»   » 'ಡಬ್ಬಿಂಗ್ ಬರಲಿ ಬಿಡಿ': ದುನಿಯಾ ಸೂರಿ ಕೊಟ್ಟ ಚಾಲೆಂಜಿಂಗ್ ಉತ್ತರ!

'ಡಬ್ಬಿಂಗ್ ಬರಲಿ ಬಿಡಿ': ದುನಿಯಾ ಸೂರಿ ಕೊಟ್ಟ ಚಾಲೆಂಜಿಂಗ್ ಉತ್ತರ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ದುನಿಯಾ ಸೂರಿ ಡಬ್ಬಿಂಗ್ ಕುರಿತು ಕೆಲವು ಚಾಲೆಂಜಿಂಗ್ ಅಂಶಗಳನ್ನ ಹೊರಹಾಕಿದ್ದಾರೆ. ಸೂರಿ ಅವರು ಮಾತುಗಳು ಪರೋಕ್ಷವಾಗಿ ಡಬ್ಬಿಂಗ್ ಬೆಂಬಲಿಸುತ್ತಿದ್ದರೂ, ಪ್ರತ್ಯಕ್ಷವಾಗಿ ನಮ್ಮ ಇಂಡಸ್ಟ್ರಿಯ ವೀಕ್ನೆಸ್ ಗಳನ್ನ ಎತ್ತು ತೋರಿಸುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಚಿತ್ರಗಳು ಬರಬಾರದು ಎಂದು ಕನ್ನಡ ಪರ ಸಂಘಟನೆಗಳು, ಚಿತ್ರರಂಗದ ಹಲವರು ವಿರೋಧಿಸುತ್ತಾ ಹೋರಾಟ ಮಾಡುತ್ತಿದ್ದಾರೆ. ಆದ್ರೆ, ಮತ್ತೆ ಕೆಲವರು ಡಬ್ಬಿಂಗ್ ಬೇಕು, ಕನ್ನಡಕ್ಕೆ ಡಬ್ಬಿಂಗ್ ಬರಲಿ ಎಂದು ಸ್ವಾಗತಿಸುತ್ತಿದ್ದಾರೆ. ಆದ್ರೆ, ಇಲ್ಲಿ ದುನಿಯಾ ಸೂರಿ ಅವರು ಡಬ್ಬಿಂಗ್ ಬೇಕು ಅಥವಾ ಬೇಡ ಎನ್ನುವುದಕ್ಕಿಂತ ಡಬ್ಬಿಂಗ್ ಎದುರಿಸೋಕೆ ನಾವು ರೆಡಿಯಾಗಿರಬೇಕು ಎಚ್ಚರಿಸಿದ್ದಾರೆ.[ಕೆಎಫ್‌ಸಿಸಿ ಡಬ್ಬಿಂಗ್ ವಿರೋಧಿ ಮೇಲ್ಮನವಿ ವಜಾ]

ದುನಿಯಾ ಸೂರಿ ಅವರ ಚಾಲೆಂಜಿಂಗ್ ಮಾತುಗಳನ್ನ ಓದಿ. ಆಮೇಲೆ ನೀವೇ ನಿರ್ಧಾರ ಮಾಡಿ, ಇದು ಸರಿನಾ ಅಥವಾ ತಪ್ಪಾ ಎಂದು......ಮುಂದೆ ಓದಿ....

ದುನಿಯಾ ಸೂರಿ ಪ್ರಕಾರ ಇದು ಸತ್ಯ!

''ಒಂದು ಗೆಲುವಿಗೋಸ್ಕರ, ಒಂದು ಸಿನಿಮಾ ಮಾಡುವುದಕ್ಕೋಸ್ಕರ ಅಷ್ಟೊಂದು ಕಷ್ಟಪಟ್ಟ ನಾವು ಇವತ್ತು ಸುಖದಲ್ಲಿ ಮುಳುಗಿಬಿಟ್ಟೆವಾ ಎಂಬ ಫೀಲ್ ಆಗುತ್ತೆ. ನಡೆಯುತ್ತೆ ಬಿಡು ಅನ್ನೋ ಧೋರಣೆ ಇದು. ಸತ್ಯ ಒಪ್ಪಿಕೊಳ್ಳುವುದಕ್ಕೆ ಏನಂತೆ? ಬೇರೆ ಭಾಷೆ ಚಿತ್ರರಂಗದಲ್ಲಿ ಇರೋ ಥರ ಇಲ್ಲಿ ಕ್ವಾಲಿಟಿ ಆಫ್ ಫಿಲ್ಮ್ ಮೇಕಿಂಗ್ ನಲ್ಲಿ ಸ್ಪರ್ಧೆ ಕೊಡೋರೇ ಇಲ್ಲ. ಫೈಟೇ ಇಲ್ಲ ಅಂದ್ರ ಮಜಾ ಇರಲ್ಲ ಇಂಡಸ್ಟ್ರೀಲಿ''- ದುನಿಯಾ ಸೂರಿ, ನಿರ್ದೇಶಕ [ಕನ್ನಡಕ್ಕೆ ಡಬ್ ಆಯ್ತು ಹಾಲಿವುಡ್ 'ಫಾಸ್ಟ್ ಅಂಡ್ ಫ್ಯೂರಿಯಸ್ 8' ]

ಪಕ್ಕದೂರಿನವರ ಮೇಲೆ ಮ್ಯಾಚ್ ಆಡ್ಬೇಕು

''ಪಕ್ಕದೂರಿನವರು ಮ್ಯಾಚ್ ಗೆ ಕರೆದರೆ ನಾವು ಹೋಗೋಲ್ಲ. ನಮ್ಮೂರಲ್ಲೇ ಈಸಿಯಾಗಿ ಬಾಲು ಹಾಕೋರು ಇದ್ದಾರೆ ಅಂತ ಒಂದು ಸರ್ಕಲ್ ಹಾಕ್ಕೊಂಡು ನಾವು ನಾವೇ ಆಡಿಕೊಂಡು ಕುಂತಿದ್ದೀವಿ. ಅವರತ್ರ ಒಳ್ಳೇ ಬೌಲರ್ ಗಳು ಇದ್ದಾರೆ ಅಂತ ಅವರ ಜತೆ ಮ್ಯಾಚ್ ಗೆ ಹೋಗಲ್ಲ ಅಂದ್ರೆ ಹೆಂಗೆ? ಇದು ಒಂದು ಸಲನಾದ್ರೂ ಉಲ್ಟಾ ಆಗಬೇಕು''- ದುನಿಯಾ ಸೂರಿ, ನಿರ್ದೇಶಕ [ಕನ್ನಡಕ್ಕೆ ಡಬ್ ಆಗಿ ಬಂದೇ ಬಿಡ್ತು 'ಸ್ಪೈಡರ್ ಮ್ಯಾನ್' ಟ್ರೈಲರ್]

ಬರಲಿ ಬಿಡಿ ಡಬ್ಬಿಂಗ್

''ಬರಲಿ ಬಿಡಿ ಡಬ್ಬಿಂಗ್, ಹಂಗಾದ್ರೂ ಕಾಂಪಿಟೇಷನ್ ಶುರುವಾಗಲಿ. ನಮ್ ಚಿತ್ರಗಳ ಕಂಟೆಂಟು ಮತ್ತು ಕ್ವಾಲಿಟಿ ಇಂಪ್ರೂವ್ ಆಗುತ್ತೆ. ನಮಗೆ ತೋಚಿದಂಗೆ ಫಿಲ್ಮ್ ಮಾಡ್ತಾನೇ ಇದ್ರೆ ಒಂದು ದಿನ ಜನಾನೇ ನಮ್ಮನ್ನ ರಿಜೆಕ್ಟ್ ಮಾಡಿ ಬಿಸಾಕ್ತಾರೆ''- ದುನಿಯಾ ಸೂರಿ, ನಿರ್ದೇಶಕ

ಸಿನಿಮಾ ನೋಡುಗನಿಗೆ ಕೋಪ ತರಿಸಬಾರದು

''ನೀವು ಸಿನಿಮಾ ಮಾಡಲೇಬೇಕು ಅಂತ ಯಾರೂ ನಮ್ಮ ಮನೆ ಮುಂದೆ ಕುಂತು ಸ್ಟ್ರೈಕ್ ಮಾಡ್ತಾ ಇಲ್ಲ. ಒಟ್ಟಾರೆ ಸಿನಿಮಾ ನೋಡುಗನಿಗೆ ಯಾವತ್ತೂ ಕೋಪ ಬರಿಸ್ಬಾರದು. ಅವರಿಗೆ ಕೋಪ ಬಂದ ದಿನ ನಾವು ಸರ್ವನಾಶ ಆಗ್ತೀವಿ."- ದುನಿಯಾ ಸೂರಿ, ನಿರ್ದೇಶಕ

ನೀವೇನ್ ಅಂತೀರಾ?

ದುನಿಯಾ ಸೂರಿ ಅವರ ಮಾತುಗಳು ಕೇಳಿದ್ಮೇಲೆ ಡಬ್ಬಿಂಗ್ ಚಿತ್ರಗಳ ಬಗ್ಗೆ ನಿಮಗೆ ಏನು ಅನಿಸುತ್ತಿದೆ ಎಂಬುದನ್ನ ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ಗಳಲ್ಲಿ ಬರೆದು ತಿಳಿಸಿ....

English summary
Kannada Director Duniya suri Talk About Dubbing Movies in Kannada. here is the

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada