twitter
    For Quick Alerts
    ALLOW NOTIFICATIONS  
    For Daily Alerts

    'ಸತ್ತವರ ಬಗ್ಗೆ ಮಾತು ಬೇಡ', ಚಿರು ಸರ್ಜಾ ಸಾವಿನ ಬಗ್ಗೆ ಹೇಳಿಕೆ ಹಿಂಪಡೆದ ಇಂದ್ರಜಿತ್

    |

    ಸ್ಯಾಂಡಲ್ ವುಡ್ ನ ಕೆಲವು ನಟ-ನಟಿಯರು ಡ್ರಗ್ಸ್ ಮಾಫಿಯಾದಲ್ಲಿದ್ದಾರೆ, ಈ ಬಗ್ಗೆ ತನ್ನ ಬಳಿ ದಾಖಲೆಗಳಿವೆ ಎಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ತನ್ನ ಬಳಿಯಿದ್ದ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದಾರೆ.

    Recommended Video

    Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

    ಕನ್ನಡ ಕೆಲವು ನಟ-ನಟಿಯರು ನಶೆಯ ಗುಂಗಿನಲ್ಲಿ ತೇಲಾಡುತ್ತಾರೆ ಎಂದು ಹೇಳುವ ಜೊತೆಗೆ ಇತ್ತೀಚಿಗೆ ನಿಧನ ಹೊಂದಿದ ಯುವ ನಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಚಿರು ನಿಧನದ ಬಳಿಕ ಮರಣೋತ್ತರ ಪರೀಕ್ಷೆ ಯಾಕೆ ಮಾಡಿಲ್ಲ? ಎಂದು ಕೇಳಿದ್ದರು. ಒಂದು ವೇಳೆ ಮಾಡಿದ್ದರೆ ನಿಜಾಂಶ ಬಯಲಾಗುತ್ತಿತ್ತು ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು. ಆದರೆ ಈ ಮಾತನ್ನು ಈಗ ಇಂದ್ರಜಿತ್ ವಾಪಸ್ ತೆಗೆದುಕೊಂಡಿದ್ದಾರೆ. ಮುಂದೆ ಓದಿ...

    ಸಿಸಿಬಿ ಕೈ ಸೇರಿತು 'ಇಂದ್ರಜಿತ್ ಫೈಲ್': 15 ತಾರೆಯರ ವಿವರ ಹಸ್ತಾಂತರಸಿಸಿಬಿ ಕೈ ಸೇರಿತು 'ಇಂದ್ರಜಿತ್ ಫೈಲ್': 15 ತಾರೆಯರ ವಿವರ ಹಸ್ತಾಂತರ

     ಇಂದ್ರಜಿತ್ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು

    ಇಂದ್ರಜಿತ್ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು

    ಚಿರು ಸರ್ಜಾ ಸಾವನ್ನು ಪ್ರಶ್ನೆ ಮಾಡುತ್ತಿದ್ದಂತೆ ಅನೇಕರು ಇಂದ್ರಜಿತ್ ಹೇಳಿಕೆಯನ್ನು ಖಂಡಿಸಿದ್ದರು. ಚಿರು ಹೆಸರನ್ನು ಎಳೆದು ತಂದ ಬಗ್ಗೆ ನಟ ದರ್ಶನ್ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಇಂದ್ರಜಿತ್ ಹೇಳಿಕೆಯಿಂದ ಚಿರಂಜೀವಿ ಕುಟುಂಬದವರು ಕಣ್ಣೀರಾಕಿದ್ರು. ಚಿರು ಮೃತಪಟ್ಟು 3 ತಿಂಗಳಾಗಿದೆ ಅಷ್ಟೆ, ಕುಟುಂಬದವರು ಇನ್ನು ಚೇತರಿಸಿಕೊಂಡಿಲ್ಲ, ಅವರ ಪತ್ನಿ ಗರ್ಭಿಣಿ ಈ ಸಮಯದಲ್ಲಿ ಮತ್ತಷ್ಟು ನೋವು ಕೊಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ರಿಯಾಲಿಟಿ ಶೋ ಗಳ ಸ್ಟಾರ್‌ಗಳು ಸಿಕ್ಕಿಹಾಕಿಕೊಳ್ತಾರೆ: ಪ್ರಶಾಂತ್ ಸಂಬರಗಿರಿಯಾಲಿಟಿ ಶೋ ಗಳ ಸ್ಟಾರ್‌ಗಳು ಸಿಕ್ಕಿಹಾಕಿಕೊಳ್ತಾರೆ: ಪ್ರಶಾಂತ್ ಸಂಬರಗಿ

     ಹೇಳಿಕೆ ವಾಪಸ್ ಪಡೆದ ಇಂದ್ರಜಿತ್

    ಹೇಳಿಕೆ ವಾಪಸ್ ಪಡೆದ ಇಂದ್ರಜಿತ್

    ಆದರೀಗ ಈಗ ಇಂದ್ರಜಿತ್ ಲಂಕೇಶ್ ವಾಪಸ್ ಪಡೆದಿದ್ದಾರೆ. ಇಂದು ಸಿಸಿಬಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಇಂದ್ರಜಿತ್ ಚಿರು ಸಾವಿನ ಬಗ್ಗೆ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಸತ್ತವರ ಬಗ್ಗೆ ಮಾತನಾಡುವುದು ಬೇಡ ಎಂದಿದ್ದಾರೆ.

     ಚಿರು ಇದ್ದಿದ್ದರೆ ಮೇಘನಾ ಖುಷಿಯಾಗಿ ಇರುತ್ತಿದ್ದರು

    ಚಿರು ಇದ್ದಿದ್ದರೆ ಮೇಘನಾ ಖುಷಿಯಾಗಿ ಇರುತ್ತಿದ್ದರು

    ಅರ್ಜುನ್ ಸರ್ಜಾ ಹಾಗೂ ಚಿರು ಪತ್ನಿ ಮೇಘನಾ ರಾಜ್ ಕುಟುಂಬದವರಿಗೆ ಇಂದ್ರಜಿತ್ ಸ್ಪಷ್ಟನೆ ನೀಡಿದ್ದಾರೆ. "ಒಂದೇ ಒಂದು ಮಾತು ಹೇಳಿದೆ, ಚಿರಂಜೀವಿ ಸರ್ಜಾ ಅವರ ಮರಣೋತ್ತರ ಪರೀಕ್ಷೆ ಆಗಬೇಕಿತ್ತು ಅಂತ. ಆದರೆ ಅದನ್ನು ಈಗ ವಾಪಸ್ ಪಡೆಯುತ್ತೇನೆ. ಸತ್ತವರ ಮೇಲೆ ಸಿಂಪತಿ ಇರುತ್ತೆ, ಯುವ ನಟ ಉತ್ತಮ ಭವಿಷ್ಯವಿತ್ತು. ಅವರು ಇದ್ದಿದ್ದರೆ ಮೇಘನಾ ರಾಜ್ ತುಂಬಾ ಖುಷಿಯಾಗಿ ಇರುತ್ತಿದ್ದರು" ಎಂದು ಇಂದ್ರಜಿತ್ ಹೇಳಿದ್ದಾರೆ.

     ಚಿರು ವಿಚಾರ ಬೇಡ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ

    ಚಿರು ವಿಚಾರ ಬೇಡ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ

    "ಚಿರಂಜೀವಿ ಸಾವು ನಮಗೂ ತುಂಬಾ ನೋವಿದೆ, ಅದರ ಬಗ್ಗೆ ಈಗ ವಿಷಯ ಬೇಡ. ಮುಖ್ಯವಾದ ವಿಚಾರ ಅಂದರೆ ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು. ಯುವ ಪೀಳಿಗೆಗೆ ಒಂದೊಳ್ಳೆ ಸಂದೇಶ ರವಾನೆಯಾಗಬೇಕು ಎನ್ನುವುದು ನನ್ನ ಉದ್ದೇಶ" ಎಂದು ಸಿಸಿಬಿ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಇಂದ್ರಜಿತ್ ಈ ಹೇಳಿಕೆ ನೀಡಿದ್ದಾರೆ.

    English summary
    Director Indrajit Lankesh takes back His statement on Chiranjeevi Sarja's death.
    Monday, August 31, 2020, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X