»   » ನಟಿ ಲೀಲಾವತಿ, ಜಯಂತಿಗೆ ಕಲಾಶ್ರೀ ಪುರಸ್ಕಾರ

ನಟಿ ಲೀಲಾವತಿ, ಜಯಂತಿಗೆ ಕಲಾಶ್ರೀ ಪುರಸ್ಕಾರ

Posted By:
Subscribe to Filmibeat Kannada
Actress Leelavathi
ಕನ್ನಡ ಚಿತ್ರರಂಗದ ಸ್ವಾಭಿಮಾನದ ನಲ್ಲೆ ಲೀಲಾವತಿ ಹಾಗೂ ಅಭಿನಯ ಶಾರದೆ ಜಯಂತಿ ಅವರು 'ಡಿಎಸ್-ಮ್ಯಾಕ್ಸ್ ಕಲಾಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಜೂ.19ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನೀಡಿ ಸನ್ಮಾನಿಸಲಾಗುತ್ತಿದೆ.

ಡಿಎಸ್-ಮ್ಯಾಕ್ಸ್ ಪ್ರಾಪರ್ಟೀಸ್ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಮಂದಿಗೆ 'ಡಿಎಸ್-ಮ್ಯಾಕ್ಸ್ ಕಲಾಶ್ರೀ' ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ದಯಾನಂದ್ ವಿವರ ನೀಡಿದ್ದಾರೆ. (ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಹಿರಿಯ ಅಭಿನೇತ್ರಿ)

ಪ್ರಶಸ್ತಿಯು ರು.10 ಸಾವಿರ ನಗದು, ಪ್ರಶಸ್ತಿ ಫಲಕ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ನಟ, ನಿರ್ಮಾಪಕ ದ್ವಾರಕೀಶ್, ನವರಸ ನಾಯಕ ಜಗ್ಗೇಶ್, ಪ್ರೇಮ್, ಶ್ರೀನಗರ ಕಿಟ್ಟಿ, ನಟಿ ದುನಿಯಾ ರಶ್ಮಿ, ರಚಿತಾ ರಾಮ್ ಮತ್ತಿತತರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. (ಏಜೆನ್ಸೀಸ್)

English summary
Kannada films senior actress Leelavathi and Jayanthi have been selected for the 'DS-Max Kalashree Award' among the 12 artists giving by DS-Max properties. The award will be presents on 19th June at Chowdaiah Memorial hall, Bangalore.
Please Wait while comments are loading...