»   » ನಾನೇ ಕಾಗೆ ನಾನೇ ಬಂಗಾರ ಅಂದೋರು ಯಾರು?

ನಾನೇ ಕಾಗೆ ನಾನೇ ಬಂಗಾರ ಅಂದೋರು ಯಾರು?

Posted By:
Subscribe to Filmibeat Kannada

ದುನಿಯಾ ವಿಜಯ್ ಅವರ ಮನಸ್ಸು ದುನಿಯಾ ಸೂರಿಯ ಲೇಟೆಸ್ಟ್ ಸಿನೆಮಾ 'ಕೆಂಡಸಂಪಿಗೆ' ನೋಡಲು ಯಾಕೆ ಒಪ್ಪುತ್ತಿಲ್ಲ ಎಂಬುದನ್ನು ತಿಳಿಯಲು ನೀವು ಈ ಡೈಲಾಗ್ ಓದಲೇಬೇಕು. (ಕೇಳಲೇಬೇಕು)

ಸೂರಿ : ನಮಸ್ಕಾರ ವಿಜಿ ಅವರಿಗೆ

ವಿಜಿ : ನಮಸ್ಕಾರ ಸೂರಿ ಅವರಿಗೆ

ಸೂರಿ : ನೀವ್ಯಾಕೆ ನನ್ನ 'ಕೆಂಡಸಂಪಿಗೆ' ಸಿನಿಮಾ ನೋಡಲ್ಲ.

ವಿಜಿ : ಯಾಕಂದ್ರೆ ನನ್ಗೆ ಹೊಟ್ಟೆ ಕಿಚ್ಚು.

ಸೂರಿ : ಏನಕ್ಕೆ ಹೊಟ್ಟೆ ಕಿಚ್ಚು?

ವಿಜಿ : ತುಂಬಾ ಒಳ್ಳೆ ಸಿನಿಮಾ ಮಾಡಿದ್ದೀರಾ, ನನಗೆ ಯಾಕೆ ಮಾಡಿಲ್ಲ, ನನಗೆ ನಿಮ್ಮ ಜೊತೆ ಯಾವಾಗ್ಲೂ ಸಿನಿಮಾ ಮಾಡ್ಬೇಕು ಅನ್ನೋ ಆಸೆ, ಹಾಗಾಗಿ ನಾನು ಆ ಸಿನಿಮಾನ ನೋಡಲ್ಲ.

ಸೂರಿ : ನೀವು 'ಕೆಂಡಸಂಪಿಗೆ' ನೋಡಬೇಕಿತ್ತು ತಾನೇ?

ವಿಜಿ : ನನ್ಗೆ ಪರ್ಸನಲಿ ಒಂದು ನೋವಿದೆ, ಅಂತಹ, ಅಷ್ಟು ಒಳ್ಳೆ ಸಬ್ಜೆಕ್ಟ್ ಇಟ್ಟುಕೊಂಡು ನಮ್ಮನ್ನು ಹಾಕಿಕೊಂಡು ಯಾಕೆ ಮೂವಿ ಮಾಡಿಲ್ಲ ಅಂತ. [ವರ್ಷ ಓಡಿದ್ರೂ ಲೈಫಲ್ಲಿ ಕೆಂಡಸಂಪಿಗೆ ನೋಡಲ್ಲ ಅಂದೋರು ಯಾರು?]

Duniya Vijay says 'Naane Kage Nane Bangara' watch this video

ಸೂರಿ : ಅಲ್ಲ ನಾನು ಹೊಸ ಹುಡುಗನನ್ನು ಇಟ್ಟುಕೊಂಡು ಮಾಡಿದೆಯಪ್ಪಾ ಅದನ್ನು ನೀನು ನೋಡ್ಕೊಂಡು ಹರಸಬೇಕು ತಾನೇ.

ವಿಜಿ : ನಾವು ಈಗಾಗ್ಲೆ ಆಡಿಯೋ ಕಾರ್ಯಕ್ರಮಕ್ಕೆ ಬಂದು ಒಳ್ಳೆದಾಗ್ಲಿ ಅಂತ ಶುಭ ಹಾರೈಸಿದ್ದೀವಿ, ನಾನು ಮೊದಲನೇ ಅಭಿಮಾನಿ ಅಂತ ಹೇಳಿದ್ದೀನಿ, ಈ ಪ್ರಪಂಚ ಇರೋವರೆಗೂ ನಾನೇ ಸೂರಿಗೆ ಮೊದಲನೇ ಅಭಿಮಾನಿ. ಆದ್ರಿಂದ ಸೂರಿ ಯಾರಿಗೇ ಮೂವಿ ಮಾಡಿದ್ರೂ ಒಂಥರಾ ಹೊಟ್ಟೆ ಕಿಚ್ಚು ನನ್ಗೆ ಭಗ ಭಗ ಅಂತ ಉರೀತಾ ಇರುತ್ತೇ. ನಾನು ಸೂರಿ ನನ್ಗೆ ಸಿನಿಮಾ ಮಾಡ್ಬೇಕು, ಮಾಡ್ಬೇಕು ಅನ್ನೋನು, ಸೂರಿ 'ಜಂಗ್ಲಿ' ಆದ್ಮೇಲೆ ಮಾಡೇ ಇಲ್ಲ ಅದಿಕ್ಕೆ ನನ್ಗೂ ಹೊಟ್ಟೆಕಿಚ್ಚು ಬಂದು ಸಿನಿಮಾ ನೋಡಲ್ಲ.

ಸೂರಿ : ನೀನು ಯಾವಾಗ ಡೇಟ್ ಕೊಟ್ಟೆ ನನಗೆ?

ವಿಜಿ : ನಾನು ಯಾವಾಗ್ಲೂ ರೆಡಿ ಇದ್ದೀನಿ.

ಸೂರಿ : ಯಾವಾಗಿಂದ ರೆಡಿ ಇದ್ದೀಯಾ ನೀನು?

ವಿಜಿ : ಇಡೀ ಇಂಡಸ್ಟ್ರಿನೇ ಎದುರು ಹಾಕಿಕೊಂಡು ಸೂರಿಗೋಸ್ಕರ ಡೇಟ್ ಕೋಡೋಕೆ ರೆಡಿ ಇದ್ದೀನಿ ನಾನು.

ಸೂರಿ : ಸರಿ ನನ್ನದು ನಿನ್ನದು ಕಾಂಬಿನೇಷನ್ ನಲ್ಲಿ ಯಾವಾಗ ಬರುತ್ತೇ?

ವಿಜಿ : ಅದನ್ನ ನೀನೇ ಹೇಳ್ಬೇಕು ಇವಾಗ.

ಸೂರಿ : ಯಾವಾಗ?

ವಿಜಿ : ನೀನು ಯಾವಾಗ ಹೇಳ್ತಿಯೋ ಆವಾಗ ನಾನ್ ರೆಡಿ.

ಸೂರಿ : ಸರಿ 'ಕೆಂಡಸಂಪಿಗೆ' ಯಾವಾಗ ನೋಡ್ತೀಯಾ?

ವಿಜಿ : 'ಕೆಂಡಸಂಪಿಗೆ' ನಾನು ನೋಡಲ್ಲ, ನೋಡಲ್ಲ, ನೋಡಲ್ಲ.

ಸೂರಿ : ಈ ಕೆಂಡಸಂಪಿಗೆನಾ ಊರೆಲ್ಲಾ ಹೊಗಳ್ತಾ ಇದೆ ನೀನು ಹೋಗಿ ನೋಡು.

ವಿಜಿ : ನಾನು ಹೊಗಳ್ತೀನಿ, ಒಳ್ಳೆದಾಗ್ಲಿ, ಸೂರಿ ಚೆನ್ನಾಗಾಗ್ಲಿ, ಅಂತ ಆದ್ರೆ ಅಂತ ಸಬ್ಜೆಕ್ಟ್ ಗಳನ್ನ ನನಗೆ ಮಾಡಿಲ್ಲ ಅನ್ನೋ ಹೊಟ್ಟೆ ಕಿಚ್ಚಿದೆ ನಾನು ನೋಡಲ್ಲ.

ಸೂರಿ : ನಿನ್ ಫ್ರೆಂಡ್ಸ್ ಎಲ್ಲಾ ನೋಡಿದ್ದಾರೆ ತಾನೇ?

ವಿಜಿ : ಇದನ್ನ ಯೂಟ್ಯೂಬ್ ಗೆ ಎಲ್ಲಾ ಕಡೆ ಹಾಕಿ ಟಿವಿಗೂ ಹಾಕಿ ಧಾರಾಳವಾಗಿ, ನಾನು ಆಕ್ಚುವಲಿ ಸೂರಿಗೆ ದೊಡ್ಡ ಅಭಿಮಾನಿ, ಸೂರಿ ನನಗೆ ಸಿನಿಮಾ ಮಾಡಿಲ್ಲ ಅಂದ್ಮೇಲೆ ನಾನ್ಯಾಕೆ ಸಿನಿಮಾ ನೋಡ್ಬೇಕು, ನನಗೆ ಇಷ್ಟ ಆಗಲ್ಲ.

Duniya Vijay says 'Naane Kage Nane Bangara' watch this video

ಸೂರಿ : ಎಲ್ಲಾ ಸಿನಿಮಾ ನಿನ್ಗೆ ಮಾಡ್ಬೇಕಾ ನಾನು, 'ದುನಿಯಾ' ಮಾಡಿದೆ, 'ಜಂಗ್ಲಿ' ಮಾಡಿದೆ.

ವಿಜಿ : ಹೌದು ಇನ್ನೊಂದು ಮಾಡು ಈಗ.

ಸೂರಿ : ಮಾಡ್ತೀನಿ ನನ್ಗೂ ಒಂಚೂರು ಟೈಮ್ ಕೊಡು.

ವಿಜಿ : ಬೇಕಾಗಿಲ್ಲ, ಬೇಕಾಗಿಲ್ಲ ನೆಕ್ಸ್ಟ್ 'ಕಾಗೆ ಬಂಗಾರ' ನನಗೆ ಮಾಡ್ಬೇಕು ನಾನೇ ಫಸ್ಟ್ ಕಾಗೆ ನಾನೇ ಬಂಗಾರ. ['ಕೆಂಡಸಂಪಿಗೆ' ಆಯ್ತು, ಮುಂದೆ 'ಕಾಗೆ ಬಂಗಾರ'.!] ನನಗೆ ಮಾಡದೇ ಅದು ಹೇಂಗೆ ಬೇರೆಯವ್ರಿಗೆ ಮಾಡ್ತೀಯಾ?.

ಸೂರಿ : ಈಗ 'ಕಾಗೆ ಬಂಗಾರ' ನಿನ್ಗೆ ಮಾಡ್ಬೇಕಾ?

ವಿಜಿ : ಹೌದು ನನಗೆ ಮಾಡಬೇಕು.

ಸೂರಿ : ಸರಿ, 'ಕೆಂಡಸಂಪಿಗೆ' ಬಗ್ಗೆ ಏನಾದ್ರೂ ಹೇಳು.['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

ವಿಜಿ : ಕೆಂಡಸಂಪಿಗೆ ಬಗ್ಗೆ, ನಿಜ ಹೇಳ್ಬೇಕು ಅಂದ್ರೆ, ನೀನು ತಪ್ಪು ತಿಳ್ಕೊಳ್ಳಲ್ಲಾಂದ್ರೆ, ನೀನೊಬ್ಬ ಮಾಂತ್ರಿಕ, ನಿನಗೊಂದು ಅದ್ಭುತವಾದ ಶಕ್ತಿ ಇದೆ. ಏನಪ್ಪಾ ಅಂದ್ರೆ ಒಂದು ಸತ್ಯನಾ ಹೊರಗಡೆ ಹಾಕೋ ತಾಕತ್ತು ನಿನಗೆ ಇದೆ.

ಆ ಶಕ್ತಿ ಎಲ್ಲರಿಗೂ ಬರಲ್ಲ, ಹಾಗಾಗಿ ನಿನ್ನ ಪ್ರತಿ ಸಿನಿಮಾ ನೋಡಿ ನಾನು ಕಥೆ ಕದ್ದು ಮಾಡ್ತೀನಿ, ಅಂತಹ ದೊಡ್ಡ ಮಗ ನಾನು ಹಾಗಾಗಿ ನನಗೆ 'ಕೆಂಡಸಂಪಿಗೆ' ಮೇಲೆ ತುಂಬಾ ದೊಡ್ಡ ಪ್ರೀತಿ, ಮರ್ಯಾದೆ, ಒಲವು ಆಮೇಲೆ ಸೂರಿ ಯಾವುದೇ ಸ್ಟೆಪ್ ತಗೊಂಡ್ರುನೂ ತುಂಬಾ ವಿಚಾರ ಇಟ್ಕೊಂಡು ತಗೋತಾರೆ ಸೋ ಸೂರಿ ಅಂದ್ರೆ ನಮಗೆ ಇಷ್ಟ.

ದುನಿಯಾ ವಿಜಿ ಅವರಿಗೆ ನಿರ್ದೇಶಕ ದುನಿಯಾ ಸೂರಿ ಮೇಲಿರುವ ಪ್ರೀತಿ, ಅಭಿಮಾನವನ್ನು ಅವರ ಬಾಯಿಂದಲೇ ಕೇಳಲು ಈ ವಿಡಿಯೋ ನೋಡಿ..

Duniya Vijay says 'Naane Kage Nane Bangara' watch this video

ಹೀಗೆ ನಿರ್ದೇಶಕ ಸೂರಿ ಅವರ ಮೇಲೆ ಬೆಟ್ಟದಷ್ಟು ಗೌರವ ಇಟ್ಟುಕೊಂಡಿರುವ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಅವರು 'ಕೆಂಡಸಂಪಿಗೆ' ಚಿತ್ರವನ್ನು ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡ ಹೊಸಬರ ನಟನೆಯನ್ನು ಈ ರೀತಿ ಹೊಗಳಿದ್ದಾರೆ.

English summary
Why Duniya Vijay does not like to watch latest Kannada movie Kendasampige directed by Duniya Soori? Why he says he does not like to show the blockbuster movie. To know watch this video. And He says that 'Naane Kage Naane Bangara'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada