For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಗುರಿಯಿಟ್ಟ ಸುಕ್ಕಾ ಸೂರಿ

  |
  ಚಾಲೇಂಜಿಂಗ್ ಸ್ಟಾರ್ ಕೈಯಲ್ಲಿ ಕ್ರೈಮ್ ಮಾಡಸ್ತಾರಾ ಟಗರು ರೂವಾರಿ | FILMIBEAT KANNADA

  ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕರಲ್ಲಿ ಸುಕ್ಕಾ ಸೂರಿ ಒಬ್ಬರು. ಕ್ರೈಮ್ ಕಥೆ ಆಧಾರಿತ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ಸೂರಿ ಎತ್ತಿದ ಕೈ. ಸೂರಿ ನಿರ್ದೇಶನದ ಬಹುತೇಕ ಸಿನಿಮಾಗಳು ಕ್ರೈಮ್ ಥ್ರಿಲ್ಲರ್ ಸಿನಿಮಾಗಳಾಗಿವೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ 'ಟಗರು' ಸಿನಿಮಾ ಕೂಡ ರಕ್ತ ಸಿಕ್ತ ಕತೆಯಾಧಾರಿತ ಸಿನಿಮಾ ಆಗಿತ್ತು.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಶತದಿನೋತ್ಸವ ಪೂರೈಸಿ 150 ಹಾಗೂ 200 ದಿನಗಳು ಯಶಸ್ವಿ ಪ್ರದರ್ಶನ ಕಂಡ ಸಿನಿಮಾವಾಗಿದೆ. ಸೂರಿ ಸದ್ಯ ನಿರ್ದೇಶನ ಮಾಡುತ್ತಿರುವ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಕೂಡ ಕ್ರೈಮ್ ಆಧಾರಿತ ಚಿತ್ರವಾಗಿದೆ. ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸೂರಿ ಈಗ ಸ್ಯಾಂಡಲ್ ವುಡ್ ನ ಮತ್ತೋರ್ವ ಸ್ಟಾರ್ ನಟನಿಗೆ ನಿರ್ದೇಶನ ಮಾಡುವ ತಯಾರಿ ನಡೆಸುತ್ತಿದ್ದಾರೆ.

  ಹೌದು, ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಿನಿಮಾಗಳಿಗೆ ಹೆಚ್ಚು ನಿರ್ದೇಶನ ಮಾಡುತ್ತಿದ್ದ ಸೂರಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡಾಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಹಾಗಾದ್ರೆ ಸೂರಿ ಮತ್ತು ದರ್ಶನ್ ಸಿನಿಮಾ ಯಾವುದು? ಸಿನಿಮಾ ಹೇಗಿರಲಿದೆ? ಮುಂದೆ ಓದಿ..

  ಡಾಲಿಗಿಂತ ಕ್ರೂರಿ ಈ 'ಪಾಪ್ ಕಾರ್ನ್ ಮಂಕಿ ಟೈಗರ್'

  ದರ್ಶನ್ ಗೆ ಸೂರಿ ಮೊದಲ ನಿರ್ದೇಶನ

  ದರ್ಶನ್ ಗೆ ಸೂರಿ ಮೊದಲ ನಿರ್ದೇಶನ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಆಕ್ಷನ್ ಕಟ್ ಹೇಳಲು ಸುಕ್ಕಾ ಸೂರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸ್ಕ್ರಿಪ್ಟ್ ಹೇಗಿರಬೇಕು ಎನ್ನುವುದರ ಬಗ್ಗೆ ಸೂರಿ ಪ್ಲಾನ್ ಮಾಡಿಕೊಂಡಿದ್ದಾರಂತೆ. ಸೂರಿ ಫ್ಲೇವರ್ ನ ಕಥೆ ಬಾಕ್ಸ್ ಆಫೀಸ್ ಸುಲ್ತಾನ್ ಗೆ ಇಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದ್ರೆ, ಇಬ್ಬರ ಸಿನಿಮಾ ಮುಂದಿನ ವರ್ಷ ಸೆಟ್ಟೇರುವುದು ಪಕ್ಕಾ. ಆಕ್ಷನ್ ಮತ್ತು ಮಾಸ್ ನಾಯಕ ಅಂತಾನೆ ಖ್ಯಾತಿ ಗಳಿಸಿರುವ ದರ್ಶನ್ ಗೆ ರಕ್ತ ಸಿಕ್ತ ಕ್ರೈಮ್ ಕತೆಯ ಸರದಾರ ಸೂರಿ ನಿರ್ದೇಶನ ಮಾಡುತ್ತಾರೆ ಅಂದ್ರೆ ಇಬ್ಬರ ಕಾಂಬಿನೇಶನ್ ನ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

  ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಚುನಾವಣೆ ಅಧಿಕಾರಿಗಳು ದಾಳಿ

  ಇಬ್ಬರ ಸಿನಿಮಾ ಯಾವಾಗ ಶುರುವಾಗುತ್ತೆ?

  ಇಬ್ಬರ ಸಿನಿಮಾ ಯಾವಾಗ ಶುರುವಾಗುತ್ತೆ?

  ಸ್ಯಾಂಡಲ್ ವುಡ್ ಸಾರಥಿ ದರ್ಶನ್ ಮತ್ತು ಸೂರಿ ಕಾಂಬಿನೇಷನ್ ಸಿನಿಮಾ ಮುಂದಿನ ವರ್ಷದ ಕೊನೆಯಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಯಾಕೆಂದರೆ ದರ್ಶನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ಒಡಯ' ಸಿನಿಮಾದ ಚಿತ್ರೀಕರಣದಲ್ಲಿರುವ ದರ್ಶನ್ ನಂತರ 'ರಾಬರ್ಟ್' ಮತ್ತು 'ಗಂಡುಗಲಿ ಮದಕರಿನಾಯಕ' ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಇತ್ತ ಸೂರಿ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಇಬ್ಬರ ಸಿನಿಮಾ ಕಮಿಟ್ ಮೆಂಟ್ಸ್ ಮುಗಿದ ಬಳಿಕ ಸೂರಿ ಮತ್ತು ದರ್ಶನ್ ಸಿನಿಮಾ ಪ್ರಾರಂಭವಾಗಲಿದೆ.

  ಪುನೀತ್, ಶಿವಣ್ಣ, ವಿಜಿ ಬಿಟ್ಟು ಬೇರೆ ನಟನಿಗೆ ನಿರ್ದೇಶನ

  ಪುನೀತ್, ಶಿವಣ್ಣ, ವಿಜಿ ಬಿಟ್ಟು ಬೇರೆ ನಟನಿಗೆ ನಿರ್ದೇಶನ

  ಸುಕ್ಕಾ ಸೂರಿ ಸಿನಿಮಾ ಅಂದಾಕ್ಷಣ ಪುನೀತ್, ಶಿವಣ್ಣ ಅಥವಾ ದುನಿಯಾ ವಿಜಿ ನಾಯಕರಾಗಿ ಇರ್ತಾರೆ, ಅವರಿಗೆ ಮಾತ್ರ ಸೂರಿ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಯಾಕಂದ್ರೆ ಸೂರಿ ನಿರ್ದೇಶನದ 9 ಸಿನಿಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಗೆ ಮೂರು ಸಿನಿಮಾ, ಶಿವಣ್ಣನಿಗೆ ಎರಡು ಸಿನಿಮಾ ಮತ್ತು ವಿಜಿಯ್ ಗೆ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದ್ರೀಗ ಆ ಸರ್ಕಲ್ ನಿಂದ ಆಚೆಗೆ ಬಂದು ಸ್ಯಾಂಡಲ್ ವುಡ್ ನ ಬೇರೆ ಸ್ಟಾರ್ ನಟರಿಗೂ ನಿರ್ದೇಶನ ಮಾಡುವ ಪ್ಲಾನ್ ಮಾಡಿದ್ದಾರೆ.

  ನೀವು ಸ್ಟಾರ್, ನೀವು ಚೆನ್ನಾಗಿರಬೇಕು: ಗಡ್ಡಪ್ಪ ಭೇಟಿ ಮಾಡಿದ ದರ್ಶನ್

  ಪಾಪ್ ಕಾರ್ನ್ ಮಂಕಿ ಟೈಗರ್

  ಪಾಪ್ ಕಾರ್ನ್ ಮಂಕಿ ಟೈಗರ್

  ಸುಕ್ಕಾ ಸೂರಿ ಸದ್ಯ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಟಗರು' ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ. ಟಗರು ನಂತರ ಈ ಹಿಟ್ ಕಾಂಬಿನೇಶನ್ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ಮೂಲಕ ಎರಡನೇ ಬಾರಿಗೆ ಒಂದಾಗಿದೆ. ಈ ಸಿನಿಮಾದ ನಂತರ ಸೂರಿ ಬಹುನಿರೀಕ್ಷೆಯ 'ಕೆಂಡಸಂಪಿಗೆ' ಚಿತ್ರದ ಮೊದಲ ಭಾಗ 'ಕಾಗೆ ಬಂಗಾರ' ಪ್ರಾಜೆಕ್ಟ್ ಕೈ ಗೆತ್ತಿಕೊಳ್ಳಲಿದ್ದಾರಂತೆ.

  English summary
  Kannada director Duniya Soori planing to direct a movie for Chalenging Star Darshan. May this movie will start on next year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X