For Quick Alerts
  ALLOW NOTIFICATIONS  
  For Daily Alerts

  ನಟ ದುನಿಯಾ ವಿಜಯ್ ಈಗ 'ಕೋಬ್ರಾ' ಅಷ್ಟೇ

  By Rajendra
  |

  ನಟ ದುನಿಯಾ ವಿಜಯ್ ಅವರನ್ನು ಎಲ್ಲರೂ ಇಷ್ಟು ದಿನ ಪ್ರೀತಿಯಿಂದ ಕರೆಯುತ್ತಿದ್ದದ್ದು 'ಬ್ಲ್ಯಾಕ್ ಕೋಬ್ರಾ' ಎಂದು. ಆದರೆ ಈಗ ಬರೀ 'ಕೋಬ್ರಾ' ಆಗಿ ಅಭಿಮಾನಿಗಳ ಮುಂದೆ ಬರಲು ಸಿದ್ಧವಾಗಿದ್ದಾರೆ. ಸಾಕಷ್ಟು ಹಿಂದೆಯೇ 'ಬ್ಲ್ಯಾಕ್ ಕೋಬ್ರಾ' ಎಂಬ ಚಿತ್ರದ ಬಗ್ಗೆ ಸುದ್ದಿ ಇತ್ತು.

  ಈಗವರು ಕೇವಲ 'ಕೋಬ್ರಾ' ಆಗಲು ಹೊರಟಿದ್ದಾರೆ. ಮಾಹಿನ್ ಎಂಬುವವರು ಕೆ.ಕೆ.ಮೂವೀಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಹಿಂದೆ ಇವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಂದ ಚಿತ್ರವನ್ನು ನಿರ್ಮಿಸಿದ್ದರು.

  'ನಂದ' ಚಿತ್ರದಲ್ಲಿ ಒಂದು ಪಾತ್ರವನ್ನೂ ಪೋಷಿಸಿದ್ದರು ಮಾಹಿನ್. ಅದಾದ ಬಳಿಕ ಮಾಹಿನ್ ಹೆಸರು ಕಾರ್ಪೊರೇಟರ್ ಒಬ್ಬರ ಕೊಲೆ ಕೇಸಿನಲ್ಲಿ ಕೇಳಿಬಂದಿತ್ತು. ಬಳಿಕ ಅವರ ಸುದ್ದಿ ಇಲ್ಲ. ಈಗ 'ಕೋಬ್ರಾ' ಚಿತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ಮರಳಿದ್ದಾರೆ. ಡಿಸೆಂಬರ್ 9ಕ್ಕೆ ಚಿತ್ರ ಸೆಟ್ಟೇರಲಿದೆ.

  ಕೋಬ್ರಾ ಚಿತ್ರದಲ್ಲಿ ಹಲವು ವಿಶೇಷಗಳಿವೆಯಂತೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಎಚ್ ವಾಸು. ಪಾತ್ರವರ್ಗದಲ್ಲಿ ಸೋನಾ ಛಾಬ್ರಿಯಾ, ಧರ್ಮ, ಶೋಭರಾಜ್ ಮುಂತಾದವರಿದ್ದಾರೆ.

  ಕೆ.ವಿ.ರಾಜು ಅವರ ಸಂಭಾಷಣೆ ಇನ್ನೊಂದು ಆಕರ್ಷಣೆ. ಜೈ ಆನಂದ್ ಅವರ ಛಾಯಾಗ್ರಹಣ ಇರುವ ಚಿತ್ರಕ್ಕೆ ಹೊಸಬರಾದ ಧರ್ಮ ಸಂಗೀತ ನಿರ್ದೇಶನ ಇದೆ. ಈ ಚಿತ್ರಕ್ಕೆ ಮೂರು ಮಂದಿ ಸಾಹಸ ನಿರ್ದೇಶಕರಿರುವುದು ಇನ್ನೊಂದು ಹೈಲೈಟ್. ಸದ್ಯಕ್ಕೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ರವಿವರ್ಮ ಜೊತೆ ಮಾಸ್ ಮಾದ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. (ಏಜೆನ್ಸೀಸ್)

  English summary
  Kannada actor Duniya Vijay's next titled as Cobra. The action packed movie being directed H Vasu, which will go on floors by 9th December.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X