»   » ಅಮೂಲ್ಯ ಮದುವೆ ದಿನವೇ ಹುಲಿ ಬೇಟೆಯಾಡಲಿರುವ ದುನಿಯಾ ವಿಜಯ್

ಅಮೂಲ್ಯ ಮದುವೆ ದಿನವೇ ಹುಲಿ ಬೇಟೆಯಾಡಲಿರುವ ದುನಿಯಾ ವಿಜಯ್

Posted By:
Subscribe to Filmibeat Kannada

ಮೇ 12 ಸ್ಯಾಂಡಲ್ ವುಡ್ ನಲ್ಲಿ ವಿಶೇಷ ದಿನವಾಗಲಿದೆ. ಯಾಕಂದ್ರೆ, ಕನ್ನಡ ಚಿತ್ರರಂಗ ಆ ದಿನ ಎರಡು ಶುಭ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಒಂದೆಡೆ ಚೆಲುವಿನ ಚಿತ್ತಾರ ಹುಡುಗಿಯ ಮದುವೆ ನಡೆಯುತ್ತಿದ್ದರೇ, ಮತ್ತೊಂದೆಡೆ ಆ ನಟಿ ಅಭಿನಯದ ಚಿತ್ರ ಬಿಡುಗಡೆಯಾಗುತ್ತಿದೆ.[ಅಮೂಲ್ಯ-ಜಗದೀಶ್ ಮದುವೆ ದಿನಾಂಕ ಫಿಕ್ಸ್, ಮದುವೆ ಎಲ್ಲಿ?]

ಹೌದು, ಮೇ 12 ರಂದು ಗೋಲ್ಡನ್ ಕ್ವೀನ್ ಅಮೂಲ್ಯ ಹಾಗೂ ಜಗದೀಶ್ ಅವರ ವಿವಾಹ ಮಹೋತ್ಸವ ನಡೆಯಲಿದೆ. ಅದೇ ದಿನ ಅಮೂಲ್ಯ, ದುನಿಯಾ ವಿಜಯ್, ಕೃತಿ ಕರಬಂಧ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಮಾಸ್ತಿಗುಡಿ' ಥಿಯೇಟರ್ ಗೆ ಲಗ್ಗೆಯಿಡಲಿದೆ.

ಅಮೂಲ್ಯ ಮದುವೆ ಯಾವಾಗ? ಎಲ್ಲಿ? ಮತ್ತು 'ಮಾಸ್ತಿಗುಡಿ' ಚಿತ್ರದ ವಿಶೇಷತೆಗಳೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ....

ಅಮೂಲ್ಯ ಮದುವೆ ದಿನ 'ಮಾಸ್ತಿಗುಡಿ'

ಇಬ್ಬರು ಖಳನಾಯಕರ ದುರಂತ ಸಾವಿಗೆ ಕಾರಣವಾದ 'ಮಾಸ್ತಿಗುಡಿ' ಸಿನಿಮಾ ಮೇ 12 ರಂದು ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ, ಅದೇ ದಿನ 'ಮಾಸ್ತಿಗುಡಿ' ಚಿತ್ರದ ನಾಯಕಿ ಅಮೂಲ್ಯ ಅವರು ಮದುವೆ ಕೂಡ ಜರುಗಲಿದೆ.

ಮದುವೆ ಎಲ್ಲಿ? ಯಾವಾಗ?

ಮೇ 11 ರಂದು ಅಮೂಲ್ಯ ಮದುವೆಗೆ ಚಪ್ಪರಶಾಸ್ತ್ರ ನಡೆಯಲಿದ್ದು, 12 ರಂದು ಮಂಡ್ಯ ಜಿಲ್ಲೆ ಬೆಳ್ಳೂರು ಕ್ರಾಸ್ ನ ಶ್ರೀ ಆದಿಚುಂಚನಗಿರಿಯಲ್ಲಿ ಮುಹೂರ್ತ ನೆರವೇರಲಿದೆ. ಈಗಾಗಲೇ ಮೊದಲ ಪತ್ರಿಕೆಯನ್ನು ದೇವರಿಗೆ ಅರ್ಪಿಸಿ, ಬಂಧು-ಮಿತ್ರರನ್ನ ಆಹ್ವಾನಿಸುತ್ತಿದ್ದಾರೆ.[ಅಮೂಲ್ಯ-ಜಗದೀಶ್ ಮದುವೆ ದಿನಾಂಕ ಫಿಕ್ಸ್, ಮದುವೆ ಎಲ್ಲಿ?]

'ಮಾಸ್ತಿಗುಡಿ' ಚಿತ್ರದಲ್ಲಿ ಅಮೂಲ್ಯ ನಾಯಕಿ

'ಮಾಸ್ತಿ ಗುಡಿ' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಗೋಲ್ಡನ್ ಕ್ವೀನ್ ಅಮೂಲ್ಯ ಮೊದಲ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡನೇ ನಾಯಕಿಯಾಗಿ ಕೃತಿ ಕರಬಂಧ ಅಭಿನಯಿಸಿದ್ದಾರೆ.

'ಮಾಸ್ತಿಗುಡಿ' ರಿಯಲ್ ಕಥೆ

'ಮಾಸ್ತಿ ಗುಡಿ' ನೈಜ ಘಟನೆ ಆಧಾರಿತ ಸಿನಿಮಾ. ಆ ಸಂದರ್ಭದಲ್ಲಿ ಬಿಳಿಗಿರಿ ರಂಗನ ತಿಟ್ಟು ಕಾಡಿನಲ್ಲಿ ಹುಲಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದವಂತೆ. ಅದರ ಹಿಂದಿನ ರಹಸ್ಯವೇನು ಮತ್ತು ಅಲ್ಲಿ ಏನೇನಾಯಿತು ಎಂಬ ವಿಷಯಗಳನ್ನು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದೆ ಚಿತ್ರತಂಡ.['ಮಾಸ್ತಿಗುಡಿ' ಚಿತ್ರದ ಅಸಲಿ ಕಥೆ ಮತ್ತು ಚಿತ್ರಕಥೆ ಏನು?]

ಮೂರು ಶೇಡ್ ಗಳಲ್ಲಿ ವಿಜಯ್

'ಮಾಸ್ತಿ ಗುಡಿ' ಚಿತ್ರದಲ್ಲಿ ದುನಿಯಾ ವಿಜಯ್ ಮೂರು ವಿಭಿನ್ನ ಶೇಡ್ ಗಳಲ್ಲಿ ಮಿಂಚಲಿದ್ದಾರೆ. 25ರ ಯುವಕ, 35ರ ಮಧ್ಯ ವಯಸ್ಕ ಹಾಗೂ 75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಯ್ ಬಣ್ಣ ಹಚ್ಚಿದ್ದಾರೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಬೇಟೆ ಆಡಿದ ವಿಜಯ್ 'ಮಾಸ್ತಿಗುಡಿ']

ಅದ್ದೂರಿ ಮೇಕಿಂಗ್

ನಾಗರಹೊಳೆ, ದಾಂಡೇಲಿ ಸೇರಿದಂತೆ ಬಹುತೇಕ ಕಾಡಿನಲ್ಲೇ ಚಿತ್ರೀಕರಣ ಮುಗಿಸಿರುವ 'ಮಾಸ್ತಿ ಗುಡಿ' ಮೇಕಿಂಗ್ ಅದ್ದೂರಿಯಾಗಿದೆ.['ಮಾಸ್ತಿಗುಡಿ' ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!]

ಕಾಡುವ ಖಳನಾಯಕರು

'ಮಾಸ್ತಿ ಗುಡಿ' ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್. ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನಿಲ್ ಮತ್ತು ಉದಯ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿದ್ದರು. ಆದ್ರೆ, ದುರದೃಷ್ಟವಶಾತ್ ಈ ಇಬ್ಬರ ಇಲ್ಲದನೇ ಈಗ ಸಿನಿಮಾ ತೆರೆಕಾಣುತ್ತಿದೆ.

ದೊಡ್ಡ ಕಲಾವಿದರು

ದುನಿಯಾ ವಿಜಯ್ ಅವರ ಬಹುತೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ರಂಗಾಯಣ ರಘು, 'ಮಾಸ್ತಿಗುಡಿ' ಚಿತ್ರದಲ್ಲೂ ಅಭಿನಯಿಸಿದ್ದಾರೆ. ಇನ್ನುಳಿದಂತೆ ನಟ ದೇವರಾಜ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಸುಹಾಸಿನಿ ಕೂಡ 'ಮಾಸ್ತಿಗುಡಿ'ಗೆ ಸಾಥ್ ಕೊಟ್ಟಿದ್ದು, ರವಿಶಂಕರ್ ಗೌಡ, ಬುಲೆಟ್ ಪ್ರಕಾಶ್ ಕೂಡ ತಾರಬಳಗದಲ್ಲಿದ್ದಾರೆ.

ನಾಗಶೇಖರ್ ಆಕ್ಷನ್ ಕಟ್

'ಸಂಜು ವೆಡ್ಸ್ ಗೀತಾ', 'ಮೈನಾ' ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ನಾಗಶೇಖರ್, 'ಮಾಸ್ತಿಗುಡಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ.

ಸಾಧುಕೋಕಿಲಾ ಸಂಗೀತ

ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, 'ಮಾಸ್ತಿ ಗುಡಿ' ಚಿತ್ರಕ್ಕೆ ಸಾಧುಕೋಕಿಲ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಕವಿರಾಜ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿದ್ದು, ಸೂಪರ್ ಹಿಟ್ ಎನಿಸಿಕೊಂಡಿದೆ.

ಸಾಹಸ ದೃಶ್ಯಗಳ ಅಬ್ಬರ

ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದು, ಒಟ್ಟು 6 ಫೈಟ್ ಗಳಿವೆ. ಒಂದಕ್ಕಿಂತ ಒಂದು ಫೈಟ್ ಥ್ರಿಲ್ಲಿಂಗ್ ಆಗಿದ್ದು, ಕೇವಲ ಸ್ಟಂಟ್ಸ್ ಗಳಿಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಕೆಪಿಎಸ್ ಕಂಬೈನ್ಸ್ ಅಡಿಯಲ್ಲಿ ಸುಂದರ್ ಪಿ ಗೌಡ್ರು ಹಾಗೂ ಖಳ ನಟ ಅನಿಲ್ ಕುಮಾರ್ ನಿರ್ಮಾಣ ಮಾಡಿದ್ದು, ಸತ್ಯ ಹೆಗಡೆ ಅವರ ಛಾಯಗ್ರಹಣ ಚಿತ್ರಕ್ಕಿದೆ.

English summary
Nagashekar Directorial, Duniya Vijay Starrer Kannada Movie 'Maastigudi' is all set to release on May 12th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada