twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಮತ್ತು ಸಿನಿ ಕಾರ್ಮಿಕರ ಅನ್ನದ ಪ್ರಶ್ನೆ

    By * ರವೀಂದ್ರ ಕೊಟಕಿ, ನಿರ್ದೇಶಕರು
    |
    <ul id="pagination-digg"><li class="next"><a href="/news/dubbing-threat-to-culture-movie-nativity-kfcc-kfi-065529.html">Next »</a></li></ul>

    Dubbing in Kannada
    ಕರ್ನಾಟಕದಲ್ಲಿ ಈಗ ಇಲ್ಲಿ ನೋಡಿದರೂ ಡಬ್ಬಿಂಗ್ ಎಂಬ ಮಾಯಾಜಿಂಕೆಯದೇ ಚರ್ಚೆ, ವಾಗ್ವಾದ. ಕುರುಡ ಆನೆಯನ್ನು ಮುಟ್ಟಿ ಅದರ ಅಂದ, ಗಾತ್ರದ ಬಗ್ಗೆ ವರ್ಣಿಸಿದಂತಾಗಿದೆ ಪ್ರಸುತ್ತ ಚರ್ಚೆ-ವಾಗ್ವಾದವೆಲ್ಲ. ಒಂದು ಕಡೆ ಡಬ್ಬಿಂಗ್ ಬೇಕು ಎಂಬ ವಾದ, ಇನ್ನೊಂದಡೆ ಬೇಡ ಎಂಬ ಕೂಗು. ಎರಡಕ್ಕೂ ಅವರವರದೇ ಆದ ಸಮರ್ಥನೆಗಳು ಇವೇ. ಎರಡರಲ್ಲಿಯೂ ಒಂದಷ್ಟು ಅರ್ಥಪೂರ್ಣವಾದ ಸಂಗತಿಗಳು, ಸದಾಶಯಗಳೂ ಕೂಡ ವ್ಯಕ್ತವಾಗುತ್ತಿವೆ.

    ಡಬ್ಬಿಂಗ್ ಮತ್ತು ಅನ್ನದ ಪ್ರಶ್ನೆ

    ಡಬ್ಬಿಂಗ್ ಬಗ್ಗೆ ಚಕಾರಯೆತ್ತಿರುವ ಕನ್ನಡದ ಕಲಾವಿದರು ಇದರಿಂದ ನಮ್ಮ ಅನ್ನಕ್ಕೆ ಕಲ್ಲು ಬೀಳುತ್ತದೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಡಬ್ಬಿಂಗ್ ಪರರು ಡಬ್ಬಿಂಗ್‌ನಿಂದ ಸಾಕಷ್ಟು ಬಹರಗಾರರು, ಕಂಠದಾನ ಕಲಾವಿದರು ಸೇರಿದಂತೆ ಅನೇಕರಿಗೆ ಹಲವಾರು ಉದ್ಯೋಗಗಳು ಸೃಷ್ಟಿಯಾಗುತ್ತದೆಂದು ತಮ್ಮ ವಾಯಿಸ್‌ನ್ನು ಡಬ್ ಮಾಡುತ್ತಿದ್ದಾರೆ. ಆದರೆ ಒಂದು ಮಾತಂತೂ ಸತ್ಯ.

    ಪ್ರಸ್ತಕ ನಮ್ಮ ಸಿನಿಮಾರಂಗದ ಸ್ಥಿತಿಗಳನ್ನು ಗಮನಿಸಿದರೆ ಇಂದು ಬರುತ್ತಿರುವ ಸಿನಿಮಾಗಳು, ಚಿತ್ರರಂಗ ನಡೆಯುತ್ತಿರುವ ದಾರಿ ನೋಡಿದಾಗ ಡಬ್ಬಿಂಗ್ ಬರಲಿ, ಬರದೇ ಇರಲಿ ಕಲಾವಿದರಿಗೆ ಮುಂದಿನ ದಿನಗಳು ಅತ್ಯಂತ ಕರಾಳ ದಿನಗಳೆ ಆಗಿರುತ್ತವೆ. ಸಿನಿಮಾಗಳು ಗೆದ್ದರೆ ಮಾತ್ರ ನಿರ್ಮಾಪಕರು ಸಿನಿಮಾ ಮಾಡಲು ಉತ್ಸಾಹ ತೋರುತ್ತಾರೆ. ಈ ವರ್ಷ ಬಿಡುಗಡೆಯಾದ ಸಿನಿಮಾಗಳ ಪೈಕಿ ಗೋವಿಂದಾಯ ನಮಃ ಮಾತ್ರ ನಿರ್ಮಾಪಕರ ಮುಖದಲ್ಲಿ ಮಂದಹಾಸ ಬೀರಿದೆ.

    ಪರಸ್ಥಿತಿ ಹೀಗಿರುವಾಗ ಮುಂದೆ ಎಷ್ಟು ಮುಂದಿ ನಿರ್ಮಾಪಕರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುತ್ತಾರೆ? ಎಷ್ಟು ಜನ ಕಲಾವಿದರಿಗೆ ಅವಕಾಶ ದೊರೆಯುತ್ತದೆ? ಈಗಾಗಿ ಅನ್ನದ ಪ್ರಶ್ನೆಯೇ ಅಂತಿಮವಾಗಿ ಡಬ್ಬಿಂಗ್ ವಿರುದ್ದ ಸಮರದ ವಿಷಯವಲ್ಲ, ಅದು ಅಪ್ರಸುತ್ತ. ಏಕೆಂದರೆ ಈಗಾಗಲೇ ಲಾಟರಿ, ಸಾರಾಯಿ ನಿಷೇಧ ಸಂದರ್ಭದಲ್ಲೂ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು, ಆದರೂ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಜೀವನ ರೂಪಿಸಿಕೊಂಡಿದ್ದಾರೆ.

    ಇನ್ನು ಡಬ್ಬಿಂಗ್ ವಾಯಿಸ್‌ನಲ್ಲಿ ಮಾಡುತ್ತಿರುವವರು ಹೇಳುತ್ತಿರುವುದು ಡಬ್ಬಿಂಗ್‌ನಿಂದ ದೊಡ್ಡಪ್ರಮಾಣದಲ್ಲಿ ಅವಕಾಶಗಳು ಹರಿದುಬರುತ್ತದೆ. ನಿಜ ಆರಂಭದಲ್ಲಿ ಅವಕಾಶಗಳು ಹರಿದು ಬಂದಂತೆ ಮೇಲುನೋಟಕ್ಕೆ ಭಾಸವಾಗುತ್ತದೆ. ಆದರೆ ಕ್ರಮೇಣ ಅವಕಾಶಗಳನ್ನು ಸ್ಥಳೀಯರಿಗೆ ಮರೀಚಿಕೆಯಾಗುತ್ತ ಹೋಗುತ್ತದೆ.

    ವಾಸ್ತವದ ಸಂಗತಿ ನಮ್ಮ ಡಬ್ಬಿಂಗ್ ಧ್ವನಿಗಳಿಗೆ ಗೊತ್ತಿಲ್ಲ. ಪೆನ್ನು-ಪೇಪರ್ ಹಿಡಿದು ಡಬ್ಬಿಂಗ್ ಸಿನಿಮಾ ಅಥವಾ ಧಾರಾವಾಹಿಗೆ ಸಂಭಾಷಣೆ ಬರೆಯೋವರಿಗೆ ಪ್ರತ್ಯೇಕವಾಗಿ ಯಾವುದೇ ದೊಡ್ಡ ಕೆಲಸವೇನು ಇರುವುದಿಲ್ಲ. ಉದಾಹರಣೆಗೆ: ಮಗಧೀರ ಸಿನಿಮಾ, ಅಲ್ಲಿ ನಾಯಕ ವೀರಾವೇಶದಲ್ಲಿ ಘರ್ಜಿಸುತ್ತ ಡೈಲಾಗ್ ಹೊಡೆಯುತ್ತಿರುತ್ತಾನೆ.

    ಇಲ್ಲಿ ಈ ಲೇಖಕ (ಸಂಭಾಷಣೆಗಾರ ಎಂದು ಕರೆದುಬಿಡೋಣ) ಮಾಡಬೇಕಾದ ಕೆಲಸ ನಾಯಕನ ಲಿಪ್ ಮೂವೆಂಟ್ (ತುಟಿ ಚಲನೆ) ನೋಡಿಕೊಂಡು ಅದಕ್ಕೆ ಸರಿ ಹೋದುವಂತ ಭಾಷಾಂತರ ಮಾಡುವುದು. ಇನ್ನು ಹಾಡುಗಳು ಇದರಿಂದ ಹೊರತಲ್ಲ. ಮೊದಮೊದಲು ಇಲ್ಲಿಯೇ ಡಬ್ಬಿಂಗ್ ಕೆಲಸಗಳು ನಡೆಯುತ್ತವೆ. ಆದರೆ ಮುಂದೆ?

    ನೆಲೆ ಹೈದರಾಬಾದ್ ಅಥವಾ ಮದ್ರಾಸಿಪಟ್ಟಣಕ್ಕೋ ಶಿಫ್ಟ್ ಯಾಗುತ್ತೆ. ಇಲ್ಲಿಂದ ಒಬ್ಬ ದ್ವಿಭಾಷೆ ಬಲ್ಲ ಸಂಭಾಷಣೆಗಾರ ಹೋಗಿ ಕೂತರೇ ಸಾಕು ಉಳಿದ ಎಲ್ಲಾ ಕೆಲಸ ಅಲ್ಲಿಯ ಸ್ಟುಡೀಯೋಗಳಲ್ಲಿ ನಡೆದು ಹೋಗುತ್ತದೆ.

    ಅಲ್ಲಿಯ ಕಂಠದಾನ ಕಲಾವಿದರು, ಗಾಯಕರು, ತಂತ್ರಜ್ಞಾನರು ಸೇರಿ ಡಬ್ಬಿಂಗ್ ನಿರ್ಮಾಪಕನ ಕೈಗೆ ರೀಲ್ ಕೊಟ್ಟು ಕಳಿಸುತ್ತಾರೆ ಇಲ್ಲ ಅವರೇ ರೀಲ್‌ನ ತಂದು ಒಪ್ಪಿಸುತ್ತಾರೆ. ಇದೇ ಕೆಲಸ ಪ್ರಸುತ್ತ ತಮಿಳಿನಿಂದ ತೆಲುಗಿಗೆ ಡಬ್ಬಿಂಗ್ ಆಗುತ್ತಿರುವ ಸಿನಿಮಾಗಳಲ್ಲಿ ಕಂಡು ಬರುತ್ತಿರುವುದು. ಇದೇ ಮಾತು ಹೆಚ್ಚುಕಮ್ಮಿ ಡಬ್ಬಿಂಗ್ ಧಾರವಾಹಿಗಳಿಗೂ ಅನ್ವಯಿಸುತ್ತದೆ. ಡಬ್ಬಿಂಗ್ ನಿಂದ ಸಂಸ್ಕೃತಿ ಹಾಳಾಗುತ್ತದೆಯೇ? ಮುಂದೆ ಓದಿ....

    <ul id="pagination-digg"><li class="next"><a href="/news/dubbing-threat-to-culture-movie-nativity-kfcc-kfi-065529.html">Next »</a></li></ul>

    English summary
    Dubbing debate: KFCC is opposing dubbing in kannada film industry will snatch daily bread and butter from daily cine workers. whether Dubbing can be boon or bane to industry or workers here is report by Ravindra Kotaki.
    Friday, August 31, 2012, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X