»   » ವರಮಹಾಲಕ್ಷ್ಮಿ ಹಬ್ಬಕ್ಕಿಲ್ಲ ದುನಿಯಾ ವಿಜಿ 'RX ಸೂರಿ'

ವರಮಹಾಲಕ್ಷ್ಮಿ ಹಬ್ಬಕ್ಕಿಲ್ಲ ದುನಿಯಾ ವಿಜಿ 'RX ಸೂರಿ'

Posted By:
Subscribe to Filmibeat Kannada

ಈಗಾಗಲೇ ಜಗಜ್ಜಾಹೀರಾದಂತೆ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅಭಿನಯದ 'RX ಸೂರಿ' ಸಿನಿಮಾ ಇದೇ ಶುಕ್ರವಾರ, ಅಂದ್ರೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಕಾಣ್ಬೇಕಿತ್ತು.

ಆದ್ರೆ, ಈ ವಾರದ ಬದಲು ಮುಂದಿನ ವಾರ (ಸೆಪ್ಟೆಂಬರ್ 4) ರಂದು 'RX ಸೂರಿ' ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ನಿರ್ಮಾಪಕರು ಇಂತಹ ದಿಢೀರ್ ನಿರ್ಧಾರ ಕೈಗೊಂಡಿರುವುದಕ್ಕೆ ಕಾರಣ ಥಿಯೇಟರ್ ಗಳ ಅಭಾವ. [ವರಮಹಾಲಕ್ಷ್ಮೀ ಹಬ್ಬಕ್ಕೆ ಬೈಕ್ ಏರಿ ಬರ್ತಾರೆ 'ಆರ್.ಎಕ್ಸ್ ಸೂರಿ']


rx soori

ಇದೇ ವಾರ ದ್ವಾರಕೀಶ್ ನಿರ್ಮಾಣದ 'ಆಟಗಾರ' ಸಿನಿಮಾ ತೆರೆಗೆ ಬರುತ್ತಿದೆ. ಜೊತೆಗೆ ಈಗಾಗಲೇ ರಿಲೀಸ್ ಆಗಿರುವ 'ಉಪ್ಪಿ-2' ಮತ್ತು 'ಬುಗುರಿ' ಸಿನಿಮಾಗಳು ಥಿಯೇಟರ್ ಗಳಲ್ಲಿ ಗಟ್ಟಿಯಾಗಿ ನೆಲೆಯೂರಿವೆ. ಹೀಗಾಗಿ 'RX ಸೂರಿ'ಗೆ ನಿರೀಕ್ಷಿಸಿದಷ್ಟು ಚಿತ್ರಮಂದಿರಗಳು ಸಿಗುತ್ತಿಲ್ಲ. [ಮಾನವೀಯತೆ ಮೆರೆದ ದುನಿಯಾ ವಿಜಯ್ 'RX ಸೂರಿ' ಚಿತ್ರತಂಡ]


ಮುಂದಿನ ವಾರ ಹೆಚ್ಚು ಪ್ರಮಾಣದ ಚಿತ್ರಮಂದಿರಗಳು ಸಿಗುವ ಲಕ್ಷಣಗಳು ಇರುವುದರಿಂದ ಒಂದು ವಾರ 'RX ಸೂರಿ' ಸಿನಿಮಾ ಮುಂದಕ್ಕೆ ಹೋಗಿದೆ. ರಿಯಲ್ ರೌಡಿಯೊಬ್ಬರ ಸುತ್ತ ಹೆಣೆದಿರುವ ಕಥೆ 'RX ಸೂರಿ'. [ದುನಿಯಾ ವಿಜಿ 'ಆರ್ ಎಕ್ಸ್' ಸೂರಿ ಜಬರ್ದಸ್ತ್ ಟ್ರೈಲರ್ ಔಟ್]


ದುನಿಯಾ ವಿಜಯ್ ಜೊತೆ ಆಕಾಂಕ್ಷ ಜೋಡಿಯಾಗಿ ನಟಿಸಿರುವ ಸಿನಿಮಾ ಇದು. ಕೆ.ಎ.ಸುರೇಶ್ ನಿರ್ಮಾಣದ ಶ್ರೀಜೈ ನಿರ್ದೇಶನದ 'RX ಸೂರಿ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ.....


rx soori
English summary
Kannada Actor Duniya Vijay starrer 'RX Soori' movie release is postponed for week due to unavailability of theaters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada