»   » ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ'

ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ'

Posted By:
Subscribe to Filmibeat Kannada

ನಿರ್ದೇಶಕ ದುನಿಯಾ ಸೂರಿ ಹಳೇ ಫಾರ್ಮ್ ಗೆ ಮರಳಿದ್ದಾರೆ. 'ಕಡ್ಡಿಪುಡಿ' ಚಿತ್ರದ ನಂತ್ರ ಅನೇಕ ಕಾರಣಗಳಿಂದಾಗಿ ನಾಪತ್ತೆಯಾಗಿದ್ದ ದುನಿಯಾ ಸೂರಿ ಈಗ 'ಕೆಂಡಸಂಪಿಗೆ'ಯನ್ನ ಹೊತ್ತು ಬಂದಿರುವುದು ನಿಮಗೆ ಗೊತ್ತಿದೆ.

'ಅಣ್ಣಾ ಬಾಂಡ್' ಮತ್ತು 'ಕಡ್ಡಿಪುಡಿ' ಚಿತ್ರಗಳು ನಿರೀಕ್ಷೆಗಳನ್ನೆಲ್ಲಾ ಹುಸಿಗೊಳಿಸಿದ ಕಾರಣ, ಈ ಬಾರಿ ಎಸ್.ಸುರೇಂದ್ರನಾಥ್ ಅವರ ಕಥೆಯನ್ನಿಟ್ಟುಕೊಂಡು ಸೂರಿ 'ಕೆಂಡಸಂಪಿಗೆ' ಮಾಡಿದ್ದಾರೆ. ರಿಸ್ಕ್ ಇಲ್ಲದೇ ನೀರಿಗಿಳಿದಿರುವ ದುನಿಯಾ ಸೂರಿ, ಅದೇ ಹಾದಿಯಲ್ಲಿ ಮತ್ತೊಂದು ಪ್ಲಾನ್ ಮಾಡಿದ್ದಾರೆ. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

Duniya Soori to team up with Agni Shridhar for his directorial next

ಅಗ್ನಿ ಶ್ರೀಧರ್ ಜೊತೆ ಒಂದು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ನಿರ್ದೇಶಕ ದುನಿಯಾ ಸೂರಿ. ಅಗ್ನಿ ಶ್ರೀಧರ್ ರವರ ಕಥೆಯನ್ನಿಟ್ಟುಕೊಂಡು ಅವರ ಬ್ಯಾನರ್ ನಲ್ಲೇ ಚಿತ್ರ ನಿರ್ದೇಶಿಸಲಿದ್ದಾರೆ ನಿರ್ದೇಶಕ ಸೂರಿ. [ಖಡಕ್ ಅಗ್ನಿ ಶ್ರೀಧರ್ ಮತ್ತೆ ಎದೆಗಾರಿಕೆಯೊಂದಿಗೆ ಹಾಜರ್]

ಈ ಬಗ್ಗೆ ಅಗ್ನಿ ಶ್ರೀಧರ್ ಜೊತೆ ಮಾತುಕತೆ ನಡೆಸಿರುವ ದುನಿಯಾ ಸೂರಿ, ಚಿತ್ರಕಥೆ ಬಗ್ಗೆ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಮೊದಲೇ ಸೂರಿ ರೌಡಿಸಂ ಸಿನಿಮಾಗಳು, ರಿಯಲಿಸ್ಟಿಕ್ ಚಿತ್ರಗಳನ್ನ ಮಾಡುವುದರಲ್ಲಿ ಎತ್ತಿದ ಕೈ. ಇನ್ನೂ ಅಗ್ನಿ ಶ್ರೀಧರ್, ಬೆಂಗಳೂರು ಅಂಡರ್ ವರ್ಲ್ಡ್ ನ ಕರಾಳ ಅಧ್ಯಾಯದ ಬಗ್ಗೆ 'ದಾದಾಗಿರಿಯ ದಿನಗಳು' ಅನ್ನುವ ಪುಸ್ತಕವನ್ನ ರಚಿಸಿದ್ದಾರೆ.

ಕಥೆಗಾಗಿ ಅಗ್ನಿ ಶ್ರೀಧರ್ ಮೊರೆ ಹೋಗಿರುವ ದುನಿಯಾ ಸೂರಿ, ಹಳೇ ಬೆಂಗಳೂರಿನ ದಾದಾಗಿರಿಯ ದಿನಗಳನ್ನ ತೆರೆಮೇಲೆ ತಂದರೂ ಅಚ್ಚರಿ ಇಲ್ಲ. ಆದ್ರೆ, ಅದೆಲ್ಲಾ ಆಗಬೇಕು ಅಂದ್ರೆ ಮೊದಲು ಪುನೀತ್ ಅಭಿನಯದ 'ದೊಡ್ಮನೆ ಹುಡುಗ' ಕಂಪ್ಲೀಟ್ ಆಗಬೇಕು. ಆಮೇಲೆ 'ದಾದಾಗಿರಿ'ಯೋ ಇಲ್ಲಾ 'ಗಾಂಧಿಗಿರಿ'ಯೋ ನಿರ್ಧಾರವಾಗುತ್ತೆ. (ಏಜೆನ್ಸೀಸ್)

English summary
Director Duniya Soori and Agni Shridhar to team up for a new film which will go on floors shortly. Not much details about the movie is revealed yet but fans are expecting Agni Shridhar's famous 'Dadagiriya Dinagalu' on screen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada