»   » ನಟಿ ದುನಿಯಾ ರಶ್ಮಿ ಹೊಸ ಇನ್ನಿಂಗ್ಸ್ 'ಹ್ಯಾಕ್' ಶುರು

ನಟಿ ದುನಿಯಾ ರಶ್ಮಿ ಹೊಸ ಇನ್ನಿಂಗ್ಸ್ 'ಹ್ಯಾಕ್' ಶುರು

Posted By:
Subscribe to Filmibeat Kannada

ದುನಿಯಾ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡಿಗರ ಮನ ಮುಟ್ಟಿದ ನಟಿ ದುನಿಯಾ ರಶ್ಮಿ. ಶುಕ್ರವಾರ (ಜು.18) ಅವರು ತಮ್ಮ ಹುಟ್ಟುಹಬ್ಬದ ದಿನದಂದು ಹೊಸ ಹುರುಪಿನೊಂದಿಗೆ 'ಹ್ಯಾಕ್' ಚಿತ್ರದ ಮೂಲಕ ಭರ್ಜರಿಯಾಗಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ.

ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ನೋಡುತ್ತಿದ್ದರೆ ಇದು ಹಾಲಿವುಡ್ ಅಥವಾ ಬಾಲಿವುಡ್ ಚಿತ್ರವಿರಬಹುದೇ ಎಂಬ ಗುಮಾನಿ ಬರುತ್ತದೆ. ಆದರೆ ಅದೇ ರೇಂಜ್ ನಲ್ಲಿ ನಿರ್ಮಾಣವಾಗುತ್ತಿರುವ ಅಪ್ಪಟ ಕನ್ನಡ ಸಿನಿಮಾ ಇದು. ಈ ಚಿತ್ರದಲ್ಲಿ ದುನಿಯಾ ರಶ್ಮಿ ಗೆಟಪ್ ಸಹ ಬದಲಾಗಿರುವುದನ್ನು ಕಾಣಬಹುದು. [ಸುದ್ದಿಯಲ್ಲೇ ಸಿನಿಮಾ ಮಾಡುತ್ತಿರುವ ದುನಿಯಾ ರಶ್ಮಿ]

Duniya Rashmi new film Haack

ಬನ್ನೇರಘಟ್ಟ ರಸ್ತೆಯ ಮೀನಾಕ್ಷಿಮಾಲ್ ನಲ್ಲಿ ನಡೆದ 'ಹ್ಯಾಕ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದವರು ಚಿತ್ರದ ಮೊದಲ ಪೋಸ್ಟರನ್ನು ಅನಾವರಣ ಗೊಳಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೌತ್ ಇಂಡಿಯನ್ ಮಲ್ಟಿಪ್ಲೆಕ್ಸ್ ಹೆಡ್ ಸತೀಶರವರು ಆಗಮಿಸಿದ್ದರು.

Dot ಟಾಕೀಸ್ ತಂಡದ ಕನಸಿನ ಕೂಸಾಗಿ ಹೊರಹೊಮ್ಮುತ್ತಿರುವ 'ಹ್ಯಾಕ್' ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ರಿಷಿಕೇಶರವರು ಹೊತ್ತಿದ್ದಾರೆ. ಚಿತ್ರದ ಕಥೆಯ ಬಗ್ಗೆ ಗುಟ್ಟು ಬಿಟ್ಟುಕೊಡದ ಚಿತ್ರತಂಡ ತಮ್ಮ ಪ್ರತಿಭೆಯನ್ನು ಚಿತ್ರದ ಮೂಲಕ ಕನ್ನಡಿಗರಿಗೆ ಕೊಡುಗೆಯಾಗಿ ನಿಡಲಿದ್ದೇವೆ ಎಂದಿದ್ದಾರೆ.

ಹೊಸಬರ ತಂಡವಾಗಿರುವ 'ಹ್ಯಾಕ್' ಚಿತ್ರತಂಡ ಹೊಸ ಆಲೋಚನೆಗಳೊಂದಿಗೆ, ಉತ್ತಮ ತಾಂತ್ರಿಕ ವರ್ಗ, ಕಲಾವಿದರನ್ನು ಇಟ್ಟುಕೊಂಡು ವಿಜಯದ ಕಡೆ ನಡೆದಿದ್ದಾರೆ. ಚಿತ್ರದಲ್ಲಿ ದುನಿಯಾ ಖ್ಯಾತಿಯ ರಶ್ಮಿ, ಅಮಿತ್ ಸಾಗರ್ ಗೌಡ, ಶಶಿ ದೇಶ್ ಪಾಂಡೆ, ಶ್ರೇಯಸ್, ರೇಣುಕ್, ಬಿಲ್ಡರ್ ವಿಜಿ ಮುಂತಾದವರಿದ್ದಾರೆ. ಈ ಚಿತ್ರದ ಅಡಿಬರಹ 'ದೇವರ ಆಟ' ಎಂಬುದು. (ಒನ್ಇಂಡಿಯಾ ಕನ್ನಡ)

English summary
After a long break actress Duniya Rashimi back to action with new Kannada movie Haack. The dream of 'Dot talkies' upcoming film 'Haack' directed by national award winner Rishikesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada