»   » ಅಮರ ಯೋಧನ ಕುಟುಂಬಕ್ಕೆ ಸಹಾಯ ಮಾಡಿದ ದುನಿಯಾ ವಿಜಿ

ಅಮರ ಯೋಧನ ಕುಟುಂಬಕ್ಕೆ ಸಹಾಯ ಮಾಡಿದ ದುನಿಯಾ ವಿಜಿ

Posted By:
Subscribe to Filmibeat Kannada

ಸಿಯಾಚಿನ್ ನ ನಿರ್ಗಲ್ಲಿನಲ್ಲಿ ಸಿಲುಕಿ ಹುತಾತ್ಮರಾಗಿದ್ದ ಕರ್ನಾಟಕ ಮೂಲದ 'ಅಮರ' ಯೋಧ ಹನುಮಂತಪ್ಪ ಅವರ ಕುಟುಂಬಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಆರ್ಥಿಕ ಧನ ಸಹಾಯ ಮಾಡಲು ನಿರ್ಧರಿಸಿರುವ ವಿಚಾರವನ್ನು ನಾವು ನಿನಗೆ ಈ ಮೊದಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ.

Duniya Vijay offers Rs 25 Thousand for Hanumanthappa family

ಇದೀಗ ಹುತಾತ್ಮ ಯೋಧ ಹನುಮಂತಪ್ಪ ಮತ್ತವರ ಕುಟುಂಬವನ್ನು ಬೆಂಗಳೂರಿಗೆ ಕರೆಸಿಕೊಂಡ ನಿರ್ಮಾಪಕ ಕಮ್ ಅಕಾಡೆಮಿ ಅಧ್ಯಕ್ಷ ಸಾರಾ ಗೋವಿಂದು ಅವರು ಮಾತು ಕೊಟ್ಟಂತೆ ಒಂದು ಲಕ್ಷ ರೂಪಾಯಿ ಪರಿಹಾರ ಧನವನ್ನು ಕುಟುಂಬದವರ ಕೈಗೆ ಹಸ್ತಾಂತರಿಸಿದ್ದಾರೆ.[ಯೋಧ ಹನುಮಂತಪ್ಪ ಕುಟುಂಬಕ್ಕೆ KFCC ಯಿಂದ ಪರಿಹಾರ ಧನ]

Duniya Vijay offers Rs 25 Thousand for Hanumanthappa family

ನಿರ್ದೇಶಕರ ಸಂಘದ ವತಿಯಿಂದ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಉದ್ದೇಶದಿಂದ ಇತ್ತೀಚೆಗೆ ಕರೆದಿದ್ದ ಪತ್ರೀಕಾಗೋಷ್ಠಿಯಲ್ಲಿ ಅಮರ ಯೋಧ ಹನುಮಂತಪ್ಪ ಅವರ ತಾಯಿ ಬಸವ್ವ ಮತ್ತವರ ಮಡದಿ ಮಹಾದೇವಿ ಮತ್ತು ಪುಟ್ಟ ಮಗಳು ನೇತ್ರಾ ಅವರನ್ನು ಕರೆಸಿ ಅವರಿಗೆ ಧನಸಹಾಯ ಮಾಡಿದರು.[ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ]

Duniya Vijay offers Rs 25 Thousand for Hanumanthappa family

ಅಂದಹಾಗೆ ಸದಾ ಕಷ್ಟದಲ್ಲಿರುವವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾ ಬರುತ್ತಿರುವ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ದುನಿಯಾ ವಿಜಯ್ ಅವರು ಹುತಾತ್ಮ ಹನುಮಂತಪ್ಪ ಅವರ ಕುಟುಂಬಕ್ಕೂ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.[ದುನಿಯಾ ವಿಜಯ್ ಕಟ್ಟಾ ಅಭಿಮಾನಿ ಆಂಟೋನಿ ರಾಜ್ ನಿಧನ]

ಪತ್ರೀಕಾಗೋಷ್ಠಿಯಲ್ಲಿ ದುನಿಯಾ ವಿಜಯ್ ಅವರು ಕೂಡ ಭಾಗವಹಿಸಿದ್ದು, ಇದೇ ಸಂದರ್ಭದಲ್ಲಿ ಯೋಧ ಹನುಮಂತಪ್ಪ ಅವರ ಕುಟುಂಬಕ್ಕೆ 25 ಸಾವಿರ ರೂಪಾಯಿ ಚೆಕ್ ವಿತರಿಸಿದ್ದಾರೆ.[ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ]

Duniya Vijay offers Rs 25 Thousand for Hanumanthappa family

ಇದು ನಟ ದುನಿಯಾ ವಿಜಯ್ ಅವರ ಸಹಾಯ ಮಾಡುವ ಮನಸ್ಥಿತಿಯನ್ನು ತೋರಿಸುತ್ತಿದ್ದು, ಒಟ್ನಲ್ಲಿ ತಮ್ಮ ಸರಳತೆಯಿಂದ ಸೂಪರ್ ಸ್ಟಾರ್ ವಿಜಿ ಅವರು ಸಾವಿರಾರು ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

English summary
Kannada Actor Duniya Vijay handed over Rs 25 Thousand for Lance Naik Hanumanthappa Koppad family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada