»   » 'ಆಟೋ'ದಲ್ಲಿ ಬಂದ ನಾಗರತ್ನ 'ಲ್ಯಾಂಡ್ ರೋವರ್'ನಲ್ಲಿ ಹೋದ್ರು!

'ಆಟೋ'ದಲ್ಲಿ ಬಂದ ನಾಗರತ್ನ 'ಲ್ಯಾಂಡ್ ರೋವರ್'ನಲ್ಲಿ ಹೋದ್ರು!

Posted By:
Subscribe to Filmibeat Kannada

ದುನಿಯಾ ವಿಜಿ ಪತ್ನಿ ನಾಗರತ್ನ ಪಾಲಿಗಿವತ್ತು ಬಹುಶಃ ತಮ್ಮ ಜೀವಮಾನದಲ್ಲೇ ಅತಿ ಸಂತಸದ ದಿನ. ಕಳೆದ ವರ್ಷದಿಂದಲೂ ತಮ್ಮ ದಾಂಪತ್ಯದ ಪುನರ್ ಸ್ಥಾಪನೆಗಾಗಿ ಕೋರ್ಟ್ ಮೊರೆಹೋಗಿದ್ದ ನಾಗರತ್ನ ಇಂದು ಸಖತ್ ಖುಷಿಯಿಂದ ಹೊರನಡೆದರು.

ಪತಿ ದುನಿಯಾ ವಿಜಿ ತಮ್ಮ ವಿರುದ್ಧ ಡೈವೋರ್ಸ್ ಕೇಸ್ ಹಾಕಿದ್ಮೇಲೆ, ಕೋರ್ಟ್ ಗೆ ಆಟೋದಲ್ಲಿ ಬರುತ್ತಿದ್ದ ನಾಗರತ್ನ, ಇಂದು ಅದೇ ಕೋರ್ಟ್ ನಲ್ಲಿ ಗಂಡನ ಮನಸ್ಸನ್ನ ಗೆದ್ದು, ಪತಿಯೊಂದಿಗೆ ಲ್ಯಾಂಡ್ ರೋವರ್ ಕಾರಿನಲ್ಲಿ ತೆರಳಿದರು.

Duniya Vijay1

ಆ ಮೂಲಕ ವಿಜಿ ದಾಂಪತ್ಯ ಕಲಹ ಅಧ್ಯಾಯಕ್ಕೆ ಪೂರ್ಣವಿರಾಮ ಬಿದ್ದಿದೆ. ಸರಿಸುಮಾರು ಎರಡು ವರ್ಷದಿಂದ ಮಾಧ್ಯಮಗಳಲ್ಲಿ ಒಬ್ಬರಮೇಲೊಬ್ಬರು ಆರೋಪಗಳನ್ನ ಮಾಡುತ್ತಿದ್ದ ಈ ದಂಪತಿ ಇಂದು ಒಟ್ಟಾಗಿ ನಿಂತು ಅದೇ ಮಾಧ್ಯಮದ ಮುಂದೆ ''ನಾವಿಬ್ಬರು ಇನ್ಮುಂದೆ ಖುಷಿಯಾಗಿ ಇರ್ತೀವಿ'' ಅಂತ ನಗುತ್ತಲೇ ಹೇಳಿಕೆ ನೀಡಿದರು. [2015 ಲ್ಯಾಂಡ್ ಲೋವರ್ ಫ್ರಿಲ್ಯಾಂಡರ್ ಅನಾವರಣ]

ಮಧ್ಯಸ್ತಿಕೆ ಕೇಂದ್ರದಲ್ಲಿ ಸಂಧಾನ ಯಶಸ್ವಿಯಾದ ಬಳಿಕ ನಾಲ್ಕನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿ, ದುನಿಯಾ ವಿಜಿ ಮತ್ತು ನಾಗರತ್ನ ಒಟ್ಟಾಗಿ ಕೋರ್ಟ್ ನಿಂದ ಹೊರಗೆ ಬಂದರು. [ದುನಿಯಾ ವಿಜಿ-ನಾಗರತ್ನ ಸಂಧಾನಕ್ಕೆ 6 ಸೂತ್ರಗಳು]

ರಾಜಿ ಪ್ರಕ್ರಿಯೆಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಿ, ''ನನ್ನ ಮತ್ತು ನಾಗರತ್ನ ನಡುವಿನ ವೈಮನಸ್ಯ ಶಮನವಾಗಿದೆ. ಇಬ್ಬರ ಮಧ್ಯೆ ಇದ್ದ ಭಿನ್ನಾಭಿಪ್ರಾಯವನ್ನ ಸರಿಪಡಿಸಿಕೊಂಡಿದ್ದೀವಿ. ಇದಕ್ಕೆ ನಾನು ಮಧ್ಯಸ್ತಿಕೆ ಕೇಂದ್ರದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಸಂಸಾರವನ್ನ ಸರಿಮಾಡಿದ ಕೋರ್ಟ್ ಗೂ ಕೃತಜ್ಞತೆ ಸಲ್ಲಿಸುತ್ತೇನೆ'', ಅಂದರು.

Duniya Vijay2

ಎರಡು ವರ್ಷದಿಂದ ಸಂಸಾರದಲ್ಲಿ ಬಿರುಕು ಮೂಡಿರುವ ಬಗ್ಗೆ ಮಾಧ್ಯಮ ವರದಿಗಾರರು ಪ್ರಶ್ನೆ ಕೇಳಿದಾಗ, ದುನಿಯಾ ವಿಜಿ, ''ದೂರಾವಾದಾಗಲೇ ಅದರ ಬೆಲೆ ನಮಗೆ ಗೊತ್ತಾಗುವುದು. ಈಗ ಎಲ್ಲವೂ ಸರಿಹೋಗಿದೆ. ಇನ್ಮುಂದೆ ನಾವು ಚೆನ್ನಾಗಿರುತ್ತೀವಿ. ಅಭಿಮಾನಿಗಳ ಆಶೀರ್ವಾದದಿಂದ ನಾವು ಒಟ್ಟಾಗಿದ್ದೀವಿ. ಇದಕ್ಕೆ ನಮ್ಮ ಮಕ್ಕಳು ಕಾರಣ'', ಅಂತ ಹೇಳಿಕೆ ನೀಡಿದರು. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

ಇದೇ ವೇಳೆ ಮಾತನಾಡಿದ ನಾಗರತ್ನ, ''ನನಗೆ ನನ್ನ ಗಂಡ ವಾಪಸ್ಸು ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ನನ್ನ ನಂಬಿಕೆ ಕಡೆಗೂ ನಿಜವಾಗಿದೆ. ದೇವರು, ಅಭಿಮಾನಿಗಳು ಮತ್ತು ನನ್ನ ಮಕ್ಕಳು ಕೈಬಿಡಲಿಲ್ಲ. ಖುಷಿಯಲ್ಲಿ ಮಾತೇ ಬರುತ್ತಿಲ್ಲ'', ಅಂತ ಸಂತಸ ವ್ಯಕ್ತಪಡಿಸಿದರು.

'ವಿವಾಹ ವಿಚ್ಛೇದನ' ಮತ್ತು 'ದಾಂಪತ್ಯ ಪುನರ್ ಸ್ಥಾಪನೆ' ಕೇಸ್ ಗಳನ್ನ ವಾಪಸ್ಸು ಪಡೆದಿರುವ ವಿಜಿ ಮತ್ತು ನಾಗರತ್ನ ಇನ್ಮುಂದೆ ಒಂದೇ ಮನೆಯಲ್ಲಿ ವಾಸಿಸುವುದಾಗಿ, ಮತ್ತು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವುದಾಗಿ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಅಲ್ಲಿಗೆ ಇಡೀ ರಾಜ್ಯದಲ್ಲೇ ಸೆನ್ಸೇಷನ್ ಹುಟ್ಟಿಸಿದ್ದ ದುನಿಯಾ ಡೈವೋರ್ಸ್ ಕೇಸ್ ಕ್ಲೋಸ್ ಆದ್ಹಂಗೆ ಲೆಕ್ಕ.

English summary
After the successful negotiation by the mediation centre, Duniya Vijay Divorce case ends on a happy note. After Family court proceedings, Duniya Vijay and Nagarathna adressed the media. Here is the report on the couple's reaction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada