For Quick Alerts
  ALLOW NOTIFICATIONS  
  For Daily Alerts

  ರಿಲೀಸ್ ಗೂ ಮುನ್ನ 'ಮಾಸ್ತಿ ಗುಡಿ'ಗೆ ಈ ಪಾಟಿ ಬೇಡಿಕೆನಾ?

  By Suneetha
  |

  ದುನಿಯಾ ವಿಜಯ್ ಮತ್ತು ನಾಗಶೇಖರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಮಾಸ್ತಿ ಗುಡಿ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಈ ಸಿನಿಮಾ ಎಲ್ಲರಿಗೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

  ವಿಭಿನ್ನ ಕಥಾಹಂದರವನ್ನೊಳಗೊಂಡ ಈ ಚಿತ್ರದಲ್ಲಿ ನಟಿ ಅಮೂಲ್ಯ, ನಟಿ ಕೃತಿ ಖರಬಂದ, ದುನಿಯಾ ವಿಜಯ್, ಅನಿಲ್, ಉದಯ್, ದೇವರಾಜ್, ರವಿಶಂಕರ್ ಗೌಡ ಮುಂತಾದವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.[ಐಸ್ ಕ್ರೀಂ ತಿನ್ನುತ್ತಿದ್ದ ಟಪೋರಿ ಅಮೂಲ್ಯ 'ಪ್ರೇತಾತ್ಮ'ವಾದಾಗ]

  ಸಂಜು ವೆಡ್ಸ್ ಗೀತಾ', 'ಮೈನಾ' ಮುಂತಾದ ಸಿನಿಮಾಗಳಿಂದ ಹಿಟ್ ನಿರ್ದೇಶಕ ಎನಿಸಿಕೊಂಡಿರುವ ನಟ ಕಮ್ ನಿರ್ದೇಶಕ ನಾಗಶೇಖರ್ ಅವರು, 'ಮಾಸ್ತಿ ಗುಡಿ' ಚಿತ್ರದ ಸಾರಥ್ಯ ವಹಿಸಿರುವುದರಿಂದ ಮತ್ತೆ ಸಿನಿ ಪ್ರಿಯರಲ್ಲಿ ಈ ಸಿನಿಮಾ ಬಹಳಷ್ಟು ಕಾತರತೆ ಹೆಚ್ಚಿಸಿದೆ.

  ಅಂದಹಾಗೆ ಇದೀಗ 'ಮಾಸ್ತಿ ಗುಡಿ' ಚಿತ್ರತಂಡದಿಂದ ಬ್ರೇಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಏನದು ಹೊಸ ನ್ಯೂಸ್, ನೋಡಲು ಮುಂದೆ ಓದಿ....

  ಆಡಿಯೋ ಹಕ್ಕು ಸೇಲ್

  ಆಡಿಯೋ ಹಕ್ಕು ಸೇಲ್

  ಬಹುತೇಕ ಚಿತ್ರೀಕರಣ ಮುಗಿಸಿರುವ 'ಮಾಸ್ತಿ ಗುಡಿ' ಚಿತ್ರತಂಡ ಆಡಿಯೋ ಬಿಡುಗಡೆ ಮಾಡುವ ಕಾರ್ಯದತ್ತ ಕಣ್ಣಾಡಿಸಿದೆ. ಇದೀಗ ಅರ್ಧ ಕೋಟಿ ರೂಪಾಯಿಗೆ 'ಮಾಸ್ತಿ ಗುಡಿ' ಚಿತ್ರದ ಆಡಿಯೋ ಹಕ್ಕು ಸೇಲ್ ಆಗಿದ್ದು, ಚಿತ್ರತಂಡಕ್ಕೆ ಹಾಲು ಕುಡಿದಷ್ಟು ಸಂತಸವಾಗಿದೆ.['ಜಾಗ್ವಾರ್' ಚಿತ್ರದ ಈ ಸುದ್ದಿ ಕೇಳಿದ್ರೆ, ನೀವು ತಲೆ ತಿರುಗಿ ಬೀಳ್ತೀರಾ!]

  ಯಾವ ಸಂಸ್ಥೆಗೆ ಸೇಲ್ ಆಯ್ತು

  ಯಾವ ಸಂಸ್ಥೆಗೆ ಸೇಲ್ ಆಯ್ತು

  'ಮಾಸ್ತಿ ಗುಡಿ' ಚಿತ್ರದ ಆಡಿಯೋ ಹಕ್ಕನ್ನು ಝೇಂಕಾರ್ ಮ್ಯೂಸಿಕ್ ಖರೀದಿ ಮಾಡಿದೆ. ಸಾಧು ಕೋಕಿಲ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ 'ಮಾಸ್ತಿ ಗುಡಿ' ಚಿತ್ರದ ಹಾಡುಗಳಿಗೆ ಕವಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಸಾಧು ಅವರು ಕಂಪೋಸ್ ಮಾಡಿದ ಹಲವು ಹಾಡುಗಳು ಹಿಟ್ ಆಗಿವೆ ಜೊತೆಗೆ ಕವಿರಾಜ್ ಅವರ ಸಾಹಿತ್ಯದಲ್ಲೂ ಒಂದು ವಿಶೇಷತೆ ಇರುತ್ತೆ, ಅಂತಿದ್ದಾರೆ ಝೇಂಕಾರ್ ಮ್ಯೂಸಿಕ್ ನ ಭರತ್ ಜೈನ್ ಅವರು.['ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ ಜೊತೆ ಅಮೂಲ್ಯ ಬೇಬಿ?]

  ಎಷ್ಟಕ್ಕೆ ಸೇಲ್ ಆಯ್ತು.?

  ಎಷ್ಟಕ್ಕೆ ಸೇಲ್ ಆಯ್ತು.?

  ಬರೋಬ್ಬರಿ ಹತ್ತತ್ತಿರ ಅರ್ಧ ಕೋಟಿ ರೂಪಾಯಿ, ಅಂದ್ರೆ ಸುಮಾರು 45 ಲಕ್ಷ ರೂಪಾಯಿಗೆ 'ಮಾಸ್ತಿ ಗುಡಿ' ಚಿತ್ರದ ಆಡಿಯೋ ಹಕ್ಕು ಸೇಲ್ ಆಗಿದೆ.

  45 ಲಕ್ಷಕ್ಕೆ ಹಾಡುಗಳ ಮಾರಾಟ ಆಗಲು ಕಾರಣ.?

  45 ಲಕ್ಷಕ್ಕೆ ಹಾಡುಗಳ ಮಾರಾಟ ಆಗಲು ಕಾರಣ.?

  ಈ ಹಿಂದೆ ನಾಗಶೇಖರ್ ನಿರ್ದೇಶನ ಮಾಡಿದ್ದ 'ಮೈನಾ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇನ್ನು ನಾಗಶೇಖರ್ ಅವರಿಗೆ ಹಾಡುಗಳ ಬಗ್ಗೆ ಒಳ್ಳೆ ಅಭಿರುಚಿ ಇದೆ. ಜೊತೆಗೆ 'ಮಾಸ್ತಿ ಗುಡಿ' ಚಿತ್ರದಲ್ಲೂ ಬಹಳ ವಿಭಿನ್ನವಾದ ಹಾಡುಗಳಿಗೆ. ಆದ್ದರಿಂದ ಭರತ್ ಜೈನ್ ಅವರು ಕಣ್ಣುಮುಚ್ಚಿ ಇಷ್ಟು ದೊಡ್ಡ ಮೊತ್ತ ಕೊಟ್ಟು ಹಾಡುಗಳನ್ನು ಖರೀದಿಸಿದ್ದಾರಂತೆ.

  'ಮುಂಗಾರು ಮಳೆ 2' ಹಾಡುಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ

  'ಮುಂಗಾರು ಮಳೆ 2' ಹಾಡುಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ

  ಇನ್ನು 'ಮುಂಗಾರು ಮಳೆ 2' ಚಿತ್ರದ ಹಾಡುಗಳಿಗಿಂತ ಹೆಚ್ಚಿನ ಮೊತ್ತಕ್ಕೆ 'ಮಾಸ್ತಿ ಗುಡಿ' ಸಿನಿಮಾದ ಹಾಡುಗಳು ಮಾರಾಟಗೊಂಡಿವೆ ಅನ್ನೋದು ಮತ್ತೊಂದು ವಿಶೇಷ. 'ಮುಂಗಾರು ಮಳೆ 2' ಹಾಡುಗಳೇ ಎಲ್ಲರಿಗೆ ಮೋಡಿ ಮಾಡಿತ್ತು. ಅಂದ ಮೇಲೆ ಇದೀಗ ಆ ಚಿತ್ರದ ಹಾಡುಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಈ ಚಿತ್ರದ ಹಾಡುಗಳು ಸೆಲ್ ಆಗಿವೆ, ಅಂದ್ರೆ ನೀವೇ ಲೆಕ್ಕ ಹಾಕಿ ಎಷ್ಟು ಚೆನ್ನಾಗಿರಬಹುದು 'ಮಾಸ್ತಿ ಗುಡಿ' ಹಾಡುಗಳು ಅಂತ.

  ಯಾವಾಗ ಆಡಿಯೋ ರಿಲೀಸ್.?

  ಯಾವಾಗ ಆಡಿಯೋ ರಿಲೀಸ್.?

  'ಸೂರ್ಯ ಚಂದ್ರ ಎರಡು ತಂದು, ನಿನ್ನ ಕಿವಿಗೆ ಇಡುವೆ ಒಡವೆ ಎಂದು' ಎನ್ನುವ ಹಾಡು ಇಡೀ ಚಿತ್ರದ ಹೈಲೈಟ್ ಅಂತೆ. ಈಗಾಗಲೇ 3 ಹಾಡುಗಳ ಚಿತ್ರೀಕರಣ ಮುಗಿದಿದ್ದು, ಇನ್ನೇನು 2 ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ 1, ವಿಶೇಷ ದಿನದಂದು ಆಡಿಯೋ ಬಿಡುಗಡೆ ಮಾಡಲು ನಾಗಶೇಖರ್ ಅವರು ಯೋಜನೆ ಹಾಕಿಕೊಂಡಿದ್ದಾರೆ.

  English summary
  Kannada Actor Duniya Vijay, Kannada Actress Kriti Kharbanda, Kannada Actress Amulya starrer Kannada Movie 'Maasti Gudi'. Audio rights is sold for record price (45 lakh) to Jhankar Music. The movie is directed by Nagashekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X