಗಿ ಮೊದಲು ಜನರ ಮುಂದೆ ಇಡಲಿ. ಆ ಮಾಜಿ ಸಿಎಂಗೆ ಮೊದಲು ಶಿಕ್ಷೆಯಾಗಲಿ. ಯಾವ ಪತ್ರಕರ್ತರಿಗೆ, ಹೇಗೆ ಈ ಮಾಹಿತಿ ಸಿಕ್ಕಿದೆ ಎನ್ನುವುದನ್ನು ಆ ವರದಿಗಾರನ ಬಳಿಯೇ ಮೂಲಗಳಿಂದ ತಿಳಿದುಕೊಂಡೆ." ಎಂದಿದ್ದಾರೆ.

  ಅನುಶ್ರೀ ಬಂಧನಕ್ಕೆ 'ಪ್ರಭಾವಿ' ವ್ಯಕ್ತಿ ಅಡ್ಡಗಾಲು, ಸಂಬರ್ಗಿ ಹೇಳಿದ ಆ 'ಶುಗರ್ ಡ್ಯಾಡಿ' ಯಾರು?ಅನುಶ್ರೀ ಬಂಧನಕ್ಕೆ 'ಪ್ರಭಾವಿ' ವ್ಯಕ್ತಿ ಅಡ್ಡಗಾಲು, ಸಂಬರ್ಗಿ ಹೇಳಿದ ಆ 'ಶುಗರ್ ಡ್ಯಾಡಿ' ಯಾರು?

  ಸಿಸಿಬಿ ಇನ್ ಸ್ಪೆಕ್ಟರ್ ನೀಡಿದ್ರಾ ಮಾಹಿತಿ?

  ಸಿಸಿಬಿ ಇನ್ ಸ್ಪೆಕ್ಟರ್ ನೀಡಿದ್ರಾ ಮಾಹಿತಿ?

  "ವರದಿಗಾರನಿಗೆ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ಕೊಟ್ಟಿದ್ದಾರೆ ಎನ್ನಲಾಗಿದೆ. ಅವರನ್ನು ಈಗಾಗಲೇ ಟ್ರನ್ಸ್ ಫರ್ ಮಾಡಲಾಗಿದೆ. ಅವರನ್ನು ವಿಚಾರಣೆ ಮಾಡಿ, ಮಾಜಿ ಸಿಎಂ ಯಾರೆಂದು ಬಾಯಿ ಬಿಡಿಸಿ" ಎಂದು ಹೆಚ್ ಡಿ ಕುಮಾರಸ್ವಾಮಿ ಕೆಂಡಕಾರಿದ್ದಾರೆ.

  ಸರ್ಕಾರಕ್ಕೆ ಪತ್ರ ಬರೆಯುತ್ತೇನೆ

  ಸರ್ಕಾರಕ್ಕೆ ಪತ್ರ ಬರೆಯುತ್ತೇನೆ

  ಯಾವ ಸಿ ಎಂ ಎಂದು ಜನರು ತಿಳಿದುಕೊಳ್ಳಬೇಕು. ನಾನು ಸರ್ಕಾರಕ್ಕೆ, ಸಿಎಂಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಸತ್ಯಾಸತ್ಯತೆ ಏನು ಎನ್ನುವುದು ಗೊತ್ತಾಗಲಿ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಎನ್ನುವ ಎಲ್ಲಾ ಮಾಹಿತಿ ಗೊತ್ತಾಗಲಿ. ಮಾಜಿ ಸಿಎಂ ಯಾರು ಎನ್ನುವುದನ್ನು ಸರ್ಕಾರ ಹೊರತರಬೇಕು ಎಂದು ಕುಮಾರಸ್ವಾಮಿ ಗರಂ ಆಗಿದ್ದಾರೆ.

  English summary
  Sandalwood drugs case: DH Kumaraswamy says reveal former CM name who speak with Anushree.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X