»   » ದುನಿಯಾ ವಿಜಯ್ 'ಸಿಂಹಾದ್ರಿ' ಎಕ್ಸ್ ಕ್ಲೂಸೀವ್

ದುನಿಯಾ ವಿಜಯ್ 'ಸಿಂಹಾದ್ರಿ' ಎಕ್ಸ್ ಕ್ಲೂಸೀವ್

By: ಜೀವನರಸಿಕ
Subscribe to Filmibeat Kannada

ದುನಿಯಾ ವಿಜಯ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ' ಸಿಂಹಾದ್ರಿ'. ಸಿನಿಮಾದ ಶೂಟಿಂಗ್ ಈಗ ಅಂತಿಮ ಹಂತಕ್ಕೆ ಬಂದಿದೆ. ಸೌಂದರ್ಯಾ ಜಯಮಾಲಾ-ದುನಿಯಾ ವಿಜಿಗೆ ಜೋಡಿಯಾಗಿರೋ ಸಿನಿಮಾ ಪಕ್ಕಾ ಫ್ಯಾಮಿಲಿ ಓರಿಯಂಟೆಡ್ ಸಿನಿಮಾ ಆಗಿ ಮೂಡಿ ಬರ್ತಿದೆ. ಸಿನಿಮಾದಲ್ಲಿ ವಿಜಿಯ ಖದರ್ರೇ ಹೈಲೈಟ್.

ಕೇವಲ ವಿಜಿಯ ಫೈಟ್ ಪವರ್ ಹೈಲೈಟ್ ಅನ್ಕೋಬೇಡಿ. ಇಲ್ಲಿ ಒಂದು ಕುಟುಂಬದ ಮನೆತನದ ಹೆಮ್ಮೆ, ಗೌರವಗಳ ಸಂಕೇತದ ಕಥೆ ಕೂಡ ಇರಲಿದೆ. ವಿಜಿ ಬಿಳಿಯ ಬಟ್ಟೆಯಲ್ಲಿ ಕಾಣಿಸಿಕೊಂಡಿರೋದು ನೋಡಿದ್ರೇ ಗೊತ್ತಾಗುತ್ತೆ. [ಶಿವಾಜಿನಗರ ಚಿತ್ರವಿಮರ್ಶೆ]

ಮನೆಯ ಊರಿನ ಯಜಮಾನನ ಪಾತ್ರದಲ್ಲಿ ವಿಜಿ ಮಿಂಚೋದು ಕನ್ಫರ್ಮ್. ಆದ್ರೆ ಚಿತ್ರದಲ್ಲಿ ಅಣ್ಣ ತಂಗಿಯ ಸೆಂಟಿಮೆಂಟ್ ಕೂಡ ಮೋಡಿ ಮಾಡಲಿದೆ. ಇಲ್ಲಿ ಸೆಂಟಿಮೆಂಟ್ ಗೆ ತಂಗಿಯಾಗಿ ವಿಜಿಯ ಜೊತೆ ಕಾಣಿಸಿಕೊಂಡಿರೋದು ಐಶ್ವರ್ಯಾ ಅನ್ನೋ ಕನ್ನಡದ ಚೆಲುವೆ. ಈ ಸಿನಿಮಾದ ಕೆಲವು ಸ್ಪೆಷಲ್ ಫೋಟೋ ಝಲಕ್ ಗಳನ್ನ ತೋರಿಸ್ತಿದ್ದೀವಿ ನೋಡ್ತಾ ಹೋಗಿ.

ಸೆಂಟಿಮೆಂಟ್ ಗೆ ಹೇಳಿ ಮಾಡಿಸಿದ ವಿಜಯ್

ದುನಿಯಾ ವಿಜಯ್ ಮಾಸ್ ಸಿನಿಮಾಗಳ ಆಕ್ಷನ್ ಹೀರೋ ಆಗಿದ್ರೂ ಮನಗೆದ್ದಿದ್ದು ಸೆಂಟಿಮೆಂಟ್ ಪಾತ್ರಗಳ ಮೂಲಕ. 'ಸಿಂಹಾದ್ರಿ' ಸಿನಿಮಾದಲ್ಲಿ ಕೂಡ ವಿಜಿಯ ಸೆಂಟಿಮೆಂಟ್ ಹೈಲೈಟ್.

ಸಪ್ನೋಂಕಿ ರಾಣಿ ಸಿನಿಮಾದ ಚೆಲುವೆ ಐಶ್ವರ್ಯಾ

ಇಲ್ಲಿ ವಿಜಿಗೆ ತಂಗಿಯಾಗಿ ಕಾಣಿಸಿಕೊಂಡಿರೋದು 'ಸಪ್ನೋಂಕಿ ರಾಣಿ' ಚಿತ್ರದ ನಾಯಕಿ ಐಶ್ವರ್ಯಾ. ಐಶ್ವರ್ಯಾ ಕೂಡ ಸೆಂಟಿಮೆಂಟ್ ನಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ದಾರೆ.

ಐಶೂಗೆ ಮೊದಲ ತಂಗಿಯ ಪಾತ್ರ

ಗ್ಲಾಮರಸ್ ಬ್ಯೂಟಿಯಾಗಿರೋ ಐಶೂಗೆ ಮೊದಲ ಬಾರಿಗೆ ಸೀರೆ ಉಡೋ ಪಾತ್ರ ಸಿಕ್ಕಿದೆ. ವಿಜಿಯನ್ನ ಅಣ್ಣ ಪಾತ್ರದಲ್ಲಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಮುದ್ದು ತಂಗಿ ಐಶ್ವರ್ಯಾ.

ಹಾಫ್ ಮೆಂಟ್ಲು ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ

ಇನ್ನೂ ಓದು ಮುಗಿಸದ ಈ ಕಾಲೇಜ್ ಬ್ಯೂಟಿ ಐಶೂ ಹೊಸಬರ 'ಹಾಫ್ ಮೆಂಟ್ಲು' ಸಿನಿಮಾದಲ್ಲಿ ಮುಖ್ಯ ಪಾತ್ರವೊಂದನ್ನ ಮಾಡಿದ್ದಾರೆ. ಈಗ ಕೋಬ್ರಾ ವಿಜಿಗೆ ಸೆಂಟಿಮೆಂಟ್ ಸಾಥ್ ಕೊಟ್ಟಿದ್ದಾರೆ.

ಅಣ್ಣನಿಗೆ ಎಣ್ಣೆ ತಿಕ್ಕಿ ಸ್ನಾನ ಮಾಡಿಸೋ ಮುದ್ದು ತಂಗಿ

ಅಣ್ಣನಿಗೆ ಎಣ್ಣೆ ತಿಕ್ಕಿ ಸ್ನಾನ ಮಾಡಿಸೋ ಮುದ್ದು ತಂಗಿಯಾಗಿ ಐಶ್ವರ್ಯಾ ಮಿಂಚ್ತಾರೆ. ಹಳ್ಳಿ ಹುಡ್ಗಿಯಾಗಿ ಮುಗ್ಧ ಪ್ರೀತಿಯನ್ನ ತೋರಿಸೋ ಚೆಲುವೆಯಾಗಿ ಮಿಂಚ್ತಾರೆ.

ತಂಗಿಗೆ ಚಿನ್ನದಂತಹಾ ಅಣ್ಣ ವಿಜಿ

ಸಿಂಹಾದ್ರಿ ಸಿನಿಮಾದಿಂದ ದುನಿಯಾ ವಿಜಯ್ ಕೂಡ ಶಿವಣ್ಣನ ಹಾಗೆ ಸ್ಯಾಂಡಲ್ ವುಡ್ ಅಣ್ಣನಾಗಿ ಕಾಣಿಸಿಕೊಳ್ಳಬಹುದು ಹಾಗಿದೆ ವಿಜಿಯ ಸೆಂಟಿಮೆಂಟ್ ಧಮಾಕಾ.

English summary
Here is the exclusive stills of Duniya Vijay's upcoming movie Simhadri. Viji plays a role of brother while Aishwarya as sister in the film. Simhadri is being produced by RS Gowda, under the banner Mega Hit Film. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada