For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಗೆ ನಶೆಯ ನಂಟು: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ''ಚಿತ್ರರಂಗವನ್ನು ಮಾತ್ರ ಹೈಲೈಟ್ ಮಾಡಬೇಡಿ. ತಂದೆ ತಾಯಿ ಕಷ್ಟಪಟ್ಟು ಬೆಳಸಿ ಕನಸು ಕಾಣುತ್ತಿರುತ್ತಾರೆ, ಆದರೆ ದರಿದ್ರ ಡ್ರಗ್ಸ್ ತೆಗೆದುಕೊಂಡು ಹಾಳಾಗಬೇಡಿ'' ಎಂದು ಹೇಳಿದ್ದಾರೆ.

  ಕನ್ನಡ ಚಲನಚಿತ್ರರಂಗದ ಪರವಾಗಿ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಇಂದು (ಸೆಪ್ಟಂಬರ್ 9) ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆ ಮತ್ತು ಚಿತ್ರಮಂದಿರ ತೆರೆಯಲು ಅನುವು ಮಾಡಿಕೊಡಬೇಕು ಎಂದು ವಿನಂತಿಸಿದೆ. ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಶಿವರಾಜ್ ಕುಮಾರ್, ತಾರಾ ಅನುರಾಧ, ಸಾ.ರಾ.ಗೋವಿಂದು, ನಟ ಯಶ್ ಮತ್ತು ದುನಿಯಾ ವಿಜಯ್ ಹಾಗೂ ನಿರ್ಮಾಪಕರು, ನಿರ್ದೇಶಕರು ಇದ್ದರು. ಬಳಿಕ ಮಾತನಾಡಿದ ಯಶ್ ಡ್ರಗ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ...

  ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ಕನ್ನಡ ನಟರ ಹೆಸರು ಹೇಳಿದ ಸಂಜನಾಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ಕನ್ನಡ ನಟರ ಹೆಸರು ಹೇಳಿದ ಸಂಜನಾ

   ಚಿತ್ರರಂಗ ಅಂತ ಹೇಳಬೇಡಿ- ಯಶ್

  ಚಿತ್ರರಂಗ ಅಂತ ಹೇಳಬೇಡಿ- ಯಶ್

  "ಡ್ರಗ್ಸ್ ಎನ್ನುವುದು ದೇಶ ಹಾಗು ಜಗತ್ತಿಗೆ ಮಾರಕ. ಕೇವಲ ಚಿತ್ರರಂಗ ಮಾತ್ರವಲ್ಲ, ಎಲ್ಲಾ ವಲಯದವರು ಇದ್ದಾರೆ. ರಾಜ್ಯದ ಯುವಕರು, ಯುವತಿಯರು, ಜನರು ಅಂತಾ ಹೇಳಿ. ಡ್ರಗ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿ ಬೇಕು ಈ ನಿಟ್ಟಿನಲ್ಲಿ ಮಾಧ್ಯಮಗಳು ಒಳ್ಳೆಯ ಕೆಲಸ ಮಾಡುತ್ತಿವೆ" ಎಂದು ಯಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಯಶ್-ರಾಧಿಕಾ ಮುದ್ದು ಮಗನ ಹೆಸರು ಬಹಿರಂಗಯಶ್-ರಾಧಿಕಾ ಮುದ್ದು ಮಗನ ಹೆಸರು ಬಹಿರಂಗ

  ದರಿದ್ರ ಡ್ರಗ್ಸ್ ತಗೊಂಡು ಹಾಳಾಗಬೇಡಿ

  ದರಿದ್ರ ಡ್ರಗ್ಸ್ ತಗೊಂಡು ಹಾಳಾಗಬೇಡಿ

  "ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ನಿಮ್ಮ ಅಪ್ಪ ಅಮ್ಮ ಕೊಟ್ಟಿರುವ ಭಿಕ್ಷೆ. ನನಗೂ ಮಕ್ಕಳಿದ್ದಾರೆ, ಮಕ್ಕಳಿಗೆ ಏನು ಸಮಸ್ಯೆ ಆಗುತ್ತೋ ಅಂತಾ ಅಪ್ಪ ಅಮ್ಮಂದಿರು ಯೋಚನೆ ಮಾಡಿ ಸಾಕಿರುತ್ತಾರೆ. ಮಕ್ಕಳ ಮೇಲೆ ದೊಡ್ಡ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ದರಿದ್ರ ಡ್ರಗ್ಸ್ ತೆಗೆದುಕೊಂಡು ಹಾಳಾಗಬೇಡಿ. ಅಪ್ಪ-ಅಮ್ಮನಿಗಾಗಿ ಗೌರವ ತರುವ ಕೆಲಸ ಮಾಡಿ. ಮರ್ಯಾದೆಯಿಂದ ಇಂತಹ ದುಷ್ಟ ಚಟಗಳನ್ನು ಬಿಡಿ" ಎಂದು ಡ್ರಗ್ಸ್ ತೆಗೆದುಕೊಳ್ಳುವವರಿಗೆ ಸಲಹೆ ನೀಡಿದ್ದಾರೆ.

   ಶಿವರಾಜ್ ಕುಮಾರ್ ಹೇಳಿಕೆ

  ಶಿವರಾಜ್ ಕುಮಾರ್ ಹೇಳಿಕೆ

  ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಿರುವ ನಟ ಶಿವರಾಜ್ ಕುಮಾರ್, ''ಡ್ರಗ್ಸ್ ದಂಧೆ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ವೇಳೆ ನಾವು ಏನು ಮಾತಾಡೋಕೆ ಆಗಲ್ಲ. ಎಲ್ಲದಕ್ಕೂ ದೇವರು ಒಬ್ಬ ಇದ್ದಾನೆ ಡಿಪಾರ್ಟ್ಮೆಂಟ್ ನಿಂದ ತನಿಖೆ ಆಗ್ತಿದೆ. ತನಿಖೆ ವೇಳೆ ಯಾರು ಯಾರು ಇದ್ದಾರೋ ಅವರು ಉತ್ತರ ಕೊಡ್ತಿದ್ದಾರೆ" ಎಂದಿದ್ದಾರೆ.

  Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
   ನಟಿ ಸಂಜನಾ, ರಾಗಿಣಿ ಅರೆಸ್ಟ್

  ನಟಿ ಸಂಜನಾ, ರಾಗಿಣಿ ಅರೆಸ್ಟ್

  ಡ್ರಗ್ಸ್ ಜಾಲದಲ್ಲಿ ನಂಟು ಹೊಂದಿರುವ ಆರೋಪದಡಿ ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಸಾಕಷ್ಟು ಮಂದಿಯ ಹೆಸರು ಕೇಳಿ ಬರುತ್ತಿದ್ದು, ಎಲ್ಲರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

  English summary
  Rocking star Yash reaction about Drugs link to Sandalwood. He Messages To Youngster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X