For Quick Alerts
  ALLOW NOTIFICATIONS  
  For Daily Alerts

  ನಟಿಯರ ನ್ಯಾಯಾಂಗ ಬಂಧನ ವಿಸ್ತರಣೆ: ಹೈ ಕೋರ್ಟ್‌ ಮೊರೆ ಹೋದ ಸಂಜನಾ

  |

  ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಇಬ್ಬರಿಗೂ ಮತ್ತಷ್ಟು ದಿನ ಜೈಲೇ ಗತಿ. ನಟಿಯರ ಜಾಮೀನು ಅರ್ಜಿ ನಿರಾಕರಣೆ ಮಾಡಿರುವ ಎನ್‌ಡಿಪಿಎಸ್ ನ್ಯಾಯಾಲಯ ಇಬ್ಬರಿಗೂ ಅಕ್ಟೋಬರ್ 23ರ ವರೆಗೂ ನ್ಯಾಯಾಂಗ ಬಂಧನ ವಿಸ್ತರಿಸಿದೆ.

  ಮತ್ತೊಂದೆಡೆ ನಟಿ ಸಂಜನಾ ಗಲ್ರಾನಿ ಜಾಮೀನಿಗಾಗಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದು, ಈ ಬಾರಿ ಕರ್ನಾಟಕ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಶುಕ್ರವಾರ ನಟಿ ಸಂಜನಾ ಗಲ್ರಾನಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮುಂದೆ ಓದಿ....

  ಡ್ರಗ್ಸ್ ಪ್ರಕರಣ: ನಟಿ ಸಂಜನಾ-ರಾಗಿಣಿ ಜಾಮೀನು ಅರ್ಜಿ ವಜಾಡ್ರಗ್ಸ್ ಪ್ರಕರಣ: ನಟಿ ಸಂಜನಾ-ರಾಗಿಣಿ ಜಾಮೀನು ಅರ್ಜಿ ವಜಾ

  ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

  ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

  ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಹೈ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸಂಜನಾ ಪರ ವಕೀಲರಿಂದ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

  ಸೆಪ್ಟೆಂಬರ್ 8ರಂದು ಬಂಧನ

  ಸೆಪ್ಟೆಂಬರ್ 8ರಂದು ಬಂಧನ

  ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು ನಟಿ ಸಂಜನಾ ಮನೆ ಮೇಲೆ ಸೆಪ್ಟೆಂಬರ್ 8ರಂದು ದಾಳಿ ಮಾಡಿದ್ದರು. ಬಳಿಕ ಅವರನ್ನು ವಶಕ್ಕೆ ಪಡೆದು 8 ದಿನಗಳ ಕಾಲ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಸೆಪ್ಟೆಂಬರ್ 16ರಂದು ಎನ್‌ಡಿಪಿಎಸ್ ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು. ಅಂದಿನಿಂದ ಸಂಜನಾ ಜೈಲಿನಲ್ಲಿಯೇ ಇದ್ದಾರೆ.

  Bhakta Prahlada ಚಿತ್ರದಲ್ಲಿ ನಟಿಸಿದ್ದಾರೆ ನನ್ನ ಭಾಗ್ಯ ಎಂದು ಕಣ್ಣೀರಿಟ್ಟ ಅಪ್ಪು | Filmibeat Kannada
  ಇಡಿ ಅಧಿಕಾರಿಗಳಿಂದಲೂ ವಿಚಾರಣೆ

  ಇಡಿ ಅಧಿಕಾರಿಗಳಿಂದಲೂ ವಿಚಾರಣೆ

  ಡ್ರಗ್ಸ್ ಪ್ರಕರಣದ ತನಿಖೆ ವೇಳೆ ನಟಿಯರಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿತ್ತು. ಅಕ್ರಮ ಹಣ ವರ್ಗಾವಣೆ, ಹೂಡಿಕೆ ಮತ್ತು ಆಸ್ತಿಗಳ ಖರೀದಿ ಕುರಿತು ಇಡಿ ತನಿಖೆ ಕೈಗೊಂಡಿದೆ. ಜಾರಿ ನಿರ್ದೇಶನಾಲಯ ಐದು ದಿನಗಳ ಕಾಲ ನಟಿಯರನ್ನು ವಶಕ್ಕೆ ಪಡೆದು ಜೈಲಿನಲ್ಲಿಯೇ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

  English summary
  Drugs Case: Actress Sanjana Galrani has moved the Karnataka high court seeking bail in connection with the drug case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X