»   » ಜಗ್ಗೇಶ್ ರ 'ನೀರ್ ದೋಸೆ'ಯ ಸಖತ್ 'ಸ್ಯಾಂಪಲ್' ಡೈಲಾಗ್ ಸೂಪರ್

ಜಗ್ಗೇಶ್ ರ 'ನೀರ್ ದೋಸೆ'ಯ ಸಖತ್ 'ಸ್ಯಾಂಪಲ್' ಡೈಲಾಗ್ ಸೂಪರ್

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರ ಡೈಲಾಗ್ ಅಂದರೆ ಕೇಳಬೇಕೇ?, ಪಕ್ಕಾ ಡಬಲ್ ಮೀನಿಂಗ್ ಜೊತೆಗೆ ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡುತ್ತಾರೆ. ಇದೀಗ ಅಂತಹದೇ ವಿಪರೀತ ನಕ್ಕು ನಕ್ಕು ಸುಸ್ತಾಗಿಸುವಂತಹ ಡೈಲಾಗ್ ಗಳು ನಿರ್ದೇಶಕ ವಿಜಯ್ ಪ್ರಸಾದ್ ಅವರು ಆಕ್ಷನ್-ಕಟ್ ಹೇಳಿರುವ 'ನೀರ್ ದೋಸೆ' ಚಿತ್ರದಲ್ಲಿವೆ.

'ನೀರ್ ದೋಸೆ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರತಂಡ ಡಬ್ಬಿಂಗ್ ಕಾರ್ಯದಲ್ಲಿ ನಿರತವಾಗಿದೆ. ಬಹಳ ವರ್ಷಗಳಿಂದ ನಿಂತ ನೀರಾಗಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಸಿನಿಮಾ ಕೊನೆಗೂ ಪೂರ್ತಿಯಾಗಿದೆ.[ಅರೆರೆ.! ಜಗ್ಗೇಶ್ ಮತ್ತೆ ಮದುವೆ ಆದ್ರಾ ಏನ್ ಕತೆ]


'ಸಿದ್ಲಿಂಗು' ಸಿನಿಮಾ ಮಾಡಿ ಡೈಲಾಗ್ ಗಳ ಮೂಲಕ ಗೆದ್ದಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಅವರು 'ನೀರ್ ದೋಸೆ' ಸಿನಿಮಾದಲ್ಲೂ ಕಾಮಿಡಿ ಡೈಲಾಗ್ಸ್ ಮತ್ತು ಸಖತ್ ಡಬಲ್ ಮೀನಿಂಗ್ ಡೈಲಾಗ್ಸ್ ಗಳನ್ನು ಬಳಸಿದ್ದಾರೆ.[ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?]


ಅದರಲ್ಲೂ ಜಗ್ಗೇಶ್ ಅವರು ಹೊಡೆಯುವ ಡೈಲಾಗ್ ಕೇಳಲು ಒಂಥರಾ ಚಂದವೋ ಚಂದ. ನವರಸ ನಾಯಕ ಜಗ್ಗೇಶ್ ಅವರು ಸಿನಿಮಾದ ಕೆಲವಾರು ಡೈಲಾಗ್ ಗಳ ತುಣುಕುಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ಡಬ್ಬಿಂಗ್ ಕಾರ್ಯದಲ್ಲಿ ಜಗ್ಗೇಶ್

'ನೀರ್ ದೋಸೆ' ಡಬ್ಬಿಂಗ್ ಆರಂಭವಾಗಿದೆ. ನಾನು ನಿಮಗೆಲ್ಲಾ ಭರವಸೆ ನೀಡುತ್ತೇನೆ. ಈ ಚಿತ್ರ ನನ್ನ ಬದುಕಿನ ಇನ್ನೊಂದು ಸಾಧನೆಗೆ ಮೈಲಿಗಲ್ಲು..ಪ್ರೇಕ್ಷಕರಿಗೆ ನಗುವಿನ ರಸದೌತಣ' ಎಂದು ನಟ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.[ಚಿತ್ರಗಳು: 'ನೀರ್ ದೋಸೆ' ಹುಯಿದು ಸುಸ್ತಾದ ವಿಜಯ್ ಪ್ರಸಾದ್]


ದೃಶ್ಯ-1

ನಮ್ಮ ಮನೆ ಕಥೆ ಊರ್ಬಾಗಲಾದ್ರು NO COMMENTS ಅದೇ ಕಂಡೊರ್ ಮನೆ ಕಥೆ ಆದ್ರೇ FULL COMMENTS ಉ ..ಇದು ಡೌಆ ಇಲ್ಲಾ... ತೆವ್ಲಾ ಶಾನ್ಭೋಗ್ರೆ..


ದೃಶ್ಯ-2

ತಲೆಗ್ ಹೆಲ್ಮೆಟ್ ಹಾಕಿ ಸಾಯಲ್ಲಾ ಅಂತ ಸರ್ಕಾರದವರು ಬಡ್ಕೋತ್ತಾರೆ ಜನ ತಲೆಗ್ ಹೆಲ್ಮೆಟ್ ಹಾಕಿ ಬೇರೆ ಕಡೆ ಹಾಕ್ದೆ ಮರ್ತು ಸಾಯ್ತಾವರೆ.
ಶಾನಭೋಗ್ರು: ಬುದ್ದಿವಂತ.


ದೃಶ್ಯ - 3

ಶಾನ್ಭೋಗ್ರೆ ಮನುಷ್ಯ ಮುಖವಾಡ ಹಾಕ್ ಬದ್ಕೋದು ಅಭ್ಯಾಸ ಆಗಿದೆ ಕಾರಣ ಮುಖವಾಡದೊಳ್ಗೆ ಏನ್ ಮಾಡುದ್ರು ಗೊತ್ತಾಗಲ್ಲ ಅಂತ.. ನೋಡ್ವನು ಮೇಲೆ ಅವ್ನೆ.


ದೃಶ್ಯ - 4

ಪ್ರತಿಯೊಬ್ಬರು ಒಳಗೆ ಸ್ವಿಚ್ ಹಾಕಿ ಬಲ್ಪ್ ಆನ್ ಮಾಡ್ತಾರೆ ಹೊರಗೆ ಕರೆಂಟೆ ಇಲ್ಲಾ ಅಂತ ಡೌ ಮಾಡ್ತಾರೆ?ಇಂತವ್ರಗೆ ಪೀಜ್ ಕಟ್ ಮಾಡ್ಬೇಕು.


ದೃಶ್ಯ - 5

-ಶಾನ್ಭೋಗ್ರೆ ಈ ದೇಶದಲ್ಲಿ ಅವರೆಂಗೆ ಇವರೆಂಗೆ.
*ಶಾನಭೋಗ್ರು: ಲೇ ಮುಟ್ಟಾಳ ಎಲ್ರು ಅಂಗಂಗೆನೆ ಇಲ್ಲಾಂದರೆ ಅವರ್ ಬಾಳು ಇಂಗಂನೆ.
-ಹಂಗಂತ್ತೀರ buildup.


ದೃಶ್ಯ - 6

ಶಾನುಭೋಗರೆ ವಿಜ್ಞಾನ ರತಿ ವಿಘ್ನಾನ 2 ಓದಿದ್ದೀನಿ ಅಂತ ವ್ಯತ್ಯಾಸ ಏನು?
ಶಾನಭೋಗ್ರು: ವಿಘ್ನಾನ ಕ್ಲಾಸ್ ರೂಂ, ರತಿ ವಿಘ್ನಾನ ಬೆಡ್ರೊಮ್.


English summary
Dubbing kick starts for Kannada Movie 'Neer Dose'. Kannada Actor Jaggesh, Actreess Haripriya, Actress Suman Ranganath in the lead role. The movie is directed by Vijaya Prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada