»   » ದುನಿಯಾ ಸೂರಿಗೆ ಫ್ಯಾಮಿಲಿ ಪ್ಯಾಕ್ ಹೋಗಿ, ಸಿಕ್ಸ್ ಪ್ಯಾಕ್ ಬಂದಿದ್ದು ಯಾಕೆ?

ದುನಿಯಾ ಸೂರಿಗೆ ಫ್ಯಾಮಿಲಿ ಪ್ಯಾಕ್ ಹೋಗಿ, ಸಿಕ್ಸ್ ಪ್ಯಾಕ್ ಬಂದಿದ್ದು ಯಾಕೆ?

Written By:
Subscribe to Filmibeat Kannada

ಕನ್ನಡದ ಸ್ಟಾರ್ ನಿರ್ದೇಶಕ ದುನಿಯಾ ಸೂರಿ ಡೈರೆಕ್ಷನ್ ನಲ್ಲಿ ಮಾತ್ರ ಸ್ಟಾರ್ ಅಲ್ಲ. ಯಾವ ಹೀರೋ ಗೂ ಕಮ್ಮಿಯಿಲ್ಲ ಎಂಬಂತೆ ಸಿಕ್ಸ್ ಪ್ಯಾಕ್ ಮಾಡಿ ಈಗ ಹೊಸ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಅಂದ್ಹಾಗೆ, ಸೂರಿ ಸಿಕ್ಸ್ ಪ್ಯಾಕ್ ಮಾಡಿದ್ದು ಯಾಕೆ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಸೂರಿ ಏನಾದರೂ ಹೀರೋ ಆಗಿ ಆಕ್ಟ್ ಮಾಡುವ ತಯಾರಿ ಮಾಡುತ್ತಿದ್ದಾರ? ಅದಕ್ಕೆ ಈ ಫೋಟೋಶೂಟ್ ಏನಾದರೂ ಮಾಡಿದ್ದಾರ ಎಂಬ ಚರ್ಚೆಗಳು ಕೂಡ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.[ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ 'ದೊಡ್ಮನೆ ಹುಡ್ಗ' ಪುನೀತ್.!]

Duniya Suri Developed Six Pack

ಬರಿ ವರ್ಕೌಟ್ ಮಾಡುತ್ತಿದ್ದ ಪೋಸ್ಟರ್ ಬಹಿರಂಗವಾಗಿದ್ರೆ, ಸುಮ್ಮನಾಗಬಹುದಿತ್ತು. ಆದ್ರೆ, ಇದು ಉದ್ದೇಶ ಪೂರ್ವಕವಾಗಿ ದುನಿಯಾ ಸೂರಿ ಕೊಟ್ಟಿರುವ ಫೋಸ್ ಅಂತ ಗೊತ್ತಾಗುತ್ತಿದೆ. ಸ್ಟೈಲಿಶ್ ಲುಕ್ ನಲ್ಲಿ ಸೂರಿ ಕಾಣಿಸಿಕೊಂಡಿದ್ದು, ಖಡಕ್ ಹೀರೋ ತರನೇ ಮಿಂಚಿದ್ದಾರೆ. ಹೀಗಾಗಿ ಈ ಫೋಟೊ ಮೇಲೆ ಅನುಮಾನ ಮೂಡುತ್ತಿದೆ.

Duniya Suri Developed Six Pack

ಹೋಗ್ಲಿ ಬಿಡಿ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಇದು ಹೊಸ ಸಿನಿಮಾದ ಫೋಟೋಶೂಟ್ ಅಲ್ಲ. ಅಥವಾ ಹೀರೋ ಆಗುವುದಕ್ಕೆ ಪ್ರಿಪರೇಶನ್ ಕೂಡ ಅಲ್ಲ. 'ಇದು ಜಸ್ಟ್ ಫಾರ್ ಹೆಲ್ತ್'.ಅಂತೆ. ಹೌದು, ತಮ್ಮ ದೇಹದ ಆರೋಗ್ಯವನ್ನ ಕಾಪಾಡಿಕೊಳ್ಳುವ ಉದ್ದೇಶದಿಂದ ಸೂರಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ ಅಷ್ಟೇ. ತನ್ನ ಆಹಾರ ಪದ್ದತಿಯನ್ನ ಬದಲಾಯಿಸಿಕೊಳ್ಳುವ ಹಾಗೂ ದೇಹವನ್ನ ನಿಯಂತ್ರಿಸಲು ಜಿಮ್ ನಲ್ಲಿ ಕಳೆದ ನಾಲ್ಕು ತಿಂಗಳಿಂದ ಬೇವರಿಳಿಸಿದ್ದಾರಂತೆ.

Duniya Suri Developed Six Pack

ಈ ಪೋಟೋಶೂಟ್ ಕೂಡ ಎರಡು ದಿನಗಳ ಹಿಂದೆಯಷ್ಟೇ ಮಾಡಿದ್ದಾರಂತೆ. ಫೋಟೋಗ್ರಫರ್ ಮಹೇಂದ್ರ ಸಿಂಹ ಈ ಪೋಟೋ ಕ್ಲಿಕ್ ಮಾಡಿದ್ದಾರಂತೆ. ಶೂಟಿಂಗ್ ಗಾಗಿ ತಿಂಗಳು ಕಾಲ ಮನೆಯಿಂದ ಹೊರಗುಳಿಯುತ್ತೇವೆ. ಆದ್ದರಿಂದ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಕಷ್ಟವಾಗುತ್ತದೆ. ಆಹಾರ ಪದ್ದತಿಯಲ್ಲೂ ತುಂಬಾ ಬದಲಾವಣೆ ಆಗುವುದರಿಂದ ವರ್ಕೌಟ್ ಅಗತ್ಯವಾಗಿದೆ ಎನ್ನುತ್ತಾರೆ ಸೂರಿ.

Duniya Suri Developed Six Pack

ಸದ್ಯ, ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರವನ್ನ ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ನಂತರ 'ಕೆಂಡ ಸಂಪಿಗೆ' ಚಿತ್ರದ ಮುಂದುವರೆದ ಭಾಗ 'ಕಾಗೆ ಬಂಗಾರ' ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ.[ಕೆಂಡಸಂಪಿಗೆ ಪಾರ್ಟ್ -1 ಕಾಗೆ ಬಂಗಾರದ ಹೀರೋ ಯಾರು?]

English summary
Duniya Suri has Developed six-packs after training for over four months. However Suri says this body building is for personal and nothing to do with his films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada