»   » 'ಭರ್ಜರಿ' ಗೆದ್ರೂ, ಧ್ರುವ ಸರ್ಜಾ ಬೇಸರ ಆಗಿರುವುದೇಕೆ?

'ಭರ್ಜರಿ' ಗೆದ್ರೂ, ಧ್ರುವ ಸರ್ಜಾ ಬೇಸರ ಆಗಿರುವುದೇಕೆ?

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರೆಲ್ಲಾ 'ಅದ್ಧೂರಿ', 'ಬಹುದ್ದೂರ್' ನಂತರ ಹ್ಯಾಟ್ರಿಕ್ ಬಾರಿಸಿದ್ದಾರೆ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ 'ಭರ್ಜರಿ' ಕಮಾಲ್ ಮಾಡ್ತಿದೆ.

ಇಡೀ ಚಿತ್ರತಂಡ ಸಿನಿಮಾ ಗೆದ್ದಿರುವ ಖುಷಿಯಲ್ಲಿದೆ. ಆದ್ರೆ, ನಟ ಧ್ರುವ ಸರ್ಜಾ ಮಾತ್ರ ಅದ್ಯಾಕೋ ತುಂಬ ಬೇಜಾರು ಮಾಡಿಕೊಂಡಿದ್ದಾರೆ. ಸುಮಾರು ಎರಡೂವರೆ ವರ್ಷ ಕಷ್ಟಪಟ್ಟು ಮಾಡಿರುವ ಸಿನಿಮಾವನ್ನ ಜನರು ಅಪ್ಪಿಕೊಂಡಿದ್ದರೂ, ಸಂತಸಕ್ಕಿಂತ ಬೇಸರ ಹೆಚ್ಚು ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ, ಧ್ರುವ ಸರ್ಜಾ ಬೇಸರವಾಗಿದ್ದೇಕೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಎಲ್ಲರಿಗೂ ಥ್ಯಾಂಕ್ಸ್

''ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿದೆ. ಇದು ತುಂಬ ಖುಷಿ ಆಗ್ತಿದೆ. ಎಲ್ಲ ಕನ್ನಡಿಗರಿಗೂ, ಸಿನಿಮಾ ನೋಡಿರುವ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು'' - ಧ್ರುವ ಸರ್ಜಾ, ನಟ

ಸೋದರಳಿಯನ 'ಭರ್ಜರಿ' ನೋಡಿ ಅರ್ಜುನ್ ಸರ್ಜಾ ಫುಲ್ ಖುಷ್.!

ಆದ್ರೆ, ತುಂಬ ಬೇಜಾರು ಆಗ್ತಿದೆ

''ಆದ್ರೆ, ತುಂಬ ಬೇಜಾರು ಆಗುತ್ತಿದೆ. ಯಾಕಂದ್ರೆ, ತುಂಬ ಜನ ಯ್ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನ ಅಪ್ ಲೋಡ್ ಮಾಡ್ತಿದ್ದಾರೆ. ಸುಮಾರು 2 ಸಾವಿರದಿಂದ 3 ಸಾವಿರ ಲಿಂಕ್ಸ್ ಡಿಲೀಟ್ ಮಾಡಿದ್ದೀವಿ'' - ಧ್ರುವ ಸರ್ಜಾ, ನಟ

ಭರ್ಜರಿ 'ಫೇಸ್ ಬುಕ್ ಲೈವ್' ಮಾಡಿ ಸಿಕ್ಕಿಬಿದ್ದ ಯುವಕ ಕೊಟ್ಟ ಕಾರಣ.!

ಪ್ಲೀಸ್ ಈ ರೀತಿ ಮಾಡ್ಬೇಡಿ

''ನಿಮ್ಗೆಲ್ಲಾ ಏನ್ ಹೇಳ್ತಿನಿ ಅಂದ್ರೆ, ತುಂಬ ಜನ ಟೆಕ್ನಿಶಿಯನ್ ಗಳು ಚಿತ್ರದಲ್ಲಿ ಕೆಲಸ ಮಾಡಿರುತ್ತಾರೆ. ಅವರಿಗೂ ಫ್ಯಾಮಿಲಿ ಇರುತ್ತೆ. ನೀವು ನಿಮ್ಮ ಫ್ಯಾಂಟಸಿಗೆ, ನಿಮ್ಮ ಪೇಜ್ ಲೈಕ್ಸ್ ಗೋಸ್ಕರ ಈ ರೀತಿ ಮಾಡಬಹುದು. ಪ್ಲೀಸ್ ಮಾಡ್ಬೇಡಿ'' - ಧ್ರುವ ಸರ್ಜಾ, ನಟ

ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಸಿನಿಮಾ ಬಿಟ್ಟಿ ಪ್ರಸಾರ.!

ಖುಷಿಯಲ್ಲೂ ಬೇಜಾರಾಗ್ತಿದೆ

''ನಿಜವಾಗಲೂ ಈ ಸಿನಿಮಾ ಮಾಡಬೇಕಾದರೇ, ಎರಡೂವರೆ ವರ್ಷಗಳೂ ಅಡೆತಡೆಗಳು ಬಂದ್ವು. ಇಷ್ಟೆಲ್ಲಾ ಆದ್ಮೆಲೂ, ನಿಮ್ಮ ಮುಂದೆ ಬಂದಿರುವ ಈ ಚಿತ್ರವನ್ನ ಎಲ್ಲರೂ ಸ್ವೀಕರಿಸಿದ್ದೀರಾ. ತುಂಬ ಖುಷಿ ಆಯ್ತು. ಆದ್ರೆ, ಇಲ್ಲಿಯೂ ಒಂಥರಾ ಅಡೆತಡೆ ಬರ್ತಿದೆ. ಖುಷಿಯಲ್ಲಿ ಬೇಜಾರು ಆಗ್ತಿದೆ. ಎನಿ ವೇ ಥ್ಯಾಂಕ್ ಯೂ ಸೋ ಮಚ್'' - ಧ್ರುವ ಸರ್ಜಾ, ನಟ

ಬಾಕ್ಸ್ ಅಫೀಸ್ ನಲ್ಲಿ 'ಭರ್ಜರಿ' ಸೌಂಡು: ಕಲೆಕ್ಷನ್ ಸೂಪರ್ರೋ ಸೂಪರ್ರು.!

ಧ್ರುವ ಸರ್ಜಾ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ

English summary
Kannada Actor Dhruv Sarja has taken his facebook account to express his boredom against piracy of Bharjari Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada