»   » ಟಾಲಿವುಡ್ ಅಂಗಳದಲ್ಲಿ ಶುರುವಾಗಲಿದೆ 'ಸುಕ್ಕಾ ಸುರಿ' ದರ್ಬಾರ್

ಟಾಲಿವುಡ್ ಅಂಗಳದಲ್ಲಿ ಶುರುವಾಗಲಿದೆ 'ಸುಕ್ಕಾ ಸುರಿ' ದರ್ಬಾರ್

Posted By:
Subscribe to Filmibeat Kannada
ಟಾಲಿವುಡ್ ಅಂಗಳದಲ್ಲಿ ಶುರುವಾಗಲಿದೆ 'ಸುಕ್ಕಾ ಸುರಿ' ದರ್ಬಾರ್ | Filmibeat Kannada

ಒಂದು ಸಿನಿಮಾ ಸೋಲು ಕಂಡರೆ ಅದು ಸಾಕಷ್ಟು ಜನರ ಕೆಲಸವನ್ನ ಕಿತ್ತುಕೊಳ್ಳುತ್ತೆ. ಅದೇ ರೀತಿ ಒಂದು ಸಿನಿಮಾ ಗೆದ್ದರೆ ನೂರಾರು ಜನರಿಗೆ ಕೆಲಸ ಸಿಗುತ್ತೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಕನ್ನಡದ ಟಗರು ಸಿನಿಮಾ. ಟಗರು ಚಿತ್ರ ಸಾಕಷ್ಟು ಕಲಾವಿದರ ವೃತ್ತಿ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟ ಚಿತ್ರ ಎಂದರೆ ತಪ್ಪಾಗಲಾರದು.

ಟಗರು ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರೆಲ್ಲರೂ ಹೊಸ ಹೊಸ ಚಿತ್ರಗಳಲ್ಲಿ ಅವಕಾಶಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಎಲ್ಲೆಡೆ ಸಿನಿಮಾ ಹಾಗೂ ಕಲಾವಿದರಿಗೂ ಒಳ್ಳೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇತ್ತೀಚಿಗಷ್ಟೆ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ಟಗರು ಸಿನಿಮಾ ನೋಡಲೆಂದು ಬೆಂಗಳೂರಿಗೆ ಆಗಮಿಸಿದ್ದರು. ಚಿತ್ರ ನೋಡಿ ಮೆಚ್ಚಿಕೊಂಡಿದ್ದರು.

ಡಾಲಿಯ ಬೇಬಿ, ಬೋರಾಪುರದ ನಿಂಗಿಗೆ ಭಾರಿ ಡಿಮ್ಯಾಂಡ್

ಸಿನಿಮಾ ನೋಡಿದ ನಂತರ ನಟಿ ಮಾನ್ವಿತಾ ಹರೀಶ್ ಅವರಿಗೆ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲು ಆಫರ್ ಜೊತೆಯಲ್ಲಿ ಅಡ್ವಾನ್ಸ್ ಕುಡ ಕೊಟ್ಟಿದ್ದಾರೆ. ಅದರ ಜೊತೆಯಲ್ಲಿ ತಮ್ಮ ನಿರ್ಮಾಣದ ಚಿತ್ರಕ್ಕೆ ದುನಿಯಾ ಸೂರಿ ಅವರಿಗೆ ಆಕ್ಷನ್ ಕಟ್ ಹೇಳಲು ಅವಕಾಶವನ್ನೂ ನೀಡಿದ್ದಾರೆ. ದುನಿಯಾ ಸೂರಿ ಕನ್ನಡದ ಸಿನಿಮಾವನ್ನೇ ಟಾಲಿವುಡ್ ಅಂಗಳದಲ್ಲಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರಂತೆ. ಹಾಗಾದರೆ ಸೂರಿ ನಿರ್ದೇಶನ ಮಾಡುವ ಚಿತ್ರ ಯಾವುದು? ಆ ಸಿನಿಮಾದಲ್ಲಿ ಯಾರು ಅಭಿನಯಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ

ಟಾಲಿವುಡ್ ನಲ್ಲಿ ಸುಕ್ಕಾ ಸೂರಿ

ಕನ್ನಡದ ನಿರ್ದೇಶಕ ದುನಿಯಾ ಸೂರಿ ಟಾಲಿವುಡ್ ಅಂಗಳಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಟಗರು ಚಿತ್ರ ನೋಡಿದ ನಂತರ ರಾಮ್ ಗೋಪಾಲ್ ವರ್ಮ ತೆಲುಗಿನಲ್ಲಿ ಚಿತ್ರ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಂಡಿದ್ದು ಆ ಸಿನಿಮಾವನ್ನ ದುನಿಯಾ ಸೂರಿ ಡೈರೆಕ್ಟ್ ಮಾಡಲಿದ್ದಾರೆ.

ತೆಲುಗಿನಲ್ಲಿ ಕಡ್ಡಿಪುಡಿ

ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ಸಿನಿಮಾ ಎನ್ನಿಸಿಕೊಂಡಿದ್ದ ಶಿವರಾಜ್ ಕುಮಾರ್ ಅಭಿನಯದ ಕಡ್ಡಿಪುಡಿ ಸಿನಿಮಾವನ್ನ ದುನಿಯಾ ಸೂರಿ ತೆಲುಗಿನಲ್ಲಿ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.

ನಾಗಾರ್ಜುನ ಅಭಿನಯದಲ್ಲಿ ಕಡ್ಡಿಪುಡಿ

ಕಡ್ಡಿಪುಡಿ ಸಿನಿಮಾದ ಕಥೆಯನ್ನ ಈಗಾಗಲೇ ರಾಮ್ ಗೋಪಾಲ್ ವರ್ಮಾ ಅವರಿಗೆ ಹೇಳಲಾಗಿದೆಯಂತೆ. ಅದನ್ನ ಇಷ್ಟ ಪಟ್ಟಿರುವ ಆರ್ ಜಿ ವಿ ನಾಗಾರ್ಜುನ ಅವರು ಈ ಚಿತ್ರದಲ್ಲಿ ಅಭಿನಯಿಸಿದರೇ ಚೆನ್ನಾಗಿರುತ್ತೆ ಎಂದು ತಿಳಿಸಿದ್ದಾರಂತೆ.

ವರ್ಮ ಚಿತ್ರದಲ್ಲಿ ಮಾನ್ವಿತಾ

ಟಗರು ನೋಡಿದ ನಂತರ ನಿರ್ದೇಶಕ ಆರ್ ಜಿ ವಿ ನಟಿ ಮಾನ್ವಿತಾ ತುಂಬ ಚೆನ್ನಾಗಿ ನಟಿಸಿದ್ದಾರೆ. ಮಾನ್ವಿತಾ ಕೇವಲ ಸಿನಿಮಾದಲ್ಲಿ ನಾಯಕಿ ಆಗಿಲ್ಲ. ತನ್ನ ನಟನ ಸಾಮರ್ಥ್ಯದಿಂದ ಆಕೆ ಶಾಕ್ ಕೊಟ್ಟಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ನನ್ನ ಚಿತ್ರಕ್ಕೆ ಆಕೆಗೆ ಅಡ್ವಾನ್ಸ್ ನೀಡುತ್ತೇನೆ. ಆಕೆ ಕೇಳುವ ಸಂಭಾವನೆಗಿಂತ ಹತ್ತು ಲಕ್ಷ ಹೆಚ್ಚು ಹಣ ಕೊಡುತ್ತೇನೆ.ಎಂದಿದ್ದಾರೆ.

'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್

English summary
Kannada director Duniya Suri has prepared to direct Telugu movie. Suri will be directing the Kadipudi Kannada film in telugu. which is likely to be produced by RGV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X