Just In
Don't Miss!
- Sports
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್
- News
ಸಿಯೆಟ್ ತ್ರೈಮಾಸಿಕ ವರದಿ: ಲಾಭದ ಪ್ರಮಾಣ 128 ಕೋಟಿ ರೂಪಾಯಿಗೆ ಏರಿಕೆ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಕ್ರಾಂತಿ ಹಬ್ಬಕ್ಕೆ ದುನಿಯಾ ವಿಜಯ್ ಫೇಸ್‌ಬುಕ್ ಲೈವ್, ಕಾರಣವೇನು?
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲವೂ ಮುಗಿಸಿರುವ ಸಲಗ ಚಿತ್ರಮಂದಿರದ ಲೆಕ್ಕಾಚಾರಕ್ಕಾಗಿ ಕಾಯುತ್ತಿದೆ.
100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ನೀಡಿದ್ಮೇಲೆ ಸಿನಿಮಾ ಬಿಡುಗಡೆ ಮಾಡೋಣ ಎಂದು ನಿರ್ಧರಿಸಿ ಕಾಯುತ್ತಿದೆ. ಎಲ್ಲವೂ ಸರಿ ಹೋಗುವವರೆಗೂ ಸಲಗ ಸಿನಿಮಾ ಬಿಡುಗಡೆ ಮಾಡಲ್ಲ ಎಂದು ಈ ಹಿಂದೆಯೇ ನಿರ್ಮಾಪಕ ಕೆಪಿ ಶ್ರೀಕಾಂತ್ ಸ್ಪಷ್ಟಪಡಿಸಿದ್ದರು.
ಚಿತ್ರರಂಗದಲ್ಲಿ ಇದೇ ಮೊದಲು: 'ಸಲಗ' ಶಾಸನ ರಚಿಸಿದ ವಿಜಿ ಅಭಿಮಾನಿ
ಇದೀಗ, ನಟ, ನಿರ್ದೇಶಕ ದುನಿಯಾ ವಿಜಯ್ ಫೇಸ್‌ಬುಕ್ ಲೈವ್ ಬರಲಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 14ರ ಸಂಜೆ 6 ಗಂಟೆಗೆ ತಮ್ಮದೇ ಅಧಿಕೃತ ಖಾತೆಯಲ್ಲಿ ಲೈವ್ ಬರಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.
ದುನಿಯಾ ವಿಜಯ್ ಫೇಸ್‌ಬುಕ್ ಲೈವ್ ಬರುತ್ತಿರುವುದರ ಹಿಂದಿನ ಅಸಲಿ ಕಾರಣ ಏನು ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ಬಹುಶಃ ಫೇಸ್‌ಬುಲ್ ಲೈವ್ ವೇಳೆ ಸಲಗ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ.
ಏಕಂದ್ರೆ, ಜನವರಿ 10 ರಂದು ಫೇಸ್‌ಬುಕ್ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಬರ್ಟ್ ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದರು. ಈಗ ದುನಿಯಾ ವಿಜಯ್ ಫೇಸ್‌ಬುಕ್ ಲೈವ್ ಬರ್ತಿದ್ದು, ಸಲಗ ರಿಲೀಸ್ ದಿನಾಂಕ ಹೇಳಬಹುದು ಎಂಬ ನಿರೀಕ್ಷೆ ಇದೆ.
ಸಲಗ ಬಿಡುಗಡೆ ದಿನಾಂಕ ಹೇಳದಿದ್ದರೂ ಟೈಟಲ್ ಹಾಡು, ಟ್ರೈಲರ್ ಅಥವಾ ಇನ್ನಿತರ ವಿಚಾರಗಳನ್ನು ಮಾತನಾಡಬಹುದು.
'ಸಲಗ' ಬಳಿಕ ಮತ್ತೊಂದು ಸಿನಿಮಾಗೆ ವಿಜಯ್ ನಿರ್ದೇಶನ: ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ವಿಜಿ
ಇನ್ನುಳಿದಂತೆ ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಈಗಾಗಲೇ ಸಲಗ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ.