For Quick Alerts
  ALLOW NOTIFICATIONS  
  For Daily Alerts

  ಶಿವರಾತ್ರಿಗೆ ದುನಿಯಾ ವಿಜಯ್ 'ಶಿವಾಜಿನಗರ'

  By Rajendra
  |

  ದುನಿಯಾ ವಿಜಯ್ ಅಭಿಮಾನಿಗಳು ಶಿವ ಶಿವ ಎಂದು ಕಾಯುತ್ತಿರುವ ಚಿತ್ರ ಇದೇ ಶಿವರಾತ್ರಿ (ಫೆ.27) ಹಬ್ಬಕ್ಕೆ ಅವರ ಮುಂದೆ ಪ್ರತ್ಯಕ್ಷವಾಗುತ್ತಿದೆ. ಅದ್ದೂರಿ ಚಿತ್ರಗಳಿಗೆ ಹೆಸರಾಗಿರುವ ರಾಮು ಫಿಲಂಸ್ ನಿರ್ಮಾಣದ ಶಿವಾಜಿನಗರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

  ಪಿ ಎನ್ ಸತ್ಯ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದು. ರಾಮು ಫಿಲ್ಮ್ಸ್ ಲಾಂಛನದಲ್ಲಿ ಅಂದು 'ಕಲಾಸಿಪಾಳ್ಯ' 2005 ರಲ್ಲಿ ನಿರ್ಮಾಣ ಮಾಡಿ ಇಂದು ಅದೇ ಲಾಂಛನದಲ್ಲಿ 'ಶಿವಾಜಿನಗರ' ಚಿತ್ರವನ್ನು ನಿರ್ಮಿಸಲಾಗಿದೆ. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ 'ಗೂಳಿ' ನಿರ್ದೇಶನ ಮಾಡಿದ್ದರು.

  ನಾಯಕ ನಟ ವಿಜಯ್ 'ಕಂಠೀರವ' ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಜಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ, ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

  ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಲಿವಾನ್ ಗಂಗಾಧರ, ಶ್ರೀನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವ್ ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Duniya Vijay's upcoming movie Shivajinagar schudle for release on Mahashivratri (February 27th). Parul Yadav plays lady lead in the film and is directed by P N Sathya. According to producer Ramu, "The movie will show how middle class families suffer."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X