»   » ವಿಜಯ್ ರಾಘವೇಂದ್ರ ಸಂಸಾರದಲ್ಲಿ ಹುಳಿ ಹಿಂಡುವ ದುನಿಯಾ ರಶ್ಮಿ.!

ವಿಜಯ್ ರಾಘವೇಂದ್ರ ಸಂಸಾರದಲ್ಲಿ ಹುಳಿ ಹಿಂಡುವ ದುನಿಯಾ ರಶ್ಮಿ.!

Posted By:
Subscribe to Filmibeat Kannada

ಟೈಟಲ್ ನೋಡಿದ ತಕ್ಷಣ ಗಾಬರಿ ಪಡುವ ಅವಶ್ಯಕತೆ ಇಲ್ಲ. ಯಾಕಂದ್ರೆ, ನಾವು ಹೇಳುತ್ತಿರುವುದು ರೀಲ್ ಸುದ್ದಿ ಮಾತ್ರ. ನಟಿ ದುನಿಯಾ ರಶ್ನಿ, ಸಖತ್ ಸ್ಲಿಮ್ ಅಂಡ್ ಟ್ರಿಮ್ ಆಗಿ ಗಾಂಧಿನಗರಕ್ಕೆ ಮರಳಿರುವ ಬಗ್ಗೆ ನಾವೇ ನಿಮಗೆ ಹೇಳಿದ್ವಿ.

'ಹ್ಯಾಕ್' ಮತ್ತು 'ಪ್ರೀತಿ ಕಿತಾಬು' ಚಿತ್ರದಲ್ಲಿ ನಟಿಸುತ್ತಿರುವ ದುನಿಯಾ ರಶ್ಮಿ ಈಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದೇ ವಿಜಯ್ ರಾಘವೇಂದ್ರ ಅಭಿನಯದ 'ನಮಗಾಗಿ'.


'ನಿನಗಾಗಿ' ಚಿತ್ರದ ಸೂಪರ್ ಡ್ಯೂಪರ್ ಹಿಟ್ ಜೋಡಿ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ವಿಜಯ್ ರಾಘವೇಂದ್ರ ಅಭಿನಯದ 'ನಮಗಾಗಿ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ ದುನಿಯಾ ರಶ್ಮಿ.


Duniya Rashmi to play second lead in Vijay Raghavendra starrer Namagagi

ಮದುವೆಯಾದ ನಂತ್ರ ಜೋಡಿಗಳ ಮಧ್ಯೆ ಎದುರಾಗುವ ಸಮಸ್ಯೆಗಳ ಕುರಿತು ಹೆಣೆದಿರುವ ನವಿರಾದ ಪ್ರೇಮಕಥೆ ಈ 'ನಮಗಾಗಿ'. ಜಂಟಿ ಖಾತೆ ಅನ್ನುವ ಕ್ಯಾಪ್ಷನ್ ಹೊಂದಿರುವ ಈ ಚಿತ್ರದಲ್ಲಿ ಹೊಸ ಅಕೌಂಟ್ ಓಪನ್ ಮಾಡಿದ್ದಾರೆ ದುನಿಯಾ ರಶ್ಮಿ. ['ಪ್ರೀತಿ ಕಿತಾಬು' ಹಿಡಿದು ಬಂದ ದುನಿಯಾ ರಶ್ಮಿ]


ಹಿಂದೆಂದಿಗಿಂತಲೂ ಸೂಪರ್ ಸ್ಟೈಲಿಶ್ ಆಗಿರುವ ದುನಿಯಾ ರಶ್ಮಿ, 'ನಮಗಾಗಿ' ಚಿತ್ರದಲ್ಲಿ ಅಲ್ಟ್ರಾ ಮಾಡರ್ನ್ ಹುಡುಗಿ. ''ಇದು ಅವರ ವೃತ್ತಿ ಜೀವನದಲ್ಲೇ ವಿಭಿನ್ನ ಪಾತ್ರ. ವಿದೇಶದಲ್ಲಿ ನೆಲೆಸಿರುವ ಹುಡುಗಿಯ ಕ್ಯಾರೆಕ್ಟರ್ ಪ್ಲೇ ಮಾಡ್ತಿದ್ದಾರೆ ದುನಿಯಾ ರಶ್ಮಿ. ಅವರದ್ದು ಸೆಕೆಂಡ್ ಹಾಫ್ ನಲ್ಲಿ ಬರುವ ಔಟ್ ಅಂಡ್ ಔಟ್ ಗ್ಲಾಮರಸ್ ಮತ್ತು ಟಾಮ್ ಬಾಯ್ ಪಾತ್ರ. ಗಂಡ-ಹೆಂಡತಿ ಮಧ್ಯೆ ಬರುವ ಹುಡಗಿ ದುನಿಯಾ ರಶ್ಮಿ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ನಿರ್ದೇಶಕ ರಘುರಾಮ್ ಹೇಳಿದ್ರು.


Duniya Rashmi to play second lead in Vijay Raghavendra starrer Namagagi

ಹಾಗ್ನೋಡಿದ್ರೆ, 'ನಮಗಾಗಿ' ಚಿತ್ರದಲ್ಲಿ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ದುನಿಯಾ ರಶ್ಮಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ಮಿಂಚಲಿರುವ ದುನಿಯಾ ರಶ್ಮಿ, ಅದಾಗಲೇ ತಯಾರಿಯಲ್ಲಿ ತೊಡಗಿದ್ದಾರೆ. [ರಾಧಿಕಾಗೆ ರೋಡಲ್ಲೇ ಹೂ ಕೊಟ್ಟ ವಿಜಯ್ ರಾಘವೇಂದ್ರ]


ದುನಿಯಾ ರಶ್ಮಿ ನಟಿಸುವ ಭಾಗದ ಚಿತ್ರೀಕರಣ ಮೇ ತಿಂಗಳಲ್ಲಿ ಶುರುವಾಗಲಿದ್ದು, ಸಿಂಗಾಪುರ್ ಮತ್ತು ಮಲೇಶಿಯಾದಲ್ಲಿ ಶೂಟ್ ಆಗಲಿದೆ. ಸದ್ಯಕ್ಕೆ ಬೆಂಗಳೂರಿನ ಸುತ್ತ ಮುತ್ತ 'ನಮಗಾಗಿ' ಚಿತ್ರದ ಶೂಟಿಂಗ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಮತ್ತು ವಿಜಯ ರಾಘವೇಂದ್ರ ಬಿಜಿಯಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Duniya Rashmi, of 'Duniya' fame has agreed to play second lead in Vijay Raghavendra and Radhika Kumaraswamy starrer 'Namagagi'. Director Raghuram confirms this news to 'Filmibeat Kannada'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada