For Quick Alerts
  ALLOW NOTIFICATIONS  
  For Daily Alerts

  'ಸಲಗ' ಬಳಿಕ ಶಿವರಾತ್ರಿಗೆ ದುನಿಯಾ ವಿಜಯ್ ಹೊಸ ಸಿನಿಮಾ: ನಟನೆ ಅಷ್ಟೇನಾ ಡೈರೆಕ್ಷನ್ ಮಾಡ್ತಾರಾ?

  |

  ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ವಿಜಯ್ ಅಧ್ಯಾಯ ಮುಗಿದೆ ಹೋಯ್ತು ಅನ್ನುವಂತ ಸ್ಥಿತಿ ಇತ್ತು. ದುನಿಯಾ ವಿಜಯ್ ಕೂಡ ಸಿನಿಮಾರಂಗದಿಂದ ಕೆಲ ಕಾಲ ದೂರ ಉಳಿದಿದ್ದರು. ಇನ್ನೇನು ಸಿನಿಮಾ ಮಾಡೋದೇ ಇಲ್ಲವೇನೊ ಅನ್ನುವಾಗಲೇ ದುನಿಯಾ ವಿಜಯ್ ತನ್ನ ಅಭಿಮಾನಿಗಳಿಗೆ 'ಸಲಗ' ತೋರಿಸಿದ್ದರು. ಹೆಚ್ಚು ಕಡಿಮೆ ಒಂದೂವರೆ ವರ್ಷ 'ಸಲಗ' ಸಿನಿಮಾ ರಿಲೀಸ್ ಆಗಲೇ ಇಲ್ಲ. ಕೊರೊನಾ ಹಾವಳಿಯಿಂದ ಈ ಸಿನಿಮಾ ಬಿಡುಗಡೆ ಸಾಧ್ಯವಾಗಿರಲಿಲ್ಲ. ಕೊನೆಗೂ ಚಿತ್ರ ತೆರೆಕಂಡಾಗ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿತ್ತು.

  ದುನಿಯಾ ವಿಜಯ್ ವೈಯುಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆ ಯಶಸ್ಸಿಗೆ ತಡೆಯೊಡ್ಡಿದ್ದವು. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭ ಮಾಡಬೇಕು ಅಂತಿದ್ದರೆ. ಹೊಸ ಪ್ರಯತ್ನಕ್ಕೆ ಕೈ ಹಾಕಬೇಕಿತ್ತು. ಆಗಲೇ ದುನಿಯಾ ವಿಜಯ್ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದರು. ಅದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದ ದುನಿಯಾ ವಿಜಯ್ ಚೊಚ್ಚಲ ಪ್ರಯತ್ನದಲ್ಲೆ ಗೆದಿದ್ದರು. ಈಗ ಅದೇ ಯಶಸ್ಸನ್ನು ಮುಂದುವರೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

   'ಜಯಮ್ಮನ ಮಗ' ಸಿನಿಮಾ ವೇಳೆನೇ ವಿಜಯ್ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ: ಭವಿಷ್ಯ ನುಡಿದಿದ್ದ ನಿರ್ದೇಶಕ ? 'ಜಯಮ್ಮನ ಮಗ' ಸಿನಿಮಾ ವೇಳೆನೇ ವಿಜಯ್ ಒಳ್ಳೆ ಡೈರೆಕ್ಟರ್ ಆಗ್ತೀಯಾ ಅಂದಿದ್ದೆ: ಭವಿಷ್ಯ ನುಡಿದಿದ್ದ ನಿರ್ದೇಶಕ ?

   ವಿಜಯ್ 28ನೇ ಸಿನಿಮಾ ಘೋಷಣೆ

  ವಿಜಯ್ 28ನೇ ಸಿನಿಮಾ ಘೋಷಣೆ

  'ಸಲಗ' ಗೆದ್ದ ಬಳಿಕ ದುನಿಯಾ ವಿಜಯ್ ಮುಂದಿನ ಸಿನಿಮಾ ಬಗ್ಗೆ ಸುಳಿವು ಇರಲಿಲ್ಲ. ವಿಜಯ್ ಆಯ್ಕೆ ಮಾಡಿಕೊಳ್ಳುವ ಮುಂದಿನ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲೇ ಕುತೂಹಲವಿತ್ತು. ಕಾತುರದಿಂದ ಕಾಯುತ್ತಿದ್ದ ವಿಜಯ್ ಅಭಿಮಾನಿಗಳಿಗೆ ಕೊನೆಗೂ ಸಹಿ ಸುದ್ದಿ ಸಿಕ್ಕಿದೆ. ಕರಿಚಿರತೆಯ 28ನೇ ಸಿನಿಮಾ ಘೋಷಣೆಯಾಗಿದೆ. ಫಸ್ಟ್ ಲುಕ್ ರಿಲೀಸ್ ಮಾಡದೆ ಹೋದರೂ ಕುತೂಹಲ ಸೃಷ್ಟಿಸುವ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಲಾಗಿದೆ.

  ಈ ಬಾರಿ ನಟನೆ ಅಷ್ಟೆನಾ?

  ಈ ಬಾರಿ ನಟನೆ ಅಷ್ಟೆನಾ?

  'ಸಲಗ' ಸಿನಿಮಾ ಮೂಲಕ ದುನಿಯಾ ವಿಜಯ್ ಗೆಲ್ಲಲೇ ಬೇಕಿತ್ತು. ಹೀಗಾಗಿ ನಟನೆ ಜೊತೆಗೆ ನಿರ್ದೇಶನಕ್ಕೂ ಕೈ ಹಾಕಿದ್ದರು. 'ಸಲಗ' ಗೆದ್ದ ಬಳಿಕ ದುನಿಯಾ ವಿಜಯ್ ಮತ್ತೆ ನಿರ್ದೇಶನಕ್ಕೆ ಇಳಿಯುತ್ತಾರಾ? ಎನ್ನುವ ಪ್ರಶ್ನೆ ಚಿತ್ರರಂಗದ ಮುಂದಿತ್ತು. ಈ ಪ್ರಶ್ನೆಗೆ ಸ್ವತ: ದುನಿಯಾ ವಿಜಯ್ ಕೂಡ ಉತ್ತರಿಸಿದೆ ಮೌನವಾಗಿದ್ದರು. ಕೊನೆಗೂ ಈಗ ಕುತೂಹಲಕ್ಕೆ ತೆರೆಬಿದ್ದಿದೆ. ದುನಿಯಾ ವಿಜಯ್ ಈ ಸಿನಿಮಾದಲ್ಲಿ ನಟಿಸುವುದಷ್ಟೇ ಅಲ್ಲದೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇನ್ನೂ ಟೈಟಲ್ ಅನೌನ್ಸ್ ಮಾಡದ ಈ ಚಿತ್ರ ವಿಜಯ್ ನಿರ್ದೇಶಿಸುತ್ತಿರುವ 2ನೇ ಸಿನಿಮಾ.

  ಮಹಾಶಿವರಾತ್ರಿ ದಿನ ಮಹಾ ಘೋಷಣೆ

  ಮಹಾಶಿವರಾತ್ರಿ ದಿನ ಮಹಾ ಘೋಷಣೆ

  ದುನಿಯಾ ವಿಜಯ್ ನಟನೆಯ 28ನೇ ಸಿನಿಮಾ ಹಾಗೂ ನಿರ್ದೇಶನದ ಎರಡನೇ ಚಿತ್ರದ ಟೈಟಲ್ ಮಹಾಶಿವರಾತ್ರಿಯಂದು ಘೋಷಣೆಯಾಗಲಿದೆ. ಈ ಸಿನಿಮಾವನ್ನು ಶಿವಣ್ಣ ನಟಿಸುತ್ತಿರುವ 'ಬೈರಾಗಿ' ಸಿನಿಮಾದ ನಿರ್ಮಾಪಕ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ರಕ್ತ ಕಲೆಗಳಾಗಿರುವ ಕೈ, ಯಮಹ ಆರ್‌ ಎಕ್ಸ್ 100 ಬೈಕ್ ಇರುವ ಅನೌನ್ಸ್‌ಮೆಂಟ್ ಪೋಸ್ಟರ್ ರಿಲೀಸ್ ಆಗಿದ್ದು, ಶಿವರಾತ್ರಿ ಹಬ್ಬಕ್ಕೆ ಹೆಚ್ಚಿನ ಮಾಹಿತಿ ಸಿಗಲಿದೆ.

  ಬಾಲಕೃಷ್ಣ ಸಿನಿಮಾ ಬಳಿಕ ಹೊಸ ಸಿನಿಮಾ

  ಬಾಲಕೃಷ್ಣ ಸಿನಿಮಾ ಬಳಿಕ ಹೊಸ ಸಿನಿಮಾ

  'ಸಲಗ' ಬಳಿಕ ದುನಿಯಾ ವಿಜಯ್‌ಗೆ ಆಫರ್‌ಗಳು ಹೆಚ್ಚಾಗಿವೆ. ಆದರೆ, ವಿಜಯ್ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ್ದರು. ಬಾಲಕೃಷ್ಣ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ದುನಿಯಾ ವಿಜಯ್ ತಮ್ಮ ಹೊಸ ಸಿನಿಮಾವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಈ ಶಿವರಾತ್ರಿಗೆ ಕೇವಲ ಟೈಟಲ್ ಘೋಷಣೆ ಮಾತ್ರ ಆಗಬಹುದು ಎನ್ನುತ್ತಿವೆ ಆಪ್ತವಲಯ.

  English summary
  Duniya Vijay starrer 28th and directed second movie will be launch title on Mahashivarathri. Bhairagi movie producer Krishna Sarthak will be producing the movie.
  Friday, February 25, 2022, 9:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X