»   » ಸ್ಟಾರ್ ವಾರ್ ನಿಂದ ಹಿಂದೆ ಸರಿದ ದುನಿಯಾ ವಿಜಯ್

ಸ್ಟಾರ್ ವಾರ್ ನಿಂದ ಹಿಂದೆ ಸರಿದ ದುನಿಯಾ ವಿಜಯ್

Posted By:
Subscribe to Filmibeat Kannada

ತೆರೆಮೇಲೆ ವಿಲನ್ ಗಳನ್ನ ಬಗ್ಗು ಬಡಿಯುವ ದುನಿಯಾ ವಿಜಿ, ನಿಜ ಜೀವನದಲ್ಲಿ ಫೈಟಿಂಗ್ ನಿಂದ ದೂರ ಉಳಿದಿದ್ದಾರೆ. 'ಯಾರು ಏನೇ ಅಂದರೂ, ನಾನು ಸೈಲೆಂಟಾಗಿ ಸೈಡ್ ನಲ್ಲಿದ್ದು, ಎಲ್ಲರು ಹೋದ ಮೇಲೆ ಆರಾಮಾಗಿ ಬರುತ್ತೀನಿ ಅಂತಿದ್ದಾರೆ' ಕನ್ನಡದ ಬ್ಲ್ಯಾಕ್ ಕೋಬ್ರಾ.

ಇದ್ದಕ್ಕಿದಂತೆ ದುನಿಯಾ ವಿಜಿ ಹೀಗೆ ಆಲೋಚನೆ ಮಾಡಿರುವುದಕ್ಕೆ ಕಾರಣ 'ಜಾಕ್ಸನ್' ಸಿನಿಮಾ. ನಿನ್ನೆಯಷ್ಟೇ ಸುದ್ದಿಯಾಗಿದ್ದ ಪ್ರಕಾರ 'ಜಾಕ್ಸನ್' 2015 ರ ಮೊದಲ ಸಿನಿಮಾ ಆಗ್ಬೇಕಿತ್ತು. ಅರ್ಥಾತ್ 2015 ಜನವರಿಯ ಮೊದಲ ವಾರ 'ಜಾಕ್ಸನ್' ಅದ್ದೂರಿಯಾಗಿ ತೆರೆಮೇಲೆ ಬರ್ಬೇಕಿತ್ತು. [2015ರ ಮೊಟ್ಟಮೊದಲ ಕನ್ನಡ ಸಿನಿಮಾ ಯಾವುದು?]

Duniya Vijay starrer Jackson1

ಆದ್ರೀಗ 'ಜಾಕ್ಸನ್' ಹೊಸ ವರ್ಷದ ಬದಲು ಸಂಕ್ರಾಂತಿ ಹಬ್ಬಕ್ಕೆ ನಿಮ್ಮೆಲ್ಲರ ಮುಂದೆ ಬರ್ತಿದ್ದಾನೆ. ಅನಿವಾರ್ಯವಾಗಿ 'ಜಾಕ್ಸನ್' ಚಿತ್ರ ಬಿಡುಗಡೆ ಎರಡು ವಾರ ಮುಂದಕ್ಕೆ ಹೋಗಿದೆ. ಜನವರಿ 1 ಅಥವಾ 2 ರಂದು ಬಿಡುಗಡೆಯಾಗಬೇಕಿದ್ದ 'ಜಾಕ್ಸನ್', ಇದೀಗ ಜನವರಿ 15 ಕ್ಕೆ ತೆರೆಗೆ ಅಪ್ಪಳಿಸಲಿದೆ. ಇದೀಗಷ್ಟೇ ಸೆನ್ಸಾರ್ ಅಂಗಳದಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ 'ಜಾಕ್ಸನ್' ಚಿತ್ರತಂಡ, ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. [ದುನಿಯಾ ವಿಜಿ ಅಪ್ಪ, ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಓಪನರ್!]

ಎರಡು ವಾರ ಮುಂದಕ್ಕೆ ಹೋಗಲು ನಿರ್ಧರಿಸಿರುವುದಕ್ಕೆ ಕಾರಣ 'ಸ್ಟಾರ್ ವಾರ್' ಅನ್ನುತ್ತಿದೆ ಚಿತ್ರತಂಡ. ಕ್ರಿಸ್ಮಸ್ ಹಬ್ಬದ ಹೊತ್ತಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ತೆರೆಗೆ ಬಂದಿರುತ್ತೆ. ಹೊಸ ವರ್ಷಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ 'ಖುಷಿ ಖುಷಿಯಾಗಿ' ತೆರೆಮೇಲೆ ಬರುವುದಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿಬಿಟ್ಟಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Duniya Vijay starrer Jackson2

ಇಬ್ಬರ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ 'ಶಿವಂ' ಆಗಿ ಬರೋಕೆ ನಿರ್ಧರಿಸಿರುವ ಸುದ್ದಿಯಿದೆ. ''ಇಷ್ಟೆಲ್ಲಾ ಸ್ಪರ್ಧೆಯಿರುವ ಕಾರಣ, ನಾವು ಮುಂದಕ್ಕೆ ಹೋಗಬೇಕು ಅಂದುಕೊಂಡ್ವಿ'', ಅಂತ ಜಾಕ್ಸನ್ ಚಿತ್ರದ ನಿರ್ದೇಶಕ ಸನತ್ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದಾರೆ.

''ನಮ್ಮ ನಮ್ಮಲ್ಲೇ ಕಾಂಪಿಟೇಷನ್ ಇರಬಾರದು. ಸ್ಪರ್ಧೆಗೆ ಬಿದ್ದರೆ ಥಿಯೇಟರ್ ಸಮಸ್ಯೆ ಶುರುವಾಗುತ್ತೆ. ಜ.15 ನೇ ತಾರೀಖು ರಿಲೀಸ್ ಆದ್ರೆ, ನಮಗೆ ನರ್ತಕಿ ಚಿತ್ರಮಂದಿರ ಸಿಗುವುದು ಪಕ್ಕಾ ಅಂತಾಯ್ತು. ಹೀಗಾಗಿ ಜ.15ಕ್ಕೆ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದೀವಿ'', ಅಂತಾರೆ ನಿರ್ದೇಶಕ ಸನತ್. ['ದುನಿಯಾ ವಿಜಿ'ಯ ನಾನಾ ಮುಖಗಳು]

Duniya Vijay starrer Jackson3

ಸ್ಪರ್ಧೆಗಿಳಿದು ಲಾಸ್ ಅನುಭವಿಸುವ ಬದಲು ನಿಧಾನವಾಗಿ ಬಂದು ಕಲೆಕ್ಷನ್ ಮಾಡುವುದೇ ಉತ್ತಮ ಅಂತ 'ಜಾಕ್ಸನ್' ಚಿತ್ರತಂಡಕ್ಕೆ ಮನದಟ್ಟಾಗಿದೆ. ಅದರ ಪರಿಣಾಮವೇ ಈ ನಿರ್ಧಾರ. (ಫಿಲ್ಮಿಬೀಟ್ ಕನ್ನಡ)

English summary
Duniya Vijay starrer 'Jackson' is releasing on January 15th instead of January 1st. Sanath, Director of the movie said that the theatre issue and the competition from the Big Movies made them change Jackson's Arrival date.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada