For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ 'ಜಾನಿ'-'ಕನಕ' ತಂಡದಿಂದ ಭರ್ಜರಿ ಗಿಫ್ಟ್

  By Bharath Kumar
  |
  ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ | Filmibeat Kannada

  ಕನ್ನಡದ ಕರಿಚಿರತೆ, ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆ ತಡರಾತ್ರಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಗಿರಿನಗರದಲ್ಲಿರುವ ವಿಜಿ ನಿವಾಸಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

  ವಿಜಿ ಹುಟ್ಟುಹಬ್ಬದ ವಿಶೇಷವಾಗಿ ಹೊಸ ಚಿತ್ರಗಳು ಅಭಿಮಾನಿಗಳಿಗೆ ವಿಶೇಷವಾದ ಉಡುಗೊರೆಯನ್ನ ನೀಡಿದೆ. ದುನಿಯಾ ವಿಜಯ್ ಅಭಿನಯಿಸಿರುವ 'ಕನಕ', 'ಜಾನಿ ಜಾನಿ ಎಸ್ ಪಪ್ಪಾ' ಹಾಗು 'ಕುಸ್ತಿ' ಚಿತ್ರಗಳು ಸರ್ಪ್ರೈಸ್ ಗಿಫ್ಟ್ ನೀಡಿದೆ.

  ದುನಿಯಾ ವಿಜಯ್ ಜೊತೆ ಕುಸ್ತಿ ಅಖಾಡಕ್ಕೀಳಿದ ಮಗ 'ಸಮ್ರಾಟ್'

  ಸಣ್ಣಪುಟ್ಟ ಪಾತ್ರಗಳನ್ನ ನಿರ್ವಹಿಸುತ್ತಿದ್ದ ವಿಜಿ, 'ದುನಿಯಾ' ಸಿನಿಮಾ ಮೂಲಕ ನಾಯಕನಟನಾದರು. ಅಲ್ಲಿಂದ ನಡೆದಿದ್ದೆಲ್ಲ ಇತಿಹಾಸ. 'ಯುಗ', 'ಗೆಳೆಯ', 'ಚಂಡ', 'ಅವ್ವ', 'ಸ್ಲಂ ಬಾಲ', 'ಜಂಗ್ಲಿ', 'ತಾಕತ್', 'ಶಂಕರ್‌ ಐಪಿಎಸ್', 'ಕರಿಚಿರತೆ', 'ಮಾಸ್ತಿಗುಡಿ' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ ಸೂಪರ್ ಸ್ಟಾರ್ ಆದ್ರು. ಸದ್ಯ, ಹೊಸ ಚಿತ್ರಗಳಿಂದ ಸಿಕ್ಕ ಉಡುಗೊರೆ ಏನು? ಮುಂದೆ ಓದಿ.....

  'ಜಾನಿ' ಟೀಸರ್ ಬಂತು

  'ಜಾನಿ' ಟೀಸರ್ ಬಂತು

  ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿಜಯ್ ಅವರ ಮಾಸ್ ಎಂಟ್ರಿ ಪರಿಚಯಿಸಿರುವ ಚಿತ್ರತಂಡ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿದ್ದಾರೆ.

  'ಕನಕ' ಎಣ್ಣೆ ಸಾಂಗ್

  'ಕನಕ' ಎಣ್ಣೆ ಸಾಂಗ್

  ಆರ್ ಚಂದ್ರು ನಿರ್ದೇಶನದಲ್ಲಿ ತಯಾರಾಗಿರುವ 'ಕನಕ' ಚಿತ್ರ ಜನವರಿ 26 ರಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಟೈಟಲ್ ಹಾಡಿನಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಇದೀಗ, ವಿಜಿ ಹುಟ್ಟುಹಬ್ಬದ ವಿಶೇಷವಾಗಿ ಎಣ್ಣೆ ಪಾರ್ಟಿ ಸಾಂಗ್ ರಿಲೀಸ್ ಆಗಿದೆ.

  'ಕುಸ್ತಿ' ಪೋಸ್ಟರ್

  'ಕುಸ್ತಿ' ಪೋಸ್ಟರ್

  ಇನ್ನು ಸ್ವತಃ ವಿಜಿ ಬ್ಯಾನರ್ ನಲ್ಲೇ ಸೆಟ್ಟೇರಲಿರುವ ಹೊಸ ಸಿನಿಮಾ 'ಕುಸ್ತಿ'ಯ ಹೊಸ ಪೋಸ್ಟರ್ ಅನಾವರಣಗೊಳಿಸಲಾಗಿದೆ. ಅನಿಲ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ವಿಜಿ ಮಗ ಸಾಮ್ರಾಟ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ.

  ಅಪ್ಪ-ಮಗನ ಜುಗಲ್ ಬಂಧಿ

  ಅಪ್ಪ-ಮಗನ ಜುಗಲ್ ಬಂಧಿ

  'ಕುಸ್ತಿ' ಚಿತ್ರದಲ್ಲಿ ದುನಿಯಾ ವಿಜಯ್ ಕುಸ್ತಿ ಪಟು ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಮಗ ಕೂಡ ಅಪ್ಪನ ಜೊತೆ ಕುಸ್ತಿ ಅಖಾಡಕ್ಕೀಳಿದಿದ್ದಾರೆ. ಕನಕ, ಜಾನಿ ಚಿತ್ರಗಳ ನಂತರ ಈ ಚಿತ್ರ ಆರಂಭವಾಗಲಿದೆ.

  English summary
  Kannada actor Vijay, who is popularly known as Duniya Vijay after delivering the hit movie Duniya, celebrates his 44th birthday today (January 20).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X