»   » ದುನಿಯಾ ವಿಜಯ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ!

ದುನಿಯಾ ವಿಜಯ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ 'ಕಲಿ' ಸಿನಿಮಾದಲ್ಲಿ ಒಂದಾಗ್ತಾರೆ ಅನ್ನೋದು ನಿಮಗೆ ಗೊತ್ತಿದೆ. ಈಗ ಜಗಜ್ಜಾಹೀರಾಗಿರುವ ಸುದ್ದಿ ಪ್ರಕಾರ ಶಿವಣ್ಣ ಮತ್ತು ದುನಿಯಾ ವಿಜಯ್ ತೆರೆ ಹಂಚಿಕೊಳ್ಳಲಿದ್ದಾರೆ.

ವರದಿಗಳ ಪ್ರಕಾರ, ನೃತ್ಯ ಸಂಯೋಜಕ ಕಮ್ ನಿರ್ದೇಶಕ ಎ.ಹರ್ಷ, ದುನಿಯಾ ವಿಜಯ್ ಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರ ನಿರ್ವಹಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. [ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

Duniya Vijay and Shiva Rajkumar teams up for Harsha's next

ಈಗಾಗಲೇ ಶಿವಣ್ಣ ಜೊತೆ 'ಭಜರಂಗಿ' ಮತ್ತು 'ವಜ್ರಕಾಯ' ಸಿನಿಮಾದಲ್ಲಿ ಹರ್ಷ ಕೆಲಸ ಮಾಡಿದ್ದಾರೆ. ಹೀಗಾಗಿ ಇನ್ನೂ ಹೆಸರಿಡದ ಈ ಚಿತ್ರಕ್ಕೂ ಶಿವಣ್ಣ ಹಿಂದು ಮುಂದು ನೋಡದೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. [ಶಿವರಾಜ್ ಕುಮಾರ್ ಸಿಕ್ಕಾಪಟ್ಟೆ ಅಪ್ ಸೆಟ್ ಆಗಿರುವುದೇಕೆ?]

ಇನ್ನೂ ಶಿವರಾಜ್ ಕುಮಾರ್ ಆಪ್ತ ಕೆ.ಪಿ.ಶ್ರೀಕಾಂತ್ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಸದ್ಯದಲ್ಲೇ ಈ ಚಿತ್ರ ಅನೌನ್ಸ್ ಆಗಲಿದೆ.

English summary
According to the reports, Kannada Actor Shiva Rajkumar and Duniya Vijay will share on-screen space in A.Harsha's directorial next.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada