»   » 'ದುನಿಯಾ ವಿಜಿ'ಯ ನಾನಾ ಮುಖಗಳು

'ದುನಿಯಾ ವಿಜಿ'ಯ ನಾನಾ ಮುಖಗಳು

Posted By:
Subscribe to Filmibeat Kannada

ಕರಿಚಿರತೆ, ಬ್ಲಾಕ್ ಕೋಬ್ರಾ, ಆಕ್ಷನ್ ಜಾಕ್ಸನ್ ಅಂತಲೇ ಗಾಂಧಿನಗರದಲ್ಲಿ ಹೆಸರಾಗಿರುವ ನಟ ದುನಿಯಾ ವಿಜಿ. ಇಲ್ಲಿಯವರೆಗೂ ಪಕ್ಕಾ ಲೋಕಲ್ ಹುಡುಗನಾಗಿ, ಪೋಲಿ, ಟಪೋರಿ ಪಾತ್ರಗಳಲ್ಲೇ ವಿಜಿ ಹೆಚ್ಚಾಗಿ ಕಾಣಿಸಿಕೊಂಡಿರುವುದುಂಟು.

ಮಾಸ್ ಪ್ರೇಕ್ಷಕರ ಆರಾಧ್ಯದೈವನಾಗಿರುವ ವಿಜಿ ಇದೀಗ ಕ್ಲಾಸ್ ಪ್ರೇಕ್ಷಕರನ್ನೂ ಸೆಳೆಯುವುದಕ್ಕೆ ಹೊಸ ಪ್ರಯೋಗ ಮಾಡಿದ್ದಾರೆ. ಅದು ಅವರ ಮುಂಬರುತ್ತಿರುವ ಚಿತ್ರ 'ಜಾಕ್ಸನ್' ನಲ್ಲಿ. ['ಜಾಕ್ಸನ್' ಡಬ್ಬಿಂಗ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟ]

'ಜಾಕ್ಸನ್' ಅಂತ ಹೆಸರು ಕೇಳಿದ ತಕ್ಷಣವೇ ಎಲ್ಲರಿಗೂ ನೆನಪಾಗುವುದು ಡ್ಯಾನ್ಸಿಂಗ್ ಸೆನ್ಸೇಷನ್ 'ಮೈಕೇಲ್ ಜಾಕ್ಸನ್'. ದಿವಂಗತ ಪಾಪ್ ತಾರೆಯ ಹೆಸರಿಟ್ಟ ಮೇಲೆ ಜಾಕ್ಸನ್ ಗೊಂದು ಟ್ರಿಬ್ಯೂಟ್ ನ ಸಹಜವಾಗಿವೇ ನೀಡಬೇಕು ಅಲ್ವಾ?! [ದುನಿಯಾ ವಿಜಯ್ 'ಜಾಕ್ಸನ್' ತಮಿಳು ರೀಮೇಕ್]

ಹೃತಿಕ್ ರೋಷನ್ ನಿಂದ ಹಿಡಿದು ಪ್ರಭುದೇವಾವರೆಗೂ 'ಮೈಕೇಲ್ ಜಾಕ್ಸನ್' ಗೆ ನೃತ್ಯ ರೂಪಕದ ಪ್ರಕಾರ ಟ್ರಿಬ್ಯೂಟ್ ನೀಡಿದ್ದಾರೆ. ಇದೀಗ ಅದೇ ಹಾದಿಯಲ್ಲಿ ದುನಿಯಾ ವಿಜಿ ಕೂಡ ಹೆಜ್ಜೆ ಹಾಕಿದ್ದಾರೆ. 'ಮೈಕೇಲ್ 'ಜಾಕ್ಸನ್' ಆಗಿರುವ ದುನಿಯಾ ವಿಜಿಯನ್ನು ನೋಡುವುದಕ್ಕೆ ಸ್ಲೈಡ್ ಗಳನ್ನ ಕ್ಲಿಕ್ ಮಾಡಿ...

ಮೈಕೇಲ್ 'ಜಾಕ್ಸನ್'

ಥೇಟ್ 'ಮೈಕೇಲ್ ಜಾಕ್ಸನ್' ನಂತೆ ಉಡುಗೆ ತೊಡುಗೆ ತೊಟ್ಟಿರುವ ದುನಿಯಾ ವಿಜಿ ಕ್ಯಾಮರಾ ಕಣ್ಣುಗಳಲ್ಲಿ ಕಾಣಿಸಿಕೊಂಡಿರುವುದು ಹೀಗೆ.

'ಮೂನ್ ವಾಕ್' ಮಾಡಿದ್ದಾರೆ ವಿಜಿ

ಬರೀ ಪಬ್ಲಿಸಿಟಿಗೋಸ್ಕರ ಪೋಸ್ ಕೊಟ್ಟಿರುವುದು ಮಾತ್ರ ಅಲ್ಲ, 'ಮೈಕೇಲ್ ಜಾಕ್ಸನ್'ನಂತೆ ಸ್ಟೆಪ್ ಕೂಡ ಹಾಕಿದ್ದಾರೆ ಬ್ಲಾಕ್ ಕೋಬ್ರಾ. ವಿಶೇಷ ಅಂದ್ರೆ ಒಂದೇ ಟೇಕ್ ನಲ್ಲಿ 'ಜಾಕ್ಸನ್'ನ ಎವರ್ಗ್ರೀನ್ 'ಮೂನ್ ವಾಕ್' ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ ಕರಿಚಿರತೆ.

ಖರಾಬು ಲೋಕಲ್ಲು 'ಜಾಕ್ಸನ್'.

'ಜಾಕ್ಸನ್' ಅನ್ನುವ ಚಿತ್ರದಲ್ಲಿ 'ಮೈಕೇಲ್ ಜಾಕ್ಸನ್' ಗೆಟಪ್ ಹಾಕಿರುವ ಮಾತ್ರಕ್ಕೆ ದುನಿಯಾ ವಿಜಿ ಚಿತ್ರದಲ್ಲಿ ಅಲ್ಟ್ರಾ ಮಾರ್ಡನ್ ಅಂದುಕೊಳ್ಳಬೇಡಿ. ನೋಡೋಕೆ ಸ್ಟೈಲಿಶ್ ಆಗಿ ಕಂಡ್ರೂ, ಈ 'ಜಾಕ್ಸನ್' ಸೈಕಲ್ ಓಡಿಸುವ ಖರಾಬು ಲೋಕಲ್ಲು!

'ಜಾಕ್ಸನ್'ಗೆ ಗ್ರ್ಯಾಂಡ್ ಎಂಟ್ರಿ

ಅಸಲಿಗೆ ವಿಜಿ, 'ಜಾಕ್ಸನ್' ರೂಪ ತಾಳಿರುವುದು 'ಜಾಕ್ಸನ್' ಚಿತ್ರದ ಇಂಟ್ರಡಕ್ಷನ್ ಸಾಂಗ್ ನಲ್ಲಿ. ಚಿತ್ರದಲ್ಲಿ ವಿಜಿಗೊಂದು ಗ್ರ್ಯಾಂಡ್ ಎಂಟ್ರಿ ಹೇಗೆ ಕೊಡಬಹುದು ಅಂತ ಚರ್ಚೆ ಮಾಡುತ್ತಿರುವಾಗ ಯೋಗರಾಜ್ ಭಟ್, ನಿರ್ದೇಶಕ ಸನತ್ ಮತ್ತು ದುನಿಯಾ ವಿಜಿಗೆ 'ಮೈಕೇಲ್ ಜಾಕ್ಸನ್' ನೆನಪಾಗಿದ್ದಾರೆ. ಅದರ ಪರಿಣಾಮವೇ ಈ ಹಾಡು.

ಭಟ್ಟರ ಪದ

'ಮೈಕೇಲ್ ಜಾಕ್ಸನ್'ಗೂ ಕನ್ನಡದ ಕರಿಚಿರತೆಗೂ ಹೋಲಿಕೆ ಮಾಡಿ, ಭಟ್ರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ''ಅವನು 'ಮೈಕೇಲ್ ಜಾಕ್ಸನ್', ನಾನು ಖರಾಬು ಲೋಕಲ್ಲು...ಅವನು ಇಂಟರ್ ನ್ಯಾಷಿನಲ್ಲು, ನಾನು ಸೈಕಲ್ ಓಡಿಸೋನು'' ಅನ್ನುವ ತಮ್ಮ ಎಂದಿನ ಶೈಲಿಯ ಲಿರಿಕ್ಸ್ ಬರೆದಿದ್ದಾರೆ.

ಸೈಕಲ್ ಓಡಿಸುವ 'ಜಾಕ್ಸನ್'

ಹಾಡಿಗೆ ತಕ್ಕಂತೆ 'ಜಾಕ್ಸನ್' ಆಗಿ ಸೈಕಲ್ ಕೂಡ ಓಡಿಸಿದ್ದಾರೆ ದುನಿಯಾ ವಿಜಿ.

ಬ್ಯಾಟು ಹಿಡಿದಿರುವ 'ಜಾಕ್ಸನ್'

ವಿಶೇಷ ಅಂದ್ರೆ, ಅದೇ ಪಾಪ್ ತಾರೆ ಲುಕ್ ನಲ್ಲಿ ಸಚಿನ್ ತೆಂಡುಳ್ಕರ್ ನಂತೆ ಬ್ಯಾಟ್ ಕೂಡ ಹಿಡಿದಿದ್ದಾರೆ ದುನಿಯಾ ವಿಜಿ.

ವಿಜಿಗೆ 'ವಿಗ್'

'ಮೈಕೇಲ್ ಜಾಕ್ಸನ್' ನಂತೆ ವೇಷಭೂಷಣ ಧರಿಸುವುದು ಸುಲಭ. ಆದರೆ ಅದೇ 'ಜಾಕ್ಸನ್'ನಂತೆ ಹೇರ್ ಸ್ಟೈಲ್ ಮಾಡಿಕೊಳ್ಳುವುದು ಕಷ್ಟ. ಇದಕ್ಕೋಸ್ಕರ ಮುಂಬೈ, ಚೆನ್ನೈ ಸೇರಿದಂತೆ ಹಲವಾರು ಕಡೆ ಸುತ್ತಾಡಿ ವಿಜಿಗಾಗಿ ವಿಗ್ ನ ವಿಶೇಷವಾಗಿ ರೆಡಿಮಾಡಿಸಿದ್ದಾರೆ ನಿರ್ದೇಶಕರು.

'ಸ್ಟೈಲಿಶ್' ವಿಜಿ

ಈ ಹಾಡಿನಲ್ಲಿ ರಷ್ಯಾದ ನೃತ್ಯಗಾರ್ತಿರು ಹೆಜ್ಜೆ ಹಾಕಿರುವುದು ಮತ್ತೊಂದು ವಿಶೇಷ. ನೃತ್ಯ ನಿರ್ದೇಶಕ ಮುರುಳಿ ಸಂಯೋಜಿಸಿರುವ ಈ ಹಾಡಲ್ಲಿ ತಲೆಗೆ ಹ್ಯಾಟ್ ತೊಟ್ಟು ವಿಜಿ ಕಮಾಲ್ ಮಾಡಿದೆ ಅಂತಿದೆ ಚಿತ್ರತಂಡ.

ಭಿನ್ನವಿಭಿನ್ನ ಲುಕ್ ನಲ್ಲಿ ವಿಜಿ

ಹಾಡಿನಲ್ಲಿ ಮಾತ್ರವಲ್ಲದೇ ಇಡೀ ಸಿನಿಮಾದಲ್ಲಿ ತರಹೇವಾರಿ ಅವತಾರಗಳನ್ನ ದುನಿಯಾ ವಿಜಿ ತಾಳಿದ್ದಾರೆ. ಅದು ನಾಟಕದ ಕಂಪನಿಯವರ ಜೊತೆ ಗದೆ ಹಿಡಿದು ದುನಿಯಾ ವಿಜಿ ಪೋಸ್ ಕೊಟ್ಟಿರುವುದನ್ನ ನೋಡಿದರೆ ಗೊತ್ತಾಗುತ್ತೆ.

'ರಾಜಾಧಿರಾಜ' ವಿಜಿ

ಇನ್ನೂ ತಲೆಗೆ ಪೇಟಾ ತೊಟ್ಟು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿರುವ ಗಾಂಧಿನಗರದ 'ಜಾಕ್ಸನ್' ಒಟ್ಟು ಒಂಬತ್ತು ಗೆಟಪ್ ಹಾಕಿ, ಹಾಡಿನಲ್ಲಿ ಎಂಟ್ರಿಕೊಟ್ಟು ಎಲ್ಲರನ್ನ ರಂಜಿಸಲಿದ್ದಾರೆ.

'ಜಾನಿ' ಜಾಕ್ಸನ್

ಹಾಡುಗಳನ್ನ ಹೊರತುಪಡಿಸಿ, ಇಡೀ ಚಿತ್ರದಲ್ಲಿ ದುನಿಯಾ ವಿಜಿ 'ಜಾನಿ ಮೇರಾ ನಾಮ್' ಚಿತ್ರದಲ್ಲಿ ಇದ್ದಂತೆ ಇರಲಿದ್ದಾರೆ. ವಿಜಿಗೆ ಮೊದಲ ಬಾರಿಗೆ ಪಾವನಾ ಜೋಡಿಯಾಗಿದ್ದರೆ, ಕಾಮಿಡಿ ಕಚಗುಳಿ ಇಡುವುದಕ್ಕೆ ರಂಗಾಯಣ ರಘು ಇದ್ದಾರೆ.

ಸನತ್ ಹೊಸ ಪ್ರಯತ್ನ

ಈವರೆಗೂ ಗೂಗ್ಲಿ, ಲೂಸಿಯಾ, ಡ್ರಾಮಾ, ಗೋವಿಂದಾಯ ನಮಃ, ಜಯಮ್ಮನ ಮಗ ಚಿತ್ರಗಳಿಗೆ ಸಂಕಲನಕಾರರಾಗಿದ್ದ ಸನತ್, ವಿಜಿ ಸಲಹೆಯ ಮೇರೆಗೆ ಅವರ ಚಿತ್ರಕ್ಕೇ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮುಂದಿನ ವಾರ 'ಜಾಕ್ಸನ್' ಆಡಿಯೋ ಔಟ್

''ಈಗಾಗಲೇ 'ಜಾಕ್ಸನ್' ಶೂಟಿಂಗ್ ಕಂಪ್ಲೀಟ್ ಆಗಿದೆ. ಮುಂದಿನ ವಾರ ಆಡಿಯೋ ರಿಲೀಸ್ ಆಗಲಿದೆ. ವಿಜಿ 'ಜಾಕ್ಸನ್' ಗೆಟಪ್ ಹಾಕಿರುವುದು ಚಿತ್ರಕ್ಕೆ ಕಳೆ ಕೊಟ್ಟಿದೆ. ಒಂದೇ ಟೇಕ್ ನಲ್ಲಿ ಅವರು ಮೂನ್ ವಾಕ್ ಮಾಡಿದ್ದನ್ನ ನೋಡಿ ಆಶ್ಚರ್ಯ ಆಯ್ತು. ಒಟ್ಟು ಒಂಬತ್ತು ಗೆಟಪ್ ನಲ್ಲಿ ವಿಜಿಯನ್ನ ಸ್ಟೈಲಿಶ್ ಆಗಿ ತೋರಿಸಿದ್ದೀವಿ'' ಅಂತ 'ಫಿಲ್ಮಿಬೀಟ್ ಕನ್ನಡ' ಗೆ ಸನತ್ ತಿಳಿಸಿದರು.

ಸಂಭಾವನೆ ಇಲ್ಲದೇ ವಿಜಿ ನಟನೆ

'ಜಾಕ್ಸನ್' ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ, ವಿಜಿ ಈ ಚಿತ್ರದಲ್ಲಿ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲ. ತಮ್ಮ ಆಪ್ತ ಸ್ನೇಹಿತರಾಗಿರುವ ಅನಿಲ್ ಮತ್ತು ಸುಂದರ್.ಪಿ.ಗೌಡ ನಿರ್ಮಿಸುತ್ತಿರುವುದರಿಂದ ವಿಜಿ ಫ್ರೀ ಕಾಲ್ ಶೀಟ್ ಕೊಟ್ಟಿದ್ದಾರಂತೆ.

ತಮಿಳಿನ ರೀಮೇಕ್

ಕಾಲಿವುಡ್ ನ ಹಿಟ್ ಸಿನಿಮಾ 'ಇದಕ್ಕು ತಾನ್ ಆಸೈ ಪಟ್ಟಿಯಾ ಬಾಲಕುಮಾರ' ಚಿತ್ರದ ರೀಮೇಕ್ ಆಗಿರುವ 'ಜಾಕ್ಸನ್'ಗೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡಿದ್ದಾರೆ. ಹಿಂದೆಂದೂ ನೀವು ನೋಡಿರದ ದುನಿಯಾ ವಿಜಿಯ ನಾನಾ ಮುಖಗಳು ಇಲ್ಲಿವೆ. ಅದನ್ನ ತೆರೆಮೇಲೆ ನೋಡೋಕೆ ಮುಂದಿನ ತಿಂಗಳವರೆಗೂ ಕಾಯಬೇಕು. (ಫಿಲ್ಮಿಬೀಟ್ ಕನ್ನಡ)

English summary
Duniya Vijay is more stylish than ever before in his upcoming movie Jackson. Not only he has performed Micheal Jackson's popular Moon Walk, Duniya Vijay is also seen as Michael Jackson. Here, are the different looks of Duniy avijay in Jackson. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada