»   »  ಮತ್ತೆ 'ಕೆಂಡಸಂಪಿಗೆ' ಹಿಂದೆ ಹೊರಟ ನಿರ್ದೇಶಕ ಸೂರಿ

ಮತ್ತೆ 'ಕೆಂಡಸಂಪಿಗೆ' ಹಿಂದೆ ಹೊರಟ ನಿರ್ದೇಶಕ ಸೂರಿ

Posted By:
Subscribe to Filmibeat Kannada

ನಿರ್ದೇಶಕ ಸೂರಿ ಸದ್ಯ 'ಟಗರು' ಸಿನಿಮಾದ ಕೆಲಸದಲ್ಲಿ ಬಿಜಿ ಇದ್ದಾರೆ. ಈಗಾಗಲೇ 'ಟಗರು' ಸಿನಿಮಾದ ಟೀಸರ್ ಹೊರಬಂದಿದ್ದು, ಎಲ್ಲರೂ ಸಿನಿಮಾಗಾಗಿ ಕಾಯುತ್ತಿದ್ದಾರೆ.

ಹೀಗಿರುವಾಗ ಇದೇ ಗ್ಯಾಪ್ ನಲ್ಲಿ ಸೂರಿ ಮತ್ತೊಂದು ಸುದ್ದಿ ಕೊಟ್ಟಿದ್ದಾರೆ. ಅದೇನೆಂದರೆ, ಸೂರಿ ಮತ್ತೆ 'ಕೆಂಡಸಂಪಿಗೆ' ಹಿಂದೆ ಹೋಗುವ ತಯಾರಿಯಲ್ಲಿ ಇದ್ದಾರೆ. 2015ರಲ್ಲಿ 'ಕೆಂಡಸಂಪಿಗೆ' ಪಾರ್ಟ್ 2 ತೋರಿಸಿದ್ದ ಸೂರಿ ಈಗ ಪಾರ್ಟ್ 1 ತೋರಿಸುವ ಮನಸು ಮಾಡಿದ್ದಾರೆ. ಮುಂದೆ ಓದಿ...

ಫೆಬ್ರವರಿಗೆ ಶುರು

'ಟಗರು' ಸಿನಿಮಾ ಜನವರಿಯಲ್ಲಿ ರಿಲೀಸ್ ಆಗುತ್ತೆ. ಆ ಚಿತ್ರದ ನಂತರ ಸೂರಿ ಮತ್ತೆ 'ಕೆಂಡಸಂಪಿಗೆ' ಸೀರೀಸ್ ಸಿನಿಮಾಗಳನ್ನು ಶುರು ಮಾಡಲಿದ್ದಾರೆ. ಮುಂದಿನ ಫೆಬ್ರವರಿಗೆ ಈ ಚಿತ್ರ ಶುರು ಆಗಲಿದೆಯಂತೆ.

'ಕಾಗೆ ಬಂಗಾರ'

'ಕೆಂಡಸಂಪಿಗೆ'ಯ ಪಾರ್ಟ್ 2 'ಗಿಣಿ ಮರಿ ಕೇಸ್' ಕಥೆ ಹೇಳಿದ್ದ ಸೂರಿ ಈಗ ಪಾರ್ಟ್ 1 'ಕಾಗೆ ಬಂಗಾರ'ವನ್ನು ತೋರಿಸಲಿದ್ದಾರೆ. ಸೂರಿ ಅವರ 'ಪರಿಮಳ ಫಿಲ್ಮ್ ಫ್ಯಾಕ್ಟರಿ' ಬ್ಯಾನರ್ ನಲ್ಲಿಯೇ ಈ ಚಿತ್ರ ನಿರ್ಮಾಣವಾಗಲಿದೆ.

ವಿನಾಯಕ್ ಸಿದ್ದಿ

ಈ ಬಾರಿಯ 'ಕೆಂಡಸಂಪಿಗೆ'ಯಲ್ಲಿ ನಟ ವಿನಾಯಕ್ ಸಿದ್ದಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮೂರು ಮುಖ್ಯವಾದ ಕುರುಡರ ಪಾತ್ರಗಳು ಈ ಚಿತ್ರದಲ್ಲಿ ಇರಲಿದೆ.

ದುನಿಯಾ ಸೂರಿಗೆ ಪವರ್ ಸ್ಟಾರ್ ಕೊಟ್ಟರು ಬಂಪರ್ ಗಿಫ್ಟ್.!

ಚರಣ್ ರಾಜ್ ಸಂಗೀತ

'ಟಗರು' ಚಿತ್ರಕ್ಕೆ ಸಂಗೀತ ನೀಡಿದ್ದ ಚರಣ್ ರಾಜ್ ಅವರೇ 'ಕಾಗೆ ಬಂಗಾರ'ಕ್ಕೆ ಮ್ಯೂಸಿಕ್ ನೀಡಲಿದ್ದಾರಂತೆ.

ಅರಬ್ ದೇಶದಲ್ಲಿ ಪೋಗರು ಪ್ರದರ್ಶಿಸಿದ ಶಿವಣ್ಣನ 'ಟಗರು'

ನೂರು ದಿನ ಓಡಿತ್ತು

2015ರಲ್ಲಿ ರಿಲೀಸ್ ಆಗಿದ್ದ 'ಕೆಂಡಸಂಪಿಗೆ' ಸಿನಿಮಾ ನೂರು ದಿನ ಪೂರೈಸಿತ್ತು. ಈ ಚಿತ್ರದ ಮೂಲಕ ನಟ ವಿಕ್ಕಿ ಮತ್ತು ನಟಿ ಮಾನ್ವಿತಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

English summary
Duniya Suri returns to 'Kendasampige' series. ನಿರ್ದೇಶಕ ಸೂರಿ ಮತ್ತೆ 'ಕೆಂಡಸಂಪಗೆ' ಸಿನಿಮಾ ಮಾಡುವ ತಯಾರಿ ನಡೆಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada