»   » ಕನ್ನಡದಲ್ಲಿ ತೆರೆಗೆ ಬರಲು ಸಜ್ಜಾಗಿದೆ ಡಬ್ಬಿಂಗ್ ಸಿನಿಮಾ

ಕನ್ನಡದಲ್ಲಿ ತೆರೆಗೆ ಬರಲು ಸಜ್ಜಾಗಿದೆ ಡಬ್ಬಿಂಗ್ ಸಿನಿಮಾ

By: Sonu Gowda
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಡಬ್ಬಿಂಗ್ ಬೇಕೇ? ಬೇಡವೇ?, ಅಂತ ವಾದ-ವಿವಾದಗಳು ಆಗುತ್ತಿದ್ದಂತೆ ಹಿಂದಿ ಚಿತ್ರವೊಂದು ಕನ್ನಡಕ್ಕೆ ಡಬ್ ಆಗಿ ಸೆನ್ಸಾರ್ ಕೂಡ ಆಗಿದ್ದು, ಇದೀಗ ಬಿಡುಗಡೆಗೆ ತಯಾರಾಗಿ ನಿಂತಿದೆ.

ಹಿಂದಿ ಭಾಷೆಯಲ್ಲಿ ತಯಾರಾಗಿದ್ದ 'ಮೈ ಹಸ್ಬೆಂಡ್ಸ್ ವೈಫ್' ಎಂಬ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದು, ಜೂನ್ 2 ರಂದು ತೆರೆ ಕಾಣಲು ಸಜ್ಜಾಗಿ ನಿಂತಿದೆ. 1969ರ ನಂತರ ಕನ್ನಡ ಭಾಷೆಯಲ್ಲಿ ಡಬ್ಬಿಂಗ್ ಚಿತ್ರವೊಂದು ತೆರೆ ಕಾಣುತ್ತಿದೆ.[ಡಬ್ಬಿಂಗ್ ಮೇಲಿದ್ದ ನಿಷೇಧ ತೆರವು, ಮುಂದೇನು?]

ಕನ್ನಡಕ್ಕೆ ಡಬ್ ಆಗಿರುವ ಈ ಸಿನಿಮಾ ಕನ್ನಡ ಭಾಷೆಯಲ್ಲಿ 'ನಾನು ನನ್ನ ಪ್ರೀತಿ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. ಅಂದಹಾಗೆ ಈ ಚಿತ್ರವನ್ನು ದರ್ಶನ್ ಎಂಟರ್ಪ್ರೈಸನ್ ಅವರು ಕನ್ನಡಕ್ಕೆ ಡಬ್ ಮಾಡಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿ ಯು/ಎ ಪ್ರಮಾಣಪತ್ರ ನೀಡಿ ಸಿನಿಮಾ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.[ಶಿವರಾಜ್ 'ಸ್ಟಾರ್ಸ್' ಗೆ ಜನಸಾಮಾನ್ಯರ 'ಹಿಡಿಶಾಪ']

Dubbed hindi movie My Husbands Wife in kannada release on june 2

ಇದೀಗ ಈ ಚಿತ್ರ ಸುದ್ದಿಗೆ ಬಂದ ಕಾರಣ ಮತ್ತೆ ಡಬ್ಬಿಂಗ್ ವಿವಾದಕ್ಕೆ ಚೈತನ್ಯ ಬಂದಂತಾಗಿದ್ದು, ಡಬ್ಬಿಂಗ್ ಪರ-ವಿರೋದಿಗಳು ಡಬ್ಬಿಂಗ್ ಬಗ್ಗೆ ಸಮರ ಸಾರಲು ತೊಡೆ ತಟ್ಟಿ ನಿಂತರೂ ಆಶ್ಚರ್ಯ ಇಲ್ಲ.['ಡಬ್ಬಿಂಗ್' ಪ್ರತಿಭಟನೆ ಮರೆತುಬಿಟ್ರಾ ವಾಟಾಳ್ ನಾಗರಾಜ್?]

ಈ ಮೊದಲು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ತೆಲುಗು 'ಐಸ್‌ ಕ್ರೀಮ್' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿ ಕನ್ನಡ ಭಾಷೆಯ ಕಗ್ಗೊಲೆ ಆಗಿರುವ ಬಗ್ಗೆ ಪರ-ವಿರೋದಿಗಳು ಸಾಕಷ್ಟು ಚರ್ಚೆ ನಡೆಸಿದ್ದರು. [ವರ್ಮಾರ ತೆಲುಗಿನ 'ಐಸ್ ಕ್ರೀಮ್' ಮಾಡುತ್ತಿದೆ ಕನ್ನಡದ ಕಗ್ಗೊಲೆ] ಇದೀಗ ಈ ಚಿತ್ರದ ಸರದಿ.

English summary
Hindi Movie 'My Husbands Wife' Dubbed in kannada. The movie is all set to releasing on June 2nd.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada