For Quick Alerts
  ALLOW NOTIFICATIONS  
  For Daily Alerts

  'ಸತ್ಯದೇವ್' ನಂತರ 'ಧೀರ': ಮತ್ತೊಂದು ಡಬ್ಬಿಂಗ್ ಸಿನಿಮಾ ರಿಲೀಸ್.!

  By Bharath Kumar
  |

  ತಮಿಳು ನಟ ಅಜಿತ್ ಅಭಿನಯದ ಸಿನಿಮಾ ಕನ್ನಡದಲ್ಲಿ ಡಬ್ ಆಗಿ 'ಸತ್ಯದೇವ್ ಐಪಿಎಸ್' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಈಗ ಇನ್ನೊಂದು ತಮಿಳು ಚಿತ್ರ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ.

  ಅಜಿತ್ ಅಭಿನಯದ 'ಆರಂಭಂ' ಚಿತ್ರವನ್ನ ಕನ್ನಡದಲ್ಲಿ 'ಧೀರ' ಎಂಬ ಹೆಸರಿನಲ್ಲಿ ತೆರೆಗೆ ತರಲು ನಿರ್ಮಾಪಕರು ಸಿದ್ದವಾಗಿದ್ದಾರೆ. ಈಗಾಗಲೇ ಈ ಸಿನಿಮಾ ಕನ್ನಡದಲ್ಲಿ ಸೆನ್ಸಾರ್ ಮುಗಿಸಿ ಚಿತ್ರಮಂದಿರಕ್ಕೆ ಕಾಲಿಡಲು ಸಜ್ಜಾಗಿದೆ.

  ಇದು ಡಬ್ಬಿಂಗ್ ಪರರಿಗೆ ಸಂತಸದ ಸುದ್ದಿಯಾಗಿದ್ದರೇ, ಡಬ್ಬಿಂಗ್ ವಿರೋಧಿಸುವವರನ್ನ ಕೆಣಕುತ್ತಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.....

  ಸೆನ್ಸಾರ್ ಮುಗಿಸಿದ 'ಧೀರ'

  ಸೆನ್ಸಾರ್ ಮುಗಿಸಿದ 'ಧೀರ'

  ಕೇಂದ್ರ ಸೆನ್ಸಾರ್ ಮಂಡಳಿಯಲ್ಲಿ ಸೆನ್ಸಾರ್ ಮಾಡಿಸಿರುವ 'ಧೀರ' ಚಿತ್ರಕ್ಕೆ 'ಯು' ಸರ್ಟಿಫಿಕೆಟ್ ನೀಡಲಾಗಿದೆ.

  ಯಾರು ಡಬ್ಬಿಂಗ್ ಮಾಡಿರೋದು?

  ಯಾರು ಡಬ್ಬಿಂಗ್ ಮಾಡಿರೋದು?

  'ಸತ್ಯದೇವ್ ಐಪಿಎಸ್' ಚಿತ್ರವನ್ನ ಡಬ್ ಮಾಡಿದ್ದ ಜಿ ಕೃಷ್ಣಮೂರ್ತಿ ಅವರೇ 'ಧೀರ' ಚಿತ್ರವನ್ನ 'ದರ್ಶನ್ ಎಂಟರ್ ಪ್ರೈಸಸ್' ಅಡಿಯಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ.

  'ಡಬ್ಬಿಂಗ್' ವಿರುದ್ಧ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಾ 'ಧೀರ'.!

  ಟ್ವಿಟ್ಟರ್ ನಲ್ಲಿ ಖಾತೆ ಇದೆ

  ಟ್ವಿಟ್ಟರ್ ನಲ್ಲಿ ಖಾತೆ ಇದೆ

  ಡಬ್ಬಿಂಗ್ ಚಿತ್ರದ ಪ್ರಚಾರಕ್ಕೆಂದು 'ಧೀರ' ಎಂಬ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಕೂಡ ಇದೆ. ಈ ಖಾತೆಯಲ್ಲಿ ಚಿತ್ರದ ಬಗೆಗಿನ ಮಾಹಿತಿ ಸಿಗುತ್ತಿದೆ.

  ಕನ್ನಡ ಚಿತ್ರರಂಗದ ವಿರುದ್ಧ ಕೆರಳಿದ ಕನ್ನಡ ಗ್ರಾಹಕರ ಕೂಟ: ಟ್ವಿಟ್ಟರ್ ನಲ್ಲಿ ಕನ್ನಡ ದ್ರೋಹ ಅಭಿಯಾನ

  ಮತ್ತೆ ಡಬ್ಬಿಂಗ್ ವಿರುದ್ಧ ಹೋರಾಟ.!

  ಮತ್ತೆ ಡಬ್ಬಿಂಗ್ ವಿರುದ್ಧ ಹೋರಾಟ.!

  'ಸತ್ಯಜೀತ್ ಐಪಿಎಸ್' ಚಿತ್ರದ ಸಂಧರ್ಭದಲ್ಲಿ ಪ್ರತಿಭಟನೆ ನಡೆದಿತ್ತು. ಈಗ ಮತ್ತೆ ತಮಿಳು ಭಾಷೆಯ ಡಬ್ಬಿಂಗ್ ಸಿನಿಮಾ ಕನ್ನಡಕ್ಕೆ ಕಾಲಿಡಲಿದ್ದು, ಈ ಬಾರಿಯೂ ಅದೇ ರೀತಿಯ ಹೋರಾಟ ನಡೆಯಲಿದ್ಯಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

  ಹೋರಾಟಗಾರರಿಗೆ ಸಿಸಿಐ ಕಡಿವಾಣ

  ಹೋರಾಟಗಾರರಿಗೆ ಸಿಸಿಐ ಕಡಿವಾಣ

  ಮತ್ತೊಂದೆಡೆ ಡಬ್ಬಿಂಗ್ ವಿರುದ್ಧ ಹೋರಾಟಗಾರರಿಗೆ ಸಿಸಿಐ (Competition Commission of India) ನೋಟಿಸ್ ನೀಡಿದೆ. ಬಿಡುಗಡೆಗೆ ಅಡ್ಡಿಯಾಗಬಾರದು ಎಂದು ಕಡಿವಾಣ ಹಾಕಿದೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

  ರಿಲೀಸ್ ಯಾವಾಗ?

  ರಿಲೀಸ್ ಯಾವಾಗ?

  ಸದ್ಯ, ಬಿಡುಗಡೆಗೆ ಬೇಕಾಗಿರುವ ಎಲ್ಲ ಕೆಲಸಗಳನ್ನ ಮುಗಿಸಿಕೊಂಡಿರುವ 'ಧೀರ' ಚಿತ್ರತಂಡ ಆದಷ್ಟೂ ಬೇಗ ತೆರೆಗೆ ಬರಲಿದೆ. ಸದ್ಯಕ್ಕೆ ದಿನಾಂಕ ನಿಗದಿಯಾಗಿಲ್ಲ. ಅಜಿತ್ ಕುಮಾರ್, ಆರ್ಯನ್, ರಾಣಾ, ನಯನತಾರ, ತಾಪ್ಸಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದು, ವಿಷ್ಣುವರ್ಧನ್ ಆಕ್ಷನ್ ಕಟ್ ಹೇಳಿದ್ದಾರೆ.

  ಡಬ್ಬಿಂಗ್ ಬೇಡ ಅಂತಾರೆ, ಪರಭಾಷೆ ಸಿನಿಮಾ ಬೆಂಬಲಿಸ್ತಾರೆ: ಇದು ಕನ್ನಡ ದ್ರೋಹ ಅಲ್ಲವೇ?

  English summary
  Ajith's Tamil film 'Aarambham' has been dubbed to Kannada as 'Dheera' and is waiting for release. ಅಜಿತ್ ಅಭಿನಯದ ಆರಂಭಂ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು 'ಧೀರ' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X