For Quick Alerts
  ALLOW NOTIFICATIONS  
  For Daily Alerts

  ವಿವಾದದಲ್ಲಿ ಸಿಲುಕಿದ ಯೋಗರಾಜ್ ಭಟ್ಟರ 'ದನ ಕಾಯೋನು'

  By Suneetha
  |

  ಕನ್ನಡ ಚಿತ್ರರಂಗದಲ್ಲಿ ಟೈಟಲ್ ವಿವಾದ ಅನ್ನೋ ಸಮಸ್ಯೆ ನಿನ್ನೆ ಮೊನ್ನೆಯದಲ್ಲ ಸಾಮಾನ್ಯವಾಗಿ ಯಾವಾಗಲೂ ಈ ಸಮಸ್ಯೆ ತಲೆದೂರುತ್ತಲೇ ಇರುತ್ತದೆ. ಇದೀಗ ಟೈಟಲ್ ವಿವಾದದ ಬಿಸಿ ಭಟ್ಟರ 'ದನ ಕಾಯೋನು' ಚಿತ್ರಕ್ಕೆ ತಟ್ಟಿದೆ.

  ಹೌದು ಖ್ಯಾತ ನಿರ್ದೇಶಕ ಕಮ್ ಸಾಹಿತಿ ಯೋಗರಾಜ್ ಭಟ್ ಅವರು ಟೈಟಲ್ ರಿಜಿಸ್ಟರ್ ಮಾಡದೇ ದುನಿಯಾ ವಿಜಿ ಮತ್ತು ಪ್ರಿಯಾಮಣಿ ಕಾಣಿಸಿಕೊಂಡಿರುವ 'ದನ ಕಾಯೋನು' ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ಮಾತ್ರವಲ್ಲದೇ ಇತ್ತೀಚೆಗೆ ಆಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.[''ಥೂ....'ದನ ಕಾಯೋ' ದುನಿಯಾ ವಿಜಿನ ತಂದು'']

  ಇದೀಗ ಹೊಸದಾಗಿ ಗಾಂಧಿನಗರದಲ್ಲಿ ಎದ್ದಿರುವ ವಿವಾದ ಏನಪ್ಪಾ ಅಂದ್ರೆ 'ದನ ಕಾಯೋನು' ಎಂಬ ಹೆಸರನ್ನು ಸಲೀಂವುಲ್ಲಾ ಖಾನ್ ಎನ್ನುವವರು ಸುಮಾರು ಮೂರು ವರ್ಷಗಳ ಹಿಂದೆಯೇ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ರಿಜಿಸ್ಟರ್ ಮಾಡಿದ್ದರಂತೆ. ಆನಂತರ ನಿರ್ದೇಶಕ ಯೋಗರಾಜ್ ಭಟ್ಟರು ಅದೇ ಹೆಸರಿನಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ.[ತೆಲುಗಿನ 'ಅಖಿಲ್' ಸೋತಿದ್ದಕ್ಕೆ ಕನ್ನಡದ ಚಿತ್ರಗಳು ಬಲಿಪಶು ಆದ್ವಾ?]

  ಅಂದಹಾಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಸಲೀಂವುಲ್ಲಾ ಖಾನ್ ಅವರು ಮಾತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಿದ್ದಾರೆ.[ಚಿತ್ರಗಳು: ಭರ್ಜರಿಯಾಗಿ ದನ ಕಾಯುತ್ತಿರುವ ವಿಜಿ ಮತ್ತು ಪ್ರಿಯಾಮಣಿ..!]

  ಕಳೆದ ಎರಡು ವರ್ಷದ ಹಿಂದೆಯೇ ಟೈಟಲ್ ರಿಜಿಸ್ಟರ್ ಮಾಡಿಸಿರುವುದಾಗಿ ಹೇಳುವ ಸಲೀಂವುಲ್ಲಾ ಖಾನ್ ಅವರು ಎರಡು ಬಾರಿ ಟೈಟಲ್ ಕುರಿತಂತೆ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದು, ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರಿಗೆ ಮಂಡಳಿ ನೋಟಿಸ್ ಕೂಡ ನೀಡಿತ್ತು.[ಶೀರ್ಷಿಕೆ ವಿವಾದದಲ್ಲಿ ಭಟ್ರ 'ದನ ಕಾಯೋನು']

  ಆದರೆ ಇದೀಗ ಚಿತ್ರದ ಟೈಟಲ್ ಬಿಟ್ಟುಕೊಡುವಂತೆ ನಿರ್ಮಾಪಕ ಶ್ರೀನಿವಾಸ್ ಮತ್ತು ಯೋಗರಾಜ್ ಭಟ್ಟರು ಬೆದರಿಕೆ ಹಾಕಿದ್ದಾರೆ ಎಂದು ಸಲೀಂವುಲ್ಲಾ ಖಾನ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

  English summary
  Kannada Actor Duniya Vijay starrer Yogaraj Bhat directorial 'Dana Kayonu' is now under Title dispute. Sali-Ulla-Khan, who had registered the title has now given a complaint to KFCC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X