»   » ದುನಿಯಾ ವಿಜಯ್ ಕಟ್ಟಾ ಅಭಿಮಾನಿ ಆಂಟೋನಿ ರಾಜ್ ನಿಧನ

ದುನಿಯಾ ವಿಜಯ್ ಕಟ್ಟಾ ಅಭಿಮಾನಿ ಆಂಟೋನಿ ರಾಜ್ ನಿಧನ

Posted By:
Subscribe to Filmibeat Kannada

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಅಪ್ಪಟ ಅಭಿಮಾನಿ ಆಂಟೋನಿ ರಾಜ್ ಇಹಲೋಕ ತ್ಯಜಿಸಿದ್ದಾರೆ. ಕ್ಯಾನ್ಸರ್ ನಿಂದಾಗಿ ತಮ್ಮ ಬದುಕಿನ ಕೊನೆ ಕ್ಷಣಗಳನ್ನು ಎಣಿಸುತ್ತಿದ್ದ ಆಂಟೋನಿ ರಾಜ್ ಕೊನೆಯುಸಿರೆಳೆದಿದ್ದಾರೆ.

2012 ರಿಂದಲೂ ಆಂಟೋನಿ ರಾಜ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕೆಲ ತಿಂಗಳಿನಿಂದ ಆಂಟೋನಿ ರಾಜ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಯಲಹಂಕದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಆಂಟೋನಿ ಅವರನ್ನ ದಾಖಲಿಸಲಾಗಿತ್ತು.


duniya vijay

ಆಂಟೋನಿ ರಾಜ್, ನಟ ದುನಿಯಾ ವಿಜಯ್ ಅವರ ಕಟ್ಟಾ ಅಭಿಮಾನಿ. ದುನಿಯಾ ವಿಜಯ್ ಅವರ ಎಲ್ಲಾ ಚಿತ್ರಗಳನ್ನು ವೀಕ್ಷಿಸಿರುವ ಆಂಟೋನಿ, ಸಾಯುವ ಮುನ್ನ 'RX ಸೂರಿ' ಚಿತ್ರವನ್ನ ನೋಡುವ ಹಂಬಲ ವ್ಯಕ್ತಪಡಿಸಿದ್ದರು. [ಮಾನವೀಯತೆ ಮೆರೆದ ದುನಿಯಾ ವಿಜಯ್ 'RX ಸೂರಿ' ಚಿತ್ರತಂಡ]


antony raj

ಇದಕ್ಕೆ ಸ್ಪಂದಿಸಿದ ಚಿತ್ರತಂಡ ಆಂಟೋನಿಗಾಗಿ ವಿಶೇಷ ಪ್ರದರ್ಶನ ಹಮ್ಮಿಕೊಂಡಿತ್ತು. 'RX ಸೂರಿ' ಚಿತ್ರವನ್ನ ನೋಡಿ ಆಂಟೋನಿ, ದುನಿಯಾ ವಿಜಯ್ ರನ್ನ ಕೊಂಡಾಡಿದ್ದರು. [ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ]


ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಆಂಟೋನಿ ರಾಜ್ ಯೋಗಕ್ಷೇಮವನ್ನ ವಿಚಾರಿಸಿ ದುನಿಯಾ ವಿಜಯ್ ಮಾನವೀಯತೆ ಮೆರೆದಿದ್ದರು. ಇಂದು ಆಂಟೋನಿ ರಾಜ್ ನಿಧನದ ಸುದ್ದಿ ಕೇಳಿ ದುನಿಯಾ ವಿಜಯ್ ಭಾವುಕರಾಗಿದ್ದಾರೆ.

English summary
Kannada Actor Duniya Vijay's hardcore fan Antony Raj breathes his last. Antony Raj was suffering from Cancer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada