For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ವಿವಾದ: 'ಕೈ ಮೀರಿ ಹೋಗಿದೆ', ಹಿಂದೆ ಸರಿದ್ರಾ 'ಹಿರಿಯರು'?

  |

  ಕನ್ನಡ ಚಿತ್ರರಂಗದ ಕೆಲವು ನಟ-ನಟಿಯರು ಹಾಗೂ ತಂತ್ರಜ್ಞರು ಡ್ರಗ್ಸ್ ಸೇವಿಸುತ್ತಾರೆ, ಡೀಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿರುವ ಹಿನ್ನೆಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಮಹತ್ವದ ಸಭೆ ನಡೆಯಿತು.

  Sandalwood Drug Mafia ಬಗ್ಗೆ Kannada film Chamber ವಿಶೇಷ ಪತ್ರಿಕಾಗೋಷ್ಠಿ | Filmibeat Kannada

  ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಸಾರಾ ಗೋವಿಂದು, ದೊಡ್ಡಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆರೋಪಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಮಾನ ತೆಗೆದುಕೊಳ್ಳುವುದು, ಡ್ರಗ್ಸ್ ಸೇವಿಸುವವರನ್ನು ಇಂಡಸ್ಟ್ರಿಯಿಂದ ಬ್ಯಾನ್ ಮಾಡುವುದು ಹಾಗೂ ಬೇರೆ ಏನಾದರೂ ಗಟ್ಟಿ ತೀರ್ಮಾನ ಹೊರಬೀಳುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು.

  ಚಿತ್ರರಂಗ ಎಂದರೆ ಗುರುಕುಲ ಇದ್ದಂತೆ, ಇದು 'ಗಾಂಜಾನಗರ'ವಲ್ಲ: ಹಿರಿಯ ನಟ ದೊಡ್ಡಣ್ಣಚಿತ್ರರಂಗ ಎಂದರೆ ಗುರುಕುಲ ಇದ್ದಂತೆ, ಇದು 'ಗಾಂಜಾನಗರ'ವಲ್ಲ: ಹಿರಿಯ ನಟ ದೊಡ್ಡಣ್ಣ

  ಆದರೆ, ಡ್ರಗ್ಸ್ ವಿಚಾರದಲ್ಲಿ 'ಕೈ ಮೀರಿ ಹೋಗಿದೆ' ಎಂದು ಹೇಳಿ ಹಿರಿಯರು ಎನಿಸಿಕೊಂಡವರು ಹಿಂದೆ ಸರಿದಿದ್ದಾರೆ. ಮುಂದೆ ಓದಿ....

  ನಾವು ಡ್ರಗ್ಸ್ ವಿಷಯಕ್ಕೆ ತಲೆ ಹಾಕುತ್ತಿಲ್ಲ

  ನಾವು ಡ್ರಗ್ಸ್ ವಿಷಯಕ್ಕೆ ತಲೆ ಹಾಕುತ್ತಿಲ್ಲ

  ''ಇಂದ್ರಜಿತ್ ಲಂಕೇಶ್ ನಮ್ಮ ಗಮನಕ್ಕೆ ತಂದಿಲ್ಲ, ಮಾತ್ರವಲ್ಲ ಬೇರೆ ಯಾವ ನಿರ್ದೇಶಕ, ನಿರ್ಮಾಪಕರು ಈ ಕುರಿತು ಮಾತಾಡಿಲ್ಲ. ಚಿತ್ರರಂಗ ಬಲಿಪಶು ಆಗುತ್ತಿದೆ. 6 ತಿಂಗಳಿಂದ ಚಿತ್ರರಂಗಕ್ಕೆ ಉಸಿರುಗಟ್ಟುವ ವಾತಾವರಣ, ಆರ್ಥಿಕ ಪೆಟ್ಟು ಬಿದ್ದಿದೆ, ಸರಕಾರದ ಗಮನಕ್ಕೂ ತಂದಿದ್ದೇವೆ. ನಾವು ಡ್ರಗ್ಸ್ ವಿಷಯಕ್ಕೆ ತಲೆ ಹಾಕುತ್ತಿಲ್ಲ, ನಮಗೆ ಅಧಿಕಾರವೂ ಇಲ್ಲ'' ಎಂದು ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ಸ್ಪಷ್ಟಪಡಿಸಿದ್ದಾರೆ.

  ಸದ್ಯಕ್ಕೆ ಯಾವುದೇ ಕ್ರಮ ಇಲ್ಲ

  ಸದ್ಯಕ್ಕೆ ಯಾವುದೇ ಕ್ರಮ ಇಲ್ಲ

  ಡ್ರಗ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದ್ರಜಿತ್ ಲಂಕೇಶ್ ಅವರನ್ನಾಗಲಿ ಅಥವಾ ಈ ಜಾಲದಲ್ಲಿ ಹೆಸರಿಸುವ ಯಾರನ್ನೂ ನಾವು ಕರೆದು ಮಾತುಕತೆ ಮಾಡುವುದು ಮಾಡಲ್ಲ. ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿರುವ ಹಿನ್ನೆಲೆ ಯಾರ ವಿರುದ್ಧವೂ ಸದ್ಯಕ್ಕೆ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

  ಕಲಾವಿದರಿಗೆ ಡ್ರಗ್ ನಂಟು ಸಾಬೀತಾದರೆ ಕಠಿಣ ಕ್ರಮ: ಸಾ.ರಾ.ಗೋವಿಂದುಕಲಾವಿದರಿಗೆ ಡ್ರಗ್ ನಂಟು ಸಾಬೀತಾದರೆ ಕಠಿಣ ಕ್ರಮ: ಸಾ.ರಾ.ಗೋವಿಂದು

  ತಪ್ಪು ಮಾಡಿದವರ ವಿರುದ್ಧ ಖಂಡಿತ ಕ್ರಮ

  ತಪ್ಪು ಮಾಡಿದವರ ವಿರುದ್ಧ ಖಂಡಿತ ಕ್ರಮ

  ಪೊಲೀಸರ ವಿಚಾರಣೆ ಬಳಿಕ ಅಥವಾ ನ್ಯಾಯಾಲಯದಲ್ಲಿ ತಪ್ಪು ಮಾಡಿದ್ದಾರೆ ಎಂದು ಆರೋಪ ಸಾಬೀತಾದರೆ ಅಂತವರ ವಿರುದ್ಧ ಖಂಡಿತ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕೂ ಮುಂಚೆ ನಾವು ಯಾರನ್ನು ತಪ್ಪಿತಸ್ಥರು ಎಂದು ಬೆರಳು ತೋರಿಸಲು ಆಗಲ್ಲ ಎಂದು ಸಾರಾ ಗೋವಿಂದು ತಿಳಿಸಿದ್ದಾರೆ.

  ಆರೋಪ ಸಾಬೀತು ಪಡಿಸಬೇಕು

  ಆರೋಪ ಸಾಬೀತು ಪಡಿಸಬೇಕು

  'ತೆವಲಿಗಾಗಿ ಒಂದೆರಡು ಸಿನಿಮಾ ಮಾಡಿದವರನ್ನು, ಸಿನಿಮಾ ಉದ್ಯಮದವರು ಎಂದು ಒಪ್ಪಿಕೊಳ್ಳಲಾಗದು. ಒಂದಿಬ್ಬರ ತಪ್ಪನ್ನು ಇಡೀ ಚಿತ್ರರಂಗದ ತಪ್ಪು ಎಂದು ಹೇಳಲೂ ಆಗದು. ಇಂದ್ರಜಿತ್ ಲಂಕೇಶ್ ಅವರು ಸಹ ಇಂಡಸ್ಟ್ರಿ ಮೇಲೆ ಆರೋಪ ಮಾಡಿದ್ದಾರೆ. ಅವರ ಆರೋಪವನ್ನು ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ' ಎಂದು ಸಾ ರಾ ಗೋವಿಂದು ಎಚ್ಚರಿಕೆ ನೀಡಿದ್ದಾರೆ.

  ಹಿಂದೆ ಸರಿದ ಹಿರಿಯರು?

  ಹಿಂದೆ ಸರಿದ ಹಿರಿಯರು?

  ಡ್ರಗ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಶಿವರಾಜ್ ಕುಮಾರ್, ದರ್ಶನ್, ಸುದೀಪ್, ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಹಲವರು ನಟರು ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಡ್ರಗ್ಸ್ ಬಳಕೆ ಮಾಡುವುದನ್ನು ನೋಡಿಲ್ಲ ಎಂದೇ ಹೇಳಿದ್ದಾರೆ. ಇದೀಗ, ಫಿಲಂ ಚೇಂಬರ್ ಸಹ ನಾವು ಈ ವಿಚಾರಕ್ಕೆ ತಲೆ ಹಾಕಲ್ಲ ಎಂದು ನೇರವಾಗಿ ಹೇಳಿದೆ. ಈ ಮೂಲಕ ಹಿರಿಯರು ಎನಿಸಿಕೊಂಡವರು ಈ ಡ್ರಗ್ಸ್ ವಿವಾದ ಅಥವಾ ಈ ಚರ್ಚೆಯಿಂದ ಹಿಂದೆ ಸರಿದಿದ್ದಾರೆ ಎನ್ನುವುದು ವಾಸ್ತವ.

  English summary
  Film chamber press meet: President Jairaj, sa ra govind, doddanna has give clarification on drug mafia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X