»   » ದುನಿಯಾ ವಿಜಿ 'ಅರ್ಥಪೂರ್ಣ'ಹುಟ್ಟುಹಬ್ಬ ಆಚರಣೆ

ದುನಿಯಾ ವಿಜಿ 'ಅರ್ಥಪೂರ್ಣ'ಹುಟ್ಟುಹಬ್ಬ ಆಚರಣೆ

Posted By:
Subscribe to Filmibeat Kannada

ದುನಿಯಾ ವಿಜಯ್ ಅವರು ಸ್ವಂತ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೆಳೆದು ಸ್ಟಾರ್ ಎನಿಸಿಕೊಂಡ ಅಪ್ಪಟ ಪಕ್ಕದ ಮನೆ ಹುಡುಗ. ಸೋಮವಾರ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ 39ನೇ ಹುಟ್ಟುಹಬ್ಬವನ್ನು ವಿಜಯ್ ಅವರು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.

ನಗರದ ಗವಿಪುರದ ಗವಿ ಗಂಗಾಧರೇಶ್ವರ ದೇಗುಲದಲ್ಲಿ ದುನಿಯಾ ವಿಜಯ್ ಅವರ ಜಾಕ್ಸನ್ ಚಿತ್ರದ ಮುಹೂರ್ತ ಕೂಡಾ ನೆರವೇರಿದ್ದು ವಿಶೇಷ. ಜಾಕ್ಸನ್ ಚಿತ್ರದಲ್ಲಿ ವಿಜಯ್ ಗೆ ಪಾವನಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಹೂರ್ತದ ನಂತರ ಬಸವನಗುಡಿಯ ಕೊಹಿನೂರ್ ಗ್ರೌಂಡ್ ನಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಹುಟ್ಟು ಹಬ್ಬ ಸಮಾರಂಭದಲ್ಲಿ ಪಾಲ್ಗೊಂಡರು.

Duniya Vijay's Birthday Special Watch Shivajinagara Trailer

ವಿವಿಧ ರೀತಿಯ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ವೇಳೆ ರಕ್ತದಾನ, ನೇತ್ರದಾನ, ಹೃದಯ ತಪಾಸಣೆ ಸೇರಿದಂತೆ ಅನೇಕ ಚಿಕಿತ್ಸಾ ಶಿಬಿರಗಳನ್ನು ಇದೇ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಚಿತ್ರರಂಗಕ್ಕೆ ಖಳ ನಟನಾಗಿ ಕಾಲಿಟ್ಟ ವಿಜಯ್ ಅವರು ತಮ್ಮ ಸಾಹಸ ಕಲೆ ಮೂಲಕ ಗುರುತಿಸಿಕೊಂಡವರು. ಸುಮಾರು ಏಳು ವರ್ಷಗಳ ಕೆಳಗೆ ಸೂರಿ ನಿರ್ದೇಶನದ 'ದುನಿಯಾ' ಚಿತ್ರದ ಮೂಲಕ ನಾಯಕನ ಪಟ್ಟಕ್ಕೇರಿದ ವಿಜಯ್ ಅವರು ಇಂದು ತಮ್ಮದೇ ಆದ ಹೊಸ ಶೈಲಿ ನಟನೆ ಮೂಲಕ ಗಮನ ಸೆಳೆದಿದ್ದಾರೆ.

ಜಂಗ್ಲಿ, ಜಾನಿ ಮೇರಾ ನಾಮ್, ಚಂಡ, ಭೀಮಾತೀರದಲ್ಲಿ ಮುಂತಾದ ಚಿತ್ರಗಳು ಸೇರಿದಂತೆ 30 ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವಿಜಯ್ ಜನಾನುರಾಗಿ. ಸದ್ಯ ಅವರ ಶಿವಾಜಿನಗರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಶಿವಾಜಿನಗರದಲ್ಲಿ ಬದುಕೋಕೆ ಧಮ್ ಇರಬೇಕು ಎಂಬ ಪಂಚಿಂಗ್ ಡೈಲಾಗ್ ಹೊಂದಿರುವ ಶಿವಾಜಿನಗರ ಚಿತ್ರದ ಟ್ರೇಲರ್ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುವ ಸಾಧ್ಯತೆಯಿದೆ. ಶಿವಾಜಿನಗರದಲ್ಲಿ ಬಚ್ಚನ್ ಖ್ಯಾತಿಯ ಪರೂಲ್ ನಾಯಕಿಯಾಗಿದ್ದಾರೆ. ಶಿವಾಜಿನಗರದ ಟ್ರೇಲರ್ ಹೀಗಿದೆ ನೋಡಿ...
<center><iframe width="100%" height="480" src="//www.youtube.com/embed/C9Td1VqSNi4" frameborder="0" allowfullscreen></iframe></center>

English summary
Duniya Vijay's Birthday Special Watch Shivajinagara Trailer: The much awaited movie Shivajinagara starring Black Cobra Duniya Vijay is finally making its way to hit the silver screen. The makers of the movie, has given a biggest feast for the actor's fans by releasing the first official trailer of the film.&#13;
Please Wait while comments are loading...