»   » ತಾಯಿ ಜೊತೆ ಕೇಕ್ ಸವಿದ ದುನಿಯಾ ವಿಜಯ್

ತಾಯಿ ಜೊತೆ ಕೇಕ್ ಸವಿದ ದುನಿಯಾ ವಿಜಯ್

Posted By:
Subscribe to Filmibeat Kannada

ನಟ ದುನಿಯಾ ವಿಜಯ್ ಅವರ ಈ ಸಲದ ಹುಟ್ಟುಹಬ್ಬ ಸಂಭ್ರಮ ತುಂಬ ಸರಳವಾಗಿ ನಡೆದು ಹೋಗಿದೆ. ಅಭಿಮಾನಿಗಳ ಹಾರ, ತುರಾಯಿ ಪಟಾಕಿ ಸದ್ದಿನೊಂದಿಗೆ ಢಾಂ ಢೂಂ ಎಂದು ನಡೆಯಬೇಕಾಗಿದ್ದ ಹುಟ್ಟುಹಬ್ಬ ಸದ್ದಿಲ್ಲದಂತೆ ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಭಾನುವಾರ (ಜ.20) ನಡೆಯಿತು.

ವಿಜಯ್ ಅವರು ತಮ್ಮ ತಾಯಿ ಹಾಗೂ ಸಹೋದರಿಯ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಸಲದ ಹುಟ್ಟುಹಬ್ಬಕ್ಕೆ ವಿಜಯ್ ಅವರ ಧರ್ಮಪತ್ನಿ ನಾಗರತ್ನ ಹಾಗೂ ಮೂವರು ಮಕ್ಕಳು ಗೈರುಹಾಜರಾಗಿದ್ದರು. ದುನಿಯಾ ವಿಜಿ ಹುಟ್ಟುಹಬ್ಬದ ಫೋಟೋಗಳು.


ಹೆಂಡತಿ ಮಕ್ಕಳು ಅನುಪಸ್ಥಿತಿಯಲ್ಲಿ ದುನಿಯಾ ವಿಜಯ್ ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ವಿವಾಹ ವಿಚ್ಛೇದನಕ್ಕೆ ವಿಜಿ ಅರ್ಜಿ ಸಲ್ಲಿಸುವ ಮೂಲಕ ಅವರ ಸಾಂಸಾರಿಕ ಇಕ್ಕಟ್ಟು ಬಿಕ್ಕಟ್ಟುಗಳು ಬಯಲಾಗಿದ್ದವು. ಈ ಎಲ್ಲಾ ಘಟನೆಗಳಿಗೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ಅಭಿಮಾನಿಗಳು ವಿಜಿಗೆ ಶುಭಕೋರಿದ್ದಾರೆ.

ಸದ್ಯಕ್ಕೆ ವಿಜಿ ಅವರು ರಜನಿಕಾಂತ ಹಾಗೂ ಜಯಮ್ಮನ ಮಗ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಭಾಗ 2' ಚಿತ್ರದ ಸಿದ್ಧತೆಗಳು ನಡೆಯುತ್ತಿವೆ. (ಒನ್ಇಂಡಿಯಾ ಕನ್ನಡ)

English summary
Actor Duniya Vijay celebrates his 39th birthday in his Kathriguppe residence on 20th January. Viji had cut the birthday cake in the presence of the kids of his sister. But his wife Nagarathna and his three children were absent for birthday party.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada