For Quick Alerts
  ALLOW NOTIFICATIONS  
  For Daily Alerts

  ನಟ ದುನಿಯಾ ವಿಜಯ್ ದೇಹದಾರ್ಢ್ಯ ಸ್ಪರ್ಧೆ

  By Rajendra
  |
  ಸಿಕ್ಸ್ ಪ್ಯಾಕ್ ನಟರಲ್ಲಿ ನಟ ದುನಿಯಾ ವಿಜಯ್ ಸಹ ಒಬ್ಬರು. ಈಗಾಗಲೆ ಅವರು 'ಶಂಕರ್ ಐಪಿಎಸ್' ಚಿತ್ರದಲ್ಲಿ ತಮ್ಮ ದಷ್ಟಪುಷ್ಟ ದೇಹವನ್ನು ತೋರಿಸಿದ್ದರು. ಈಗ ಅವರ ಹೆಸರಿನಲ್ಲಿ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದೆ.

  ಕರ್ನಾಟಕ ಅಮೆಚೂರ್ ಬಾಡಿಬಿಲ್ಡರ್ ಅಸೋಸಿಯೇಷನ್ ವತಿಯಿಂದ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಹೆಸರಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಇದಕ್ಕೆ "ಮಿಸ್ಟರ್ ದುನಿಯಾ ವಿಜಿ ಕ್ಲಾಸಿಕ್ 2013 ದೇಹದಾರ್ಢ್ಯ ಸ್ಪರ್ಧೆ" ಎಂದು ಹೆಸರಿಡಲಾಗಿದೆ.

  ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ರು.2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಮೌಳಿ ಹಾಗೂ ನಟ ದುನಿಯಾ ವಿಜಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

  ಈ ಸ್ಪರ್ಧೆಯಲ್ಲಿ ಒಟ್ಟು ನಾಲ್ಕು ವಿಭಾಗಗಳಿರುತ್ತವೆ. ಮೇ.10ರಂದು ಚೌಡಯ್ಯ ಹಾಲ್ ನಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪಟುಗಳು ರು.100 ಪ್ರವೇಶ ಶುಲ್ಕ ಭರಿಸಬೇಕು. ಸುಮಾರು 80 ರಿಂದ 100 ಸ್ಪರ್ಧಿಗಳು ಭಾಗವಹಿಸುವ ಸಾಧ್ಯತೆಗಳಿವೆ.

  ಟೈಟಲ್ ಗೆದ್ದವರಿಗೆ ರು.2 ಲಕ್ಷ ಬಹುಮಾನ ಹಾಗೂ ಫಲಕ ನೀಡಲಾಗುತ್ತದೆ. ಉತ್ತಮ ಪೋಸ್ ಮತ್ತು ದೇಹದಾರ್ಢ್ಯ ಪ್ರದರ್ಶಿಸಿದವರಿಗೆ ತಲಾ ರು.50 ಸಾವಿರ ಬಹುಮಾನ. ಇದರ ಜೊತೆಗೆ ಆರು ಪ್ರಶಸ್ತಿಗಳು ಇರುತ್ತವೆ.

  ಮೊದಲ ಪ್ರಶಸ್ತಿ ರು.10 ಸಾವಿರ, ದ್ವಿತೀಯ ಬಹುಮಾನ ರು.9 ಸಾವಿರ, ತೃತೀಯ, ನಾಲ್ಕು, ಐದು ಹಾಗೂ ಆರನೇ ಬಹುಮಾನಗಳು ಕ್ರಮವಾಗಿ 8 ಸಾವಿರ, 7 ಸಾವಿರ,6 ಸಾವಿರ ಹಾಗೂ 5 ಸಾವಿರ ನಗದು ಬಹುಮಾನ ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Karnataka Armature Bodybuilders Association and Kannada actor Duniya Vijay organised a body building competition on the 10th of May at the Chowdaiah Memorial Hall. Title winner will get Rs.2 lakh cash prize.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X