»   » ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ

ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ

Posted By:
Subscribe to Filmibeat Kannada

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅಭಿನಯದ ನಿಜ ಜೀವನ ಕಥೆಯಾಧರಿತ ವಿಭಿನ್ನ ಸಿನಿಮಾ 'ಮಾಸ್ತಿ ಗುಡಿಗೆ' ನಿನ್ನೆ (ಜನವರಿ 29) ಅದ್ಧೂರಿಯಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮೂಹೂರ್ತ ನೆರವೇರಿದೆ. ಬಹಳ ವಿಭಿನ್ನವಾಗಿ ಗಿಡ ನೆಡುವ ಮೂಲಕ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು.

1990 ರಲ್ಲಿ ನಡೆದ ನೈಜ ಕಥೆಯಾಧರಿತ ಸಿನಿಮಾ 'ಮಾಸ್ತಿ ಗುಡಿ'. ಆ ಕಾಲದಲ್ಲಿ ಬಿಳಿಗಿರಿ ರಂಗನತಿಟ್ಟು ಕಾಡಿನಲ್ಲಿ ಹುಲಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದವಂತೆ. ಅದರ ಹಿಂದಿರಬಹುದಾದ ರಹಸ್ಯ ಏನು? ಅಲ್ಲಿ ಏನು ನಡೆದಿರಬಹುದು ಎಂಬದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.[ಬರ್ತ್ ಡೇ ಬಾಯ್ ವಿಜಿಗೆ 'ಮಾಸ್ತಿ ಗುಡಿ' ಟೀಸರ್ ಗಿಫ್ಟ್]

ನಟ ದುನಿಯಾ ವಿಜಯ್ ಅವರು 'ಮಾಸ್ತಿ ಗುಡಿ' ಸಿನಿಮಾದಲ್ಲಿ ಕಾಡು ಮತ್ತು ಕಾಡಿನ ಪ್ರಾಣಿಗಳನ್ನು ಉಳಿಸುವ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ನಿರ್ದೇಶನವನ್ನು ನಟ ಕಮ್ ನಿರ್ದೇಶಕ ನಾಗಶೇಖರ್ ಅವರು ಮಾಡುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ.[75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು]

ಜನವರಿ 29, ಶುಕ್ರವಾರದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರದ ಮೂಹೂರ್ತವನ್ನು ಚಿತ್ರ ತಂಡದವರ ಅಮ್ಮಂದಿರು ಅದ್ಧೂರಿಯಾಗಿ ನೆರವೇರಿಸಿದರು. ಕಾರ್ಯಕ್ರಮಕ್ಕೆ ಯಾರೆಲ್ಲಾ ಆಗಮಿಸಿದ್ದರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಗಿಡ ನೆಡುವ ಮೂಲಕ ಮುಹೂರ್ತ

ಕಾಡನ್ನು ಉಳಿಸಿ ಬೆಳೆಸುವ ವಿಷಯವನ್ನು ಇಟ್ಟುಕೊಂಡು ಮಾಡಿರುವ 'ಮಾಸ್ತಿ ಗುಡಿ' ಚಿತ್ರಕ್ಕೆ ಗಿಡ ನೆಡುವ ಮೂಲಕ ಡಿಫರೆಂಟ್ ಆಗಿ ಮುಹೂರ್ತ ನೆರವೇರಿಸಲಾಯಿತು. ಚಿತ್ರದಲ್ಲಿ ನಟ ದುನಿಯಾ ವಿಜಯ್, ಲವ್ಲಿ ಸ್ಟಾರ್ ಪ್ರೇಮ್ ಮತ್ತು 'ಬಾಕ್ಸರ್' ನಟ ಧನಂಜಯ್.['ಮಾಸ್ತಿ ಗುಡಿ' ದುನಿಯಾ ವಿಜಿ ರಿಯಲ್ ಕಹಾನಿನಾ?]

ನಿರ್ದೇಶಕ ನಾಗಶೇಖರ್

ರಿಯಲ್ ಸ್ಟೋರಿ 'ಮಾಸ್ತಿ ಗುಡಿ' ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನದ ಜವಾಬ್ದಾರಿಯನ್ನು ನಟ ಕಮ್ ನಿರ್ದೇಶಕ ನಾಗಶೇಖರ್ ಅವರು ಹೊತ್ತುಕೊಂಡಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ಚಿತ್ರದ ಬಗ್ಗೆ ಕೆಲವು ವಿಚಾರಗಳನ್ನು ಮಾಧ್ಯಮದ ಜೊತೆ ಹಂಚಿಕೊಂಡರು.

ಅಮ್ಮಂದಿರಿಂದ ಚಿತ್ರಕ್ಕೆ ಫಸ್ಟ್ ಕ್ಲಾಪ್

ಅಮ್ಮಂದಿರನ್ನು ತುಂಬಾ ಗೌರವಿಸುವ ನಟ ದುನಿಯಾ ವಿಜಯ್ ಅವರು ತಮ್ಮ ಚಿತ್ರ 'ಮಾಸ್ತಿ ಗುಡಿ'ಯ ಮುಹೂರ್ತವನ್ನು ಕೂಡ ನಿರ್ದೇಶಕರು, ನಿರ್ಮಾಪಕರು ಮತ್ತು ಇತರೆ ಸಿನಿಮಾ ತಂತ್ರಜ್ಞರ ಅಮ್ಮಂದಿರ ಕೈಯಲ್ಲಿ ನೆರವೇರಿಸಿದರು.

ಬ್ಲ್ಯಾಕ್ ಕೋಬ್ರಾ

ಕರಿ ಚಿರತೆ ದುನಿಯಾ ವಿಜಯ್ ಅವರು ಈ ಚಿತ್ರದಲ್ಲಿ ಕಾಡನ್ನು ಉಳಿಸುವ ಪಣ ತೊಟ್ಟಿದ್ದು, ನಾಲ್ಕು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಅದಕ್ಕಾಗಿ ವಿಜಿ ಅವರು ತಮ್ಮ ಗೆಟಪ್ ಅನ್ನು ಕೂಡ ವಿಭಿನ್ನವಾಗಿ ಮಾಡಿಕೊಂಡಿದ್ದಾರೆ.

ಪ್ರೇಮ್-ವಿಜಿ-ಅರುಣ್

ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ 'ನೆನಪಿರಲಿ' ಖ್ಯಾತಿಯ ನಟ ಲವ್ಲಿ ಸ್ಟಾರ್ ಪ್ರೇಮ್, ನಟ ಅರುಣ್ ಸಾಗರ್ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ನವರಸ ನಾಯಕ ಜಗ್ಗೇಶ್

ಮುಹೂರ್ತ ಸಮಾರಂಭಕ್ಕೆ ನವರಸ ನಾಯಕ ನಟ ಜಗ್ಗೇಶ್, ತಬಲಾ ನಾಣಿ, ರವಿಶಂಕರ್, ಪ್ರೇಮ್, ಅರುಣ್ ಸಾಗರ್ ಮುಂತಾದವರು ಆಗಮಿಸಿ ಶುಭ ಹಾರೈಸಿದರು.

ದಿನಕರ್ ತೂಗುದೀಪ್

ಕಾರ್ಯಕ್ರಮಕ್ಕೆ ನಿರ್ಮಾಪಕ ಕಮ್ ನಿರ್ದೇಶಕ ದಿನಕರ್ ತೂಗುದೀಪ್ ಅವರು ಕೂಡ ಆಗಮಿಸಿದ್ದರು. ಚಿತ್ರಕ್ಕೆ ಸಾಧು ಕೋಕಿಲ ಅವರ ಸಂಗೀತವಿದೆ.

ಗಿಡ ನೆಟ್ಟ ಚಿತ್ರತಂಡ

ವಿಭಿನ್ನ ಸಿನಿಮಾ ಆಗಿರುವುದರಿಂದ ಕೊಂಚ ವಿಭಿನ್ನವಾಗಿಯೇ ಚಿತ್ರದ ಮುಹೂರ್ತ ಮಾಡಲಾಯಿತು. ಚಿತ್ರದಲ್ಲಿ ಗಿಡ ನೆಟ್ಟು ಸಂಭ್ರಮಿಸಿದ ನಟ ದುನಿಯಾ ವಿಜಿ, ನಿರ್ದೇಶಕ ನಾಗಶೇಖರ್, ನಿರ್ಮಾಪಕರು. ಈ ಸಂದರ್ಭದಲ್ಲಿ ದುನಿಯಾ ವಿಜಿ ಅವರ ಪತ್ನಿ ಕೂಡ ಹಾಜರಿದ್ದರು.

English summary
Kannada Actor Duniya Vijay's new film which is being directed by Nagashekhar is all set to be launched on the 29th of January at the Kanteerava Studios in Bangalore. 'Mastigudi' is based on a real incident which occurred in Biligiri Rangana Thittu in the 90s. Based on the incident, Nagashekhar has written the story and screenplay of the film. Another highlight of the film is Vijay will be seen in four different getups.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada